ಭದ್ರಾವತಿ : ಕನ್ನಡ ಸಾಹಿತ್ಯ ಪಾಠ ಮಾಡಲು ಭಾವ ಅರಿತು ರಸಸ್ವಾದದ ಅನುಭವ ನೀಡುವು ದನ್ನು ರೂಡಿಸಿಕೊಳ್ಳಬೇಕಿದ್ದು ಅಂತಹ ಗ್ರಹಿಕೆಗೆ ಶಿಕ್ಷಕರಿಗೆ ಶಿಬಿರ ಗಳು ಪೋಷಕಾಂಶವಿದ್ದಂತೆ ಎಂದು ಹಿರಿಯ ಸಾಹಿತಿ ಡಾ.ಕುಮಾರ ಚಲ್ಯ ಅಭಿಪ್ರಾಯಪಟ್ಟರು.
ಜಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಭದ್ರಾವತಿ ತಾಲೂಕು ಸಮಿತಿ ನೇತೃತ್ವದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಗುರುವಾರ ಭದ್ರಾವತಿ ತಾಲ್ಲೂಕು ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರಿಗೆ ಮತ್ತು ಉರ್ದು ಶಾಲಾ ಕನ್ನಡ ಶಿಕ್ಷಕರಿಗೆ ೨ ದಿನಗಳ ಸಾಹಿತ್ಯ ರಸಗ್ರಹಣ ಶಿಬಿರದಲ್ಲಿ ಆಧುನಿಕ ಕಾವ್ಯ ಓದು ವಿಶ್ಲೇಷಣೆ ಕುರಿತು ಮಾತನಾಡಿದ ಅವರು ಕನ್ನಡ ಸಾಹಿತ್ಯದಲ್ಲಿ ಆಧು ನಿಕ ಕಾವ್ಯ ಎಂದರೆ ಅದು ನೂರಾ ಮೂರು ವರ್ಷಗಳ ಇತಿಹಾಸ ಹೊಂದಿದೆ. ಪ್ರಾಚೀನ ಕನ್ನಡ ಸಾಹಿ ತ್ಯಕ್ಕೆ ಎರಡು ಸಾವಿರ ವರ್ಷಗಳ ದೀರ್ಘಕಾಲದ ಇತಿಹಾಸವಿದೆ. ಆದರೆ ಕನ್ನಡ ಸಾಹಿತ್ಯ ಪಾಠ ಮಾಡುವಾಗ ಭಾವ ಅರಿತು ರಸ ಸ್ವಾದದ ಅನುಭವ ನೀಡುವುದನ್ನು ರೂಢಿಸಿಕೊಳ್ಳಬೇಕು. ಉಪದೇಶ, ಭಾಷಣದಿಂದ ಮಲ್ಯಗಳನ್ನು ಕಲಿಸಲಾಗದು. ಶಿಕ್ಷಕರಲ್ಲಿ ಸ್ವಯಂ ಕಲಿಕೆಯಿಂದ ಸಾಹಿತ್ಯದ ಒಳ ನೋಟ, ಹೊರನೋಟ ಎರಡ ನ್ನೂ ಗಮನಿಸಬೇಕು. ಕಾವ್ಯದ ಭಾವವನ್ನು ಅರಿಯಬೇಕು. ಶಬ್ಧ ಚಮತ್ಕಾರ ಅರಿಯಬೇಕು. ಸ್ವಯಂ ಪರಿಶ್ರಮದಿಂದ ತಳಸ್ಪರ್ಷಿ ಕಲಿಕೆಯನ್ನು ರೂಢಿಸಿಕೊಳ್ಳಬೇಕು. ಯಾವ ಕವಿಯೂ ತನ್ನ ಕಾವ್ಯವನ್ನು ಹೀಗೆ ಓದಬೇಕು ಎಂದು ಟಿಪ್ಪಣಿ ಬರೆದಿರುವುದಿಲ್ಲ. ಕಾವ್ಯ ಓದು ವಾಗ ಕಾವ್ಯದ ಧ್ವನಿ ಜೊತೆಗೆ ನಿಮ್ಮ ಧ್ವನಿಯೂ ಮುಖ್ಯ ಮತ್ತು ಕಾವ್ಯ ದೊಳಗಿನ ಆವರಣ ಅರಿಯು ವುದು ಮುಖ್ಯ ಎಂದು ವಿವರಿಸಿ ಹೇಳಿದರು.
ದೀಪ ಬೆಳಗಿಸಿ ಉದ್ಘಾಟಿಸಿದ ಮಾಜಿ ನಗರಸಭಾ ಅಧ್ಯಕ್ಷರಾದ ಬಿ. ಕೆ. ಮೋಹನ್ ಮಾತನಾಡಿ, ಕನ್ನಡ ನಾಡಲ್ಲಿ ಕನ್ನಡಕ್ಕೆ ಸಂಕಟ ತರುವಲ್ಲಿ ನಮ್ಮ ರಾಜ್ಯ ಸರ್ಕಾರದ ತಪ್ಪು ತೀರ್ಮಾನಗಳೇ ಕಾರಣವಾಗಿವೆ. ನಮ್ಮ ಇಂಗ್ಲಿಷ್ ವ್ಯಾಮೋಹ ಬಿಡಬೇಕು. ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಕಳುಹಿಸುವ ಸಂಕಲ್ಪ ಮಾಡಬೇಕಾದ ಅಗತ್ಯ ವಿದೆ. ಜನಜಗೃತಿಗೆ ಮತ್ತೊಮ್ಮೆ ಗೋಕಾಕ್ ಮಾದರಿ ಹೋರಾಟದ ಅಗತ್ಯವಿದೆ ಎಂದು ಹೇಳಿದರು.
ಜಿ ಅಧ್ಯಕ್ಷರಾದ ಡಿ. ಮಂಜುನಾಥ ಅವರು ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ. ಕೆ. ನಾಗೇಂದ್ರಪ್ಪ, ತಾ. ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಸುಧಾಮಣಿ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಕೋಡ್ಲು ಯಜ್ಞಯ್ಯ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಸವರಾಜಪ್ಪ ಕೆ, ಕನ್ನಡ ಭಾಷಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಪ್ರಶಾಂತ್ ಸಣ್ಣಕ್ಕಿ ವೇದಿಕೆಯಲ್ಲಿದ್ದರು. ಸುಮತಿ ಕಾರಂತ ಪ್ರಾರ್ಥನೆ ಹಾಡಿದರು. ಉಮಾಪತಿ ಸ್ವಾಗತಿಸಿ, ಮಾಯಮ್ನ ನಿರೂಪಿಸಿದರು.