ಸಮಾಜದ ಋಣವನ್ನು ತೀರಿಸಿ: ನಾರಾಯಣರಾವ್
ಶಿವಮೊಗ್ಗ: ವಿದ್ಯಾಥಿಗಳು ಸಮಾಜದ ಋಣವನ್ನು ತೀರಿಸುವ ಕೆಲಸವನ್ನು ಮಾಡಬೇಕೆಂದು ಎನ್ ಇ ಎಸ್ ಸಂಸ್ಥೆಯ ಅಧ್ಯಕ್ಷ ಜಿ. ಎಸ್. ನಾರಾಯಣರಾವ್ ಹೇಳಿ ದರು.
ಎಟಿಎನ್‌ಸಿಸಿ ಕಾಲೇಜಿನಲ್ಲಿ ಶುಕ್ರವಾರ ಜರುಗಿದ ನೇತ್ರದಾನದ ಬಗ್ಗೆ ಉಪನ್ಯಾಸ ಮತ್ತು ವಿವಿ ಮಟ್ಟದಲ್ಲಿ ಎನ್ ಎಸ್ ಎಸ್ ಪ್ರಶಸ್ತಿ ಪಡೆದವರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎನ್‌ಎಸ್ ಎಸ್ ಮೂಲಕ ವಿದ್ಯಾರ್ಥಿಗಳು ಭವ್ಯ ಭವಿಷ್ಯವನ್ನು ಕಟ್ಟಿಕೊಳ್ಳಬೇಕು. ಸೇವಾ ಸಂಕಲ್ಪ ಮಾಡಬೇಕು. ಗ್ರಾಮಾಂತರದಲ್ಲಿ ಶಿಬಿರ ಮಾಡುವ ಮೂಲಕ ಅಲ್ಲಿನ ಜನರ ಜೀವನ, ಅವರ ಸ್ಥಿತಿ-ಗತಿ, ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳ ಬೇಕು. ವಿದ್ಯಾರ್ಥಿ ಜೀವನದ ನಂತರ ನಮ್ಮ ಕಾಲ ಮೇಲೆ ನಾವು ನಿಂತಾಗ ಸಮಾಜದ ಋಣ ತೀರಿ ಸುವ ಕೆಲಸ ಮಾಡಬೇಕು ಎಂದರು.
ಕಣ್ಣು ದಾನ ಮಾಡುವ ಮೂಲಕ ಕತ್ತಲೆಯಲ್ಲಿರುವವರಿಗೆ ಬೆಳಕು ಕೊಡಬೇಕು. ಕತ್ತಲೆ ಅಂದರೆ ಭಯ. ಬೆಳಕು ಎಂದರೆ ಧೈರ್‍ಯ. ಇನ್ನೊಬ್ಬರ ಬಾಳು ಬೆಳಗಲು ಕಣ್ಣು ಬೇಕು. ನೇತ್ರದಾನದಂತಹ ಮಹಾನ್ ಕಾರ್‍ಯದಲ್ಲಿ ಎಲ್ಲರೂ ಭಾಗಿಯಾಗಬೇಕು. ಇನ್ನೊಬ್ಬರಿಗೆ ಬೆಳಕು ಕೊಡುವುದು ದೊಡ್ಡ ಕೆಲಸ. ಕೇವಲ ಮಾತನಾಡುವುದನ್ನೇ ಸಾಧನೆ ಎಂದುಕೊಳ್ಳದೆ ಇಂತಹ ಮಹತ್ತರ ಕೆಲಸ ಮಾಡಿ ನಮ್ಮ ತನವನ್ನು ಪ್ರಚುರಪಡಿಸಿಕೊಳ್ಳ ಬೇಕು ಎಂದರು.
ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಪ್ರೊ. ಕೆ. ಎ. ವಿಷ್ಣು ಮೂರ್ತಿ ಮಾತನಾಡಿ, ಇಂದಿನ ಮಕ್ಕಳಿಗೆ ಯಾವ ವಿಷಯದಲ್ಲೂ ಆಸಕ್ತಿ ಇಲ್ಲ. ಮೊಬೈಲ್ ಅವರ ಜೀವನವಾಗಿದೆ. ಅದರ ಮೂಲಕ ಭಾಷೆಯ ಅಂದವನ್ನು ಹಾಳು ಗೆಡವುತ್ತಿzರೆ. ಪರೀಕ್ಷೆಯಲ್ಲೂ ಮೊಬೈಲ್ ಭಾಷೆಯ ಬಳಕೆಯನ್ನೇ ಮಾಡುತ್ತಿzರೆ. ಇದನ್ನೆಲ್ಲ ತೊರೆದು ನಮ್ಮ ಮಾತೃಭಾಷೆ ಅಥವಾ ರಾಷ್ಟ್ರಭಾಷೆಯಲ್ಲಿ ಪ್ರೌಢಿಮೆ ಬೆಳೆಸಿಕೊಳ್ಳಬೇಕು ಎಂದರಲ್ಲದೆ, ಎನ್ ಎಸ್ ಎಸ್ ಬದುಕು ಕಟ್ಟಿಕೊಡುತ್ತದೆ. ನಮ್ಮಲ್ಲಿ ಪ್ರಾಮಾಣಿಕತೆ, ಸಮಯ ಪ್ರe, ಕ್ರಿಯಾಶೀಲತೆ ಮತ್ತು ಸರಳ ಜೀವನವನ್ನು ಕಲಿಸುತ್ತದೆ. ಎನ್ನೆಸ್ಸೆಸ್ ಸೇರುವ ಮೂಲಕ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.
ಶಂಕರ ಕಣ್ಣಿನ ಆಸ್ಪತ್ರೆಯ ಮುಖ್ಯ ವ್ಯವಸ್ಥಾಪಕಿ ಗಾಯತ್ರಿ ಶಾಂತಾರಾಮ ಮಾತನಾಡಿ, ನೇತ್ರದಾನದ ಬಗ್ಗೆ ಹೆಚ್ಚೆಚ್ಚು ಜನರನ್ನು ಪ್ರೋತ್ಸಾಹಿಸಬೇಕಿದೆ. ವಿದ್ಯಾಥಿಗಳು ಶಾಲಾ-ಕಾಲೇಜು ಗಳಲ್ಲಿ, ತಮ್ಮ ಮಿತೃವೃಂದದಲ್ಲಿ, ಗ್ರಾಮಗಳಲ್ಲಿ ಈ ಬಗ್ಗೆ ಬೆಳಕು ಚೆಲ್ಲಬೇಕು. ನೇತ್ರದಾನ ಎನ್ನು ವುದು ಒಂದು ಮಹಾಕಾರ್‍ಯವಾ ಗಿದ್ದು, ಶಂಕರ ಕಣ್ಣಿನ ಆಸ್ಪತ್ರೆ ಸುಮಾರು ೩ ಸಾವಿರ ಜನರಿಗೆ ಕಣ್ಣು ನೀಡಿದೆ. ನೇತ್ರದಾನ ಮಾಡುವ ವರು ಹೆಚ್ಚಿದರೆ ಬೆಳಕು ಪಡೆಯು ವವರ ಸಂಖ್ಯೆಯೂ ಹೆಚ್ಚ್ಚುತ್ತದೆ. ನಟ ದಿವಂಗತ ಪುನೀತ್ ರಾಜಕು ಮಾರ್ ಅವರು ನೇತ್ರದಾನ ಮಾ ಡಿದ ನಂತರ ಈಗ ನೇತ್ರದಾನಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದರು.
ಈ ಸಂದರ್ಭದಲ್ಲಿ ಎನ್ನೆಸ್ಸೆಸ್ ಪ್ರಶಸ್ತಿ ಪಡೆz ಪ್ರೊ. ಜಗದೀಶ್ ಅವರನ್ನು ಅತಿಥಿಗಳು ಅಭಿನಂದಿಸಿ ದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್‍ಯೆ ಪ್ರೊ. ಪಿ. ಆರ್. ಮಮತಾ ವಹಿಸಿದ್ದರು. ವೇದಿಕೆ ಯಲ್ಲಿ ನಿವೃತ್ತ ಪ್ರಾಂಶುಪಾಲ ಎಚ್.ಎಂ. ಸುರೇಶ್, ಚೇಂಬರ್ ಆಫ್ ಕಾಮರ್ಸಿನ ಸಹಕಾರ್‍ಯದರ್ಶಿ ಜಿ. ವಿಜಯಕುಮಾರ್, ಕಾಲೇಜಿನ ಎನ್ನೆಸ್ಸೆಸ್ ಅಧಿಕಾರಿಗಳಾದ ಪ್ರೊ. ಜಗದೀಶ್ ಮತ್ತು ಪ್ರೊ. ಕೆ. ಎಂ ನಾಗರಾಜ ಮೊದಲಾದವರು ಉಪಸ್ಥಿತರಿದ್ದರು.