ತಾಲ್ಲೂಕು ಎಸ್‌ಡಿಎಂಸಿ ಉಪಾಧ್ಯಕ್ಷರಾಗಿ ಕೋರಿ ಯೋಗೀಶ್
ಹೊನ್ನಾಳಿ: ಹೊನ್ನಾಳಿ ತಾಲೂಕು ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಸಮನ್ವಯ ಸಮಿತಿ ಉಪಾಧ್ಯಕ್ಷರನ್ನಾಗಿ ಕೋರಿ ಯೋಗೀಶ್ ಕುಳಗಟ್ಟೆ ಇವರನ್ನು ನೇಮಕ ಮಾಡಲಾಗಿದೆ ಎಂದು ಎಸ್.ಡಿ.ಎಂ.ಸಿ. ತಾಲೂಕು ಅಧ್ಯಕ್ಷ ಎ.ಎಸ್. ಶಿವಲಿಂಗಪ್ಪ ತಿಳಿಸಿದರು.
ತಾಲೂಕಿನ ಸಾಸ್ವೆಹಳ್ಳಿ ಕೆ.ಪಿ.ಎಸ್. ಶಾಲೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಸಾಸ್ವೆಹಳ್ಳಿ ಹೋಬಳಿಯ ಕುಳಗಟ್ಟೆ ಗ್ರಾಮ ದವರಾದ ಕೋರಿ ಯೋಗೀಶ್ ಕುಳಗಟ್ಟೆ ಅವರ ಸಮಾಜಮುಖಿ ಕೆಲಸಗಳನ್ನು ಗುರುತಿಸಿ ಇವರಿಗೆ ಈ ಸ್ಥಾನ ನೀಡಲಾಗಿದೆ ಎಂದರು.
ಇವರು ಶಿಕ್ಷಣ ಕ್ಷೇತ್ರದಲ್ಲಿ ೧೫ ವರ್ಷಗಳ ಸತತ ಸೇವೆಯನ್ನು ಸಲ್ಲಿಸಿದ್ದು ಜೊತೆಗೆ ಪತ್ರಕರ್ತ ಸೇರಿದಂತೆ ಹಲವಾರು ಸಂಘ- ಸಂಸ್ಥೆಗಳಲ್ಲಿ ಸಕ್ರೀಯವಾಗಿ ಸೇವೆ ಸಲ್ಲಿಸುತ್ತಿzರೆ ಎಂದು ಆಯ್ಕೆ ಪ್ರಕ್ರಿಯೆ ಬಗ್ಗೆ ವಿವರಿಸಿದರು.
ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಕೋರಿ ಯೋಗೀಶ್ ಕುಳಗಟ್ಟೆ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿದರೆ ಪೋಷಕರ ಸ್ಥಾನ-ಮಾನ ಕಡಿಮೆಯಾಗುತ್ತದೆ ಎಂದು ಪೋಷಕರು ತಪ್ಪು ತಿಳುವಳಿಕೆಯಿಂದ ಕೂಡಿzರೆ. ಈ ತಪ್ಪು ಗ್ರಹಿಕೆಯಿಂದ ಹೊರಬರ ಬೇಕು ಎಂದು ಪೋಷಕರಲ್ಲಿ ಮನವಿ ಮಾಡಿದರು.
ರಾಜ್ಯ ಎಸ್.ಡಿ.ಎಂ.ಸಿ. ಸಂಘಟನಾ ಕಾರ್ಯದರ್ಶಿ ಎಲ್. ರುದ್ರನಾಯ್ಕ ಮಾತಾನಾಡಿ ಸರ್ಕಾರಿ ಶಾಲೆಗಳು ಉಳಿದು ಬೆಳೆಯಬೇಕು ಖಾಸಗಿ ಶಾಲೆಗಳ ಪೈಪೋಟಿಯಿಂದ ಆಯಾ ಗ್ರಾಮದ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರುವಂತೆ ಮಾಡಬೇಕು ಶಾಲೆಗಳಲ್ಲಿ ಸಿಗುವ ಉಚಿತ ಪಠ್ಯ ಪುಸ್ತಕ, ಮಧ್ಯಾಹ್ನದ ಬಿಸಿ ಊಟ, ಶೂ ಭಾಗ್ಯ, ಸ್ಕಾಲರ್ ಶಿಪ್ ಬಗ್ಗೆ ಜನರಲ್ಲಿ ಜಾಗೃತಿಯನ್ನು ಎಸ್.ಡಿ.ಎಂ.ಸಿ. ಸದಸ್ಯರು ಮೂಡಿಸಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಸದಸ್ಯರಾದ ರಂಜಿತ ಉಜ್ಜಿನಮಠ, ಶಿವಮೂರ್ತಿ, ಮಲ್ಲಿಕಾರ್ಜುನ್, ಶಿಕ್ಷಕರಾದ ಈಶ್ವರಪ್ಪ, ಪದ್ಮಶ್ರೀ, ಅನುಷ ಮತ್ತಿತರರು ಉಪಸ್ಥಿತರಿದ್ದರು