ಕುವೆಂಪು ವಿವಿ ಅಂತರ ಕಾಲೇಜು ಪವರ್ ಲಿಫ್ಟಿಂಗ್‌ನಲ್ಲಿ ಭದ್ರಾವತಿ ಸರ್ ಎಂ.ವಿ. ಸರ್ಕಾರಿ ಕಾಲೇಜ್‌ಗೆ ಸಮಗ್ರ ಪ್ರಶಸ್ತಿ

ಭದ್ರಾವತಿ: ನಗರದ ಸರ್ ಎಂ.ವಿ. ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿಧ್ಯಾರ್ಥಿ ಗಳು ಕುವೆಂಪು ವಿವಿ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ಭಾರ ಎತ್ತುವ ಮತ್ತು ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಾಲೇಜಿನ ೨೫ ವಿಧ್ಯಾರ್ಥಿಗಳು ಭಾಗವಹಿಸಿ ಸಮಗ್ರ ಪ್ರಶಸ್ತಿಯನ್ನು ಪಡೆದಿzರೆ.
ತರೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸ್ಪಧೆಯಲ್ಲಿ ಭಾರ ಎತ್ತುವ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಸುರೇಶ್ ನಾಯ್ಕ್ ದ್ವೀತಿಯ, ಲಿಖಿತ್ ವಿ, ಭರತ್ ಕುಮಾರ್, ಮನು ಮಾಂತೇರೂ ದ್ವಿತೀಯ ಸ್ಥಾನ, ಮಹಿಳೆಯ ವಿಭಾಗದಲ್ಲಿ ಕೆ.ಅನಿತಾ ತೃತಿಯ ಸ್ಥಾನ, ಹೆಚ್.ರಕ್ಷಿತ, ವಿ ಅರ್ಚನ ಪ್ರಥಮ ಸ್ಥಾನ ಗಳಿಸಿzರೆ.
ಪವರ್ ಲಿಫ್ಟಿಂಗ್ ಪುರುಷರ ವಿಭಾಗದಲ್ಲಿ ಇಬ್ರಾಹಿಂ, ಮನು ಮಾಂತೇರೂ, ಕೆ.ಧನುಷ್ ತೃತೀಯ ಸ್ಥಾನ, ಮಹಳೆಯರ ವಿಭಾಗದಲ್ಲಿ ವಿ.ಅರ್ಚನ ಪ್ರಥಮ, ಹೆಚ್.ರಕ್ಷಿತ ತೃತಿಯ ಸ್ಥಾನಗಳಿಸಿzರೆ.
ಪವರ್ ಲಿಫ್ಟಿಂಗ್ ಮತ್ತು ಭಾರ ಎತ್ತುವ ಸ್ಪರ್ಧೆಯಲ್ಲಿ ಪುರುಷರ ಸಮಗ್ರ ಪ್ರಶಸ್ತಿ, ಮಹಿಳೆಯರ ಭಾರ ಎತ್ತುವ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ ಪಡೆದು ಕಾಲೇಜಿಗೆ ಕೀರ್ತಿ ತಂದಿzರೆ. ಕಾಲೇಜಿನ ಪ್ರಾಂಶುಪಾಲ ಬಿ.ಎಂ.ನಾಸೀರ್ ಖಾನ್, ಕ್ರೀಡಾ ವಿಭಾದ ಮುಖ್ಯಸ್ಥ ಡಾ.ಹೆಚ್.ಎಸ್.ಶಿವರುದ್ರಪ್ಪ, ದ್ಯಹಿಕ ಶಿಕ್ಷಣ ವಿಭಾಗದ ಉಪನ್ಯಾಸಕ ಶಫಿ, ಎಲ್. ಯೋಗೇಶ್, ಜಿ.ಎನ್. ದೇವರಾಜ್ ಅರಸ್, ಪಿ.ಎ. ದಿಲೀಪ್, ಮತ್ತು ಅಧ್ಯಾಪಕ ವೃಂದ ಹಾಗು ಕಾಲೇಜಿನ ಸಿಬ್ಬಂದಿಗಳು ಶುಭ ಹಾರೈಸಿzರೆ.