ರಸ್ತೆ ಸುರಕ್ಷತೆ ಕುರಿತು ಮಕ್ಕಳಲ್ಲಿ ಅರಿವು ಆಗತ್ಯ…

ಶಿವಮೊಗ್ಗ: ಪೋಷಕರು ರಸ್ತೆ ಸುರಕ್ಷತಾ ನಿಯಮಗಳನ್ನು ತಮ್ಮ ಮಕ್ಕಳಿಗೆ ಹೇಳಿ ಕೊಡುವ ಮೂಲಕ ದಿನನಿತ್ಯ ಸಾಮಾನ್ಯ ಅಪಘಾತ ಗಳನ್ನು ತಡೆಗಟ್ಟಬಹುದು ಎಂದು ರೋಟರಿ ನಿಯೋಜಿತ ರಾಜ್ಯಪಾಲ ರೋ.ಕೆ. ಪಾಲಾಕ್ಷ ಅಭಿಪ್ರಾಯಪಟ್ಟರು.
ನಗರದ ರಾಜ್ಯ ಸರಕಾರಿ ನೌಕರರ ಭವನದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಲಿಯ ಪದಗ್ರಹಣ ಕಾರ್ಯಕ್ರಮದಲ್ಲಿ ಪದಗ್ರಹಣ ಅಧಿಕಾರಿಯಾಗಿ ಮಾತನಾಡಿದ ಅವರು, ಎಡೆ ವಾಹನ ಅಪಘಾತಕ್ಕೆ ತುತ್ತಾಗುತ್ತಿರು ವವರು ಹದಿಹರೆಯದ ಮಕ್ಕಳು. ಅವರ ಪೋಷಕರು ಈ ಬಗ್ಗೆ ಗಂಭೀರವಾದ ಆಲೋಚನೆ ಮಾಡಬೇಕಾಗಿದೆ. ಯಾವುದೇ ಲೈಸೆನ್ಸ್ ಹೊಂದಿರದ ಮಕ್ಕಳು ವಾಹನವನ್ನು ಚಲಾಯಿಸಿ ಅಪಘಾತ ಮಾಡಿಕೊಳ್ಳುತ್ತಿzರೆ. ಅವರಿಗೆ ರಸ್ತೆ ಸುರಕ್ಷತೆಯ ಬಗ್ಗೆ ನಾವು ಹೆಚ್ಚಿನ ಅರಿವು ಮೂಡಿಸ ಬೇಕಾಗಿದೆ ಎಂದು ಹೇಳಿದರು.
ರೋಟರಿ ೩೧೮೨ ಜಿ ಈ ವರ್ಷ ರಸ್ತೆ ಸುರಕ್ಷತೆಯ ವಿಚಾರ ವನ್ನು ಜಿ ಯೋಜನೆಯಾಗಿ ತೆಗೆದುಕೊಂಡಿದೆ. ಹತ್ತನೇ ತರಗತಿ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳಿಗೆ ರೋಟರಿ ಸಂಸ್ಥೆ ವರ್ಷಪೂರ್ತಿ ರಸ್ತೆ ಸುರಕ್ಷತೆ ನಿಯಮಗಳನ್ನು ಅರಿವು ಮೂಡಿಸುವ ಕೆಲಸವನ್ನು ಮಾಡಲಿದೆ ಎಂದು ಹೇಳಿದರು.


ಇಂದಿನ ದಿನಗಳಲ್ಲಿ ನಾವು ಪ್ರತಿಯೊಂದಕ್ಕೂ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಅವಲಂಬಿತರಾಗಿ ದ್ದೇವೆ. ಇದರ ಪರಿಣಾಮವನ್ನು ನಾವು ಅಂದಾಜು ಮಾಡಿಲ್ಲ. ಇ-ತ್ಯಾಜ್ಯ ಮುಂದೆ ದೊಡ್ಡ ಸಮಸ್ಯೆಯಾಗಿ ಉದ್ಭವಿಸಲಿದೆ. ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ನಾವು ಪುನರ್ ಬಳಕೆ ಮಾಡುವ ರೀತಿ ಯಲ್ಲಿ ಯೋಜನೆಗಳನ್ನು ರೂಪಿಸ ಬೇಕಾಗಿದೆ. ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಈ ವರ್ಷ ಇ-ತ್ಯಾಜ್ಯ ನಿರ್ವಹಣೆಯ ಕುರಿತು ಅರಿವು ಮೂಡಿಸುವ ಹಾಗೂ ಅದನ್ನು ಸಂಗ್ರಹಿಸುವ ಕೆಲಸ ಮಾಡಲಿದೆ ಎಂದು ಹೇಳಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ರೋಟರಿ ಮಾಜಿ ಸಹಾಯಕ ಗರ್ವನರ್ ರೋ. ಆನಂದ ಮೂರ್ತಿ ಅವರು ಮಾತನಾಡಿ, ರೋಟರಿ ಜಗತ್ತಿನಲ್ಲಿ ಹಲವು ಸಾಮಾಜಿಕ ಬದ್ಧತೆಗಳನ್ನು ಹೊಂದಿ ಕೆಲಸ ಮಾಡುತ್ತಿದೆ. ಇದರ ವ್ಯಾಪ್ತಿ ಇಂದು ಪ್ರಪಂಚದ ಮೂಲೆ ಮೂಲೆ ತಲುಪಿದೆ. ಪಲ್ಸ್ ಪೋಲಿಯೋದಿಂದ ಹಿಡಿದು ಅನೇಕ ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆ ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿಯನ್ನು ಹೊಂದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿ ಸಿದ್ದ ವಲಯ ೧೦ರ ಸಹಾಯಕ ಗೌರ್ವನರ್ ರೋ. ರಾಜೇಂದ್ರ ಪ್ರಸಾದ್ ಅವರು ಮಾತನಾಡಿ, ರೋಟರಿ ೩೧೮೨ ಜಿ ೨೦೨೩ -೨೪ ರಲ್ಲಿ ಐದು ಸಮಾಜಮುಖಿ ಯೋಜನೆಗಳನ್ನು ಹಮ್ಮಿಕೊಂಡಿ ದೆ. ಈ ಯೋಜನೆಗಳ ಮೂಲಕ ಇಡೀ ವರ್ಷ ಜಿಯ ಎಲ್ಲ ರೋಟರಿ ಕ್ಲಬ್‌ಗಳು ಸಮಾಜದ ಒಂದು ಭಾಗವಾಗಿ ಕೆಲಸ ಮಾಡಲಿವೆ ಎಂದು ಮಾಹಿತಿ ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಲಿಯ ಅಧ್ಯಕ್ಷರಾಗಿ ರೋ.ರೇಣುಕಾ ರಾಧ್ಯ, ಕಾರ್ಯದರ್ಶಿಯಾಗಿ ರೋ. ರೂಪಾ ಪುಣ್ಯಕೋಟಿ, ಖಚಾಂಚಿ ಯಾಗಿ ರೋ. ಲಕ್ಷ್ಮೀನಾರಾಯಣ ಹಾಗೂ ಅವರ ತಂಡ ಅಧಿಕಾರ ವಹಿಸಿಕೊಂಡಿತು.
ನಿರ್ಗಮಿತ ಅಧ್ಯಕ್ಷ ರೋ. ಎನ್.ಜೆ. ಸುರೇಶ ಸ್ವಾಗತಿಸಿ, ರೋ.ರೂಪಾ ಪುಣ್ಯಕೋಟಿ ವಂದಿಸಿದರು. ಕಾರ್ಯಕ್ರಮದಲ್ಲಿ ನಿರ್ಗಮಿತ ಕಾರ್ಯದರ್ಶಿ ರೋ. ವೆಂಕಟೇಶಗುತ್ತಲ್ ಸೇರಿದಂತೆ ವಿವಿಧ ಕ್ಲಬ್‌ಗಳ ನೂರಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು.