ನೀವು ನನ್ನನ್ನು ಈ ಲೋಕಕ್ಕೆ ಕರೆತಂದಿದ್ದೀರಿ; ಲೋಕದ ಸೇವೆಗೆ ನನ್ನನ್ನು ಬಿಟ್ಟುಬಿಡಿ; ನನ್ನ ಜೀವನವನ್ನು ಸಮಾಜಕ್ಕೋಸ್ಕರ ಸವಿಸುತ್ತೇನೆ…

ನೀವು ನನ್ನನ್ನು ಈ ಲೋಕಕ್ಕೆ ಕರೆತಂದಿದ್ದೀರಿ. ಲೋಕದ ಸೇವೆಗೆ ನನ್ನನ್ನು ಬಿಡಿ. ನನ್ನ ಜೀವನವನ್ನು ಸಮಾಜಕ್ಕೋಸ್ಕರ ಸವಿಸುತ್ತೇನೆ ಹೀಗೆಂದು ಸನ್ಯಾಸ ದೀಕ್ಷೆ ಪಡೆದ ಸಂದರ್ಭದಲ್ಲಿ ಲಿಂಗೈಕ್ಯ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ ಅವರು ತಮ್ಮ ತಂದೆಗೆ ಕೊಟ್ಟ ಮಾತಿದು.
ಈ ಮಾತಿನಂತೆಯೇ ತಮ್ಮ ಇಡೀ ಜೀವನವನ್ನು ಸೇವಾ ಕಾರ್ಯಗಳಿಗೆ ಸಮರ್ಪಿಸಿಕೊಂಡ ಪೂಜ್ಯಶ್ರೀಗಳು, ಕನ್ನಡ ನಾಡು ಕಂಡ ಮಹಾನ್ ಸಂತರಾದರು. ೮೦ ವರ್ಷಗಳ ಸಾರ್ಥಕ ಬದುಕು ಅವರದು. ಎಂಟು ದಶಕಗಳ ಮಠದ ಅಧಿಕಾರ ಅವಧಿಯಲ್ಲಿ ಶಿಕ್ಷಣ ಮತ್ತು ಅನ್ನದಾತೋಹ ಸೇವಗಾಗಿ ಅರ್ಣಿಸಿ ದುಡಿದು ಕಾಯಕಯೋಗಿ ಎನಿಸಿಕೊಂಡರು.
ದಿನದ ಮೂರು ಹೊತ್ತು ಇಷ್ಟಲಿಂಗ ಪೂಜೆ ಜಪ ತಾಪಗಳಿಂದ ಗಳಿಸಿದ ಶಕ್ತಿಯನ್ನೆಲ್ಲ ಲೋಕ ಸೇವೆಗಾಗಿ ಭಕ್ತರ ಪಾಲಿಗೆ ನಡೆದಾಡುವ ದೇವರು ಆದರು. ಶ್ರೀಗಳ ಲೋಕಸೇವೆಯ ಫಲವಾಗಿ ಐದು ದಶಕಗಳಲ್ಲಿ ಲಕ್ಷಾಂತರ ಮಕ್ಕಳು ಶಿಕ್ಷಣ ಪಡೆದಿzರೆ. ಈಗಲೂ ಪ್ರತಿವರ್ಷ ಸಾವಿರಕ್ಕೂ ಹೆಚ್ಚು ಮಕ್ಕಳು ವಿದ್ಯೆ ಕಲಿಯುತ್ತಿzರೆ. ಶಾಲಾ ಮಕ್ಕಳು ಸೇರಿದಂತೆ ನಿತ್ಯ ಸಾವಿರಾರು ಮಂದಿ ಭಕ್ತರು ಅನ್ನದಾಸೋಹದ ಪ್ರಸಾದ ಸ್ವೀಕರಿಸುತ್ತಿzರೆ.
ಚಿಕ್ಕವರಿzಗಲೇ ಶಿವಪೂಜೆ, ಶರಣಬೃತ ವಚನ ಪಟ್ಟಣದಲ್ಲಿ ಅತೀವ ಆಸಕ್ತಿ ಹೊಂದಿದ್ದ ಶ್ರೀಗಳು, ಮಠದ ಉತ್ತರಾಧಿಕಾರಿಯಾಗಿದ್ದು ಆಕಸ್ಮಿಕ ಸಂದರ್ಭದಲ್ಲಿ. ಈ ಹಿಂದೆ ಅವರು ಶೋಧಿಕೃತ ಮಠದ ಪೀಠಾಧಿಪತಿಗಳಾಗಿ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದು ಅಂದಿನ ಶ್ರೀಶೈಲ ಜಗದ್ಗುರು ವಾಗೀಶ ಪಂಡಿತರಾದರವರ ಕೃಪಾ ದೃಷ್ಟಿಯಿಂದ ಹೊನ್ನಾಳಿಯ ಇದೇ ಕಲ್ಮಠಕ್ಕೆ ೧೯೭೨ ರಲ್ಲಿ ಪೀಠಾಧಿಪತಿಗಳಾಗಿ ಅಧಿಕಾರ ವಹಿಸಿಕೊಂಡರು. ಅವರಿಗೆ ಗುರು ದೀಕ್ಷೆಯನ್ನು ನೀಡಿದ ಅವರ ಪುರ ವರ್ಗ ಮಠದ ಗುರುಗಳಾದ ಸಿದ್ಧವೀರ ಸ್ವಾಮಿಗಳು ಹಸಿದ ಹೊಟ್ಟೆಗೆ ತುತ್ತು ಅನ್ನ ನೀಡುವುದಕ್ಕಿಂತ ದೊಡ್ಡ ಸೇವೆ ಮತ್ತೊಂದಿಲ್ಲ ಎಂದು ಉಪದೇಶಿಸಿದ್ದರು.
ಗುರುವಿನ ಈ ಆಶಯವನ್ನು ದೊಡ್ಡ ಮಟ್ಟದಲ್ಲಿ ಸಾಕಾರಗೊಳಿಸಿದ ಚಂದ್ರಶೇಖರ ಶ್ರೀಗಳು ಹೊನ್ನಾಳಿ ಹಿರೇಕಲ್ ಮಠವನ್ನು ಅನ್ನದಾಸೋಹಕ್ಕೆ ಅನ್ವರ್ಥನಾಮವನ್ನಾಗಿಸಿದರು. ಶಾಲಾ ಮಕ್ಕಳ ಯೋಜನೆ ರೂಪಿಸಲು ಸರ್ಕಾರ ಸ್ಪೂರ್ತಿಯಾದರು. ಹೊನ್ನಾಳಿ ಹಿರೇಕಲ್ ಮಠದ ಹಿಂದಿನ ಗುರುಗಳಾದ ಶ್ರೀ ಮೃತ್ಯುಂಜಯ ಶ್ರೀಗಳವರ ಕಾಲದಲ್ಲಿ ಮಠದಲ್ಲಿ ಅನ್ನದಾಸೋಹ ಆರಂಭವಾಯಿತು. ನಂತರ ಜ್ಯೋತಿಷ್ಯ ವೈದಿಕ ಪಾಠಶಾಲೆ ಶ್ರೀ ಚನ್ನೇಶ್ವರ eನ ಕಲಾಸಂಘ ಪ್ರಾರಂಭಗೊಂಡು ನಡೆಯುತ್ತಿದ್ದವು. ಈ ಶಾಲೆಯಲ್ಲಿ ಕೇವಲ ಜಂಗಮರು ಬ್ರಾಹ್ಮಣರು ಲಿಂಗಾಯಿತರು ಮಾತ್ರ ವೈದಿಕ ಸಂಸ್ಕೃತ ಕಲಿಯಬೇಕು ಎಂಬ ವ್ಯವಸ್ಥೆ ಇರಲಿಲ್ಲ. ವೈದಿಕ ಸಂಸ್ಕೃತದಿಂದ ವಂಚಿತರಾಗಿದ್ದ ಎಲ್ಲ ಜತಿಯ ಮಕ್ಕಳಿಗೆ ಇಂತಹ ಅವಕಾಶವನ್ನು ಕಲ್ಪಿಸುವ ಮೂಲಕ ಆಗಿನ ಕಾಲದಲ್ಲಿ ಮಠದ ಜತ್ಯತೀತ ಪರಂಪರೆಗೆ ಭದ್ರ ಬುನಾದಿ ಹಾಕಿಕೊಟ್ಟರು.
ಈ ಗುರುಗಳಿಬ್ಬರ ಅನ್ನ ಮತ್ತು ಅಕ್ಷರ ದಾಸೋಹಗಳನ್ನು ಶ್ರೀ ಚಂದ್ರಶೇಖರ ಗುರುಗಳು ಬೆಳೆಸುತ್ತಲೇ ಹೋದರು. ಸ್ವಾತಂತ್ರ್ಯ ಪೂರ್ವದ ಶಿಕ್ಷಣ ಪಡೆಯಲು ಸೇರಿಕೊಂಡು ಸ್ನಾತಕೋತ್ತರ ಪದವಿಯನ್ನು ಪಡೆದಿದ್ದ ಶಿವಕುಮಾರ ಸ್ವಾಮೀಜಿಯವರು ಮಠದ ಪರಂಪರೆಯನ್ನು ಉಳಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ಹೊನ್ನಾಳಿ ಸುತ್ತಮುತ್ತಲಿನ ಭಕ್ತರುಗಳಿಗೆ ಅನುಮಾನವಾಗಿತ್ತು. ಇವರ ಪೀಠಾಧಿಕಾರಿತ್ವವನ್ನು ವಿರೋಧಿಸುವ ಭಕ್ತರು ಸಹ ಅಂದು ಹೆಚ್ಚಿದ್ದರು. ಇವೆಲ್ಲಕ್ಕೂ ಶ್ರೀಗಳು ಆತಂಕಗೊಂಡಿದ್ದರು. ಸಹ ತಮ್ಮ ಅನುಮಾನ ನಿವಾರಣೆಗಾಗಿ ಭಕ್ತರು ನೀಡುವ ಎಷ್ಟೇ ಕಷ್ಟಗಳು ಎದುರಾದರು ಎದೆಗುಂದದೆ ಚಂದ್ರಶೇಖರ ಶ್ರೀಗಳೂರು ಅನುಮಾನ ಗೊಂಡ ಶಿಷ್ಯರನ್ನು ಸಂತೋಷದಿಂದ ಮಾತನಾಡಿಸುತ್ತಾ ಅವರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗುವ ಮೂಲಕ ಶ್ರೀಮಠದ ಕೀರ್ತಿಯನ್ನು ಎತ್ತರಕ್ಕೆ ಕೊಂಡರು ಶ್ರೀಗಳು ಮಠದ ಅಧಿಕಾರ ವಹಿಸಿಕೊಂಡಾಗ ಇದ್ದದ್ದು ಒಂದು ವೈದಿಕ ಮತ್ತು ಜ್ಯೋತಿಷ್ಯ ಪಾಠಶಾಲೆ, ಶ್ರೀ ಚನ್ನೇಶ್ವರ ಗಾನಕಲ ಸಂಘ, ಅದಾದ ನಂತರ ಶ್ರೀಗಳು ಅಂದಿನ ಶಾಸಕರಾದ ಹೆಚ್ ಬಿ ಕಾಡು ಸಿದ್ದಪ್ಪನವರ ಸಹಕಾರದೊಂದಿಗೆ ಶ್ರೀ ಚನ್ನಪ್ಪ ಸ್ವಾಮಿ ವಿದ್ಯಾಪೀಠವನ್ನು ನೋಂದಾಯಿಸಿಕೊಂಡು ಅಂದಿನ ಶಿಕ್ಷಣ ಸಚಿವರಾದ ಬದರಿ ನಾರಾಯಣ ಅವರನ್ನು ಕರೆಸಿ, ಪ್ರಪ್ರಥಮ ಬಾರಿಗೆ ಹೊನ್ನಾಳಿ ಪಟ್ಟಣದಲ್ಲಿ ಶ್ರೀ ಚನ್ನೇಶ್ವರ ಗ್ರಾಮಾಂತರ ಪದವಿಪೂರ್ವ ಕಾಲೇಜನ್ನು ಆರಂಭಿಸುವ ಮೂಲಕ ಶಿಕ್ಷಣ ನೀಡುವಲ್ಲಿ ತಮ್ಮ ಶ್ರಮವನ್ನು ಹಾಕಲು ಮುಂದಾದರೆ ನಂತರ ಹಿಂದಿನ ಗುರುಗಳಾದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿಯವರ ಹೆಸರಿನಲ್ಲಿ ಪದವಿಪೂರ್ವ ಕಾಲೇಜು, ಶ್ರೀ ಶೈಲ ಜಗದ್ಗುರು ವಾಗಿಸಿ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ನೆನಪಿನಲ್ಲಿ ಶ್ರೀ ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಶಿಕ್ಷಣ ಮಹಾವಿದ್ಯಾಲಯ ಪ್ರಾರಂಭಿಸಿದರು . ನಂತರ ನಾಲ್ಕು ಅನುದಾನಿತ ಪ್ರೌಢಶಾಲೆಗಳು ಒಂದು ಅನುದಾನ ರಹಿತ ಆಂಗ್ಲ ಮಾಧ್ಯಮ ಶಾಲೆ, ಒಂದು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಎರಡು ಕೈಗಾರಿಕಾ ತರಬೇತಿ ಕೇಂದ್ರ, ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ವಿದ್ಯಾರ್ಥಿ ನಿಲಯ ಹೀಗೆ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದರು.
ಶ್ರೀಗಳು ಮಠ ಬೆಳೆಸಿದ ಪರಿಯನ್ನು ವಿವರಿಸಲು ಈ ಅಂಕಿ ಸಂಖ್ಯೆಗಳೇ ಸಾಕು ಸ್ವಾಮೀಜಿಯವರು ಕಾಯಕ ತತ್ವದ ಪರಿಪಾಲಕರಾಗಿದ್ದರು. ಅವರೆಂದಿಗೂ ದಂತ ಗೋಪುರದಲ್ಲಿ ಕುಳಿತು ಇತರರಿಂದ ಕೆಲಸ ಮಾಡಿಸಿದವರಲ್ಲ. ಜೊತೆಯಲ್ಲಿ ನಿಂತು ದುಡಿದವರು. ಅಡಿಗೆ ಮನೆಯಲ್ಲಿ ಮುz ತಿರುವವಿದ್ದರೂ ಅನ್ನ ಬಸಿದಿದ್ದರು. ಹೊಲಗzಗಳಲ್ಲಿ ಕೆಲಸ ಮಾಡಿದ್ದರು. ಕಸವನ್ನು ಗುಡಿಸಿದ್ದರು. ಮಕ್ಕಳ ಆರೈಕೆ ಮಾಡಿದ್ದರು. ಬುದ್ಧಿ ಹೇಳಿದರು. ಮಕ್ಕಳಿಗೆ ಪಾಠ ಹೇಳಿಕೊಟ್ಟಿದ್ದರು. ಬಂದ ಮಠದ ಆಡಳಿತವನ್ನು ಸಮರ್ಥವಾಗಿ ನಿಭಾಯಿಸಿದ್ದರು. ಕಾಯಕದಿಂದಲೇ ಜೀವನ ಮುಕ್ತಿ ಎಂಬ ಶರಣರ ವಚನದ ಸಾಲನ್ನು ತಮ್ಮ ಬದುಕಿನ ಮೂಲಕ ನಿರೂಪಿಸಿದರು.
ಪದವೀಧರರಾಗಿದ್ದ ಸ್ವಾಮೀಜಿಯವರು ಸದಾ ವೈಚಾರಿಕ ನಿಲುವುಗಳನ್ನು ಹೊಂದಿದ್ದರು. ಆದಾಗ ಕಣ್ಣಿಗೆ ಕಾಣದ ಅಗನಿತ ಸತ್ಯಗಳು ಇವೆ ಎಂಬುದನ್ನು ನಂಬಿದ್ದರು. ದೈಹಿಕ ಮಾನಸಿಕ ಅಸ್ವಸ್ಥದಿಂದ ಬಳಲಿ ಬಂದವರಿಗೆ ತಾಯತಗಳನ್ನು ಬರೆದುಕೊಡುತ್ತಿದ್ದರು. ವೈeನಿಕತೆ ಹೆಸರಿನಲ್ಲಿ ಮುಗ್ಧ ಜನರನ್ನು ವಿಶ್ರಾಂತಿಗೆ ಒಳಪಡಿಸಬಾರದು ಎಂದು ಸ್ವಾಮಿಯವರು ಹೇಳುತ್ತಿದ್ದರು.
ಅಷ್ಟಕ್ಕೂ ಯಂತ್ರದಾರಣೆ ಎಂಬುದು ಅದನ್ನು ನಂಬುವ ಜನರಲ್ಲಿ ನೆಮ್ಮದಿ ಭರವಸೆ ಮೂಡಿಸುವ ಒಂದು ಕ್ರಮ ಎಂದು ಹೇಳುತ್ತಿದ್ದರು. ಇಷ್ಟೆಲ್ಲ ಕೆಲಸಗಳ ನಡುವೆ ಸ್ವಾಮೀಜಿಯವರು ಮಠದಲ್ಲಿ ನ್ಯಾಯ ಪಂಚಾಯತಿಯನ್ನು ಮಾಡುತ್ತಿದ್ದರು. ಅತ್ಯಂತ ಸೂಕ್ಷ್ಮವೂ ಕ್ಲಿಷ್ಟವೂ ಆದ ಹಲವಾರು ವ್ಯಾಜ್ಯಗಳನ್ನು ಸುಲಭವಾಗಿ ಅರ್ಥ ಮಾಡಿಕೊಡುತ್ತಿದ್ದರು. ಕೋರ್ಟುಗಳಲ್ಲಿ ಹತ್ತಾರು ವರ್ಷಗಳಿಂದ ನೆರಗುಡಿಗೆ ಬಿದ್ದಿದ್ದ ಪ್ರಕರಣಗಳನ್ನು ಸುಲಭವಾಗಿ ಬಗೆಹರಿಸಿಕೊಡುತ್ತಿದ್ದರು. ವಿಚಾರಣೆ ವೇಳೆ ಹಠ ಹಿಡಿಯುತ್ತಿದ್ದವರಿಗೆ ನೀತಿ ಕಥೆಗಳು ಸುಭಾಷಿತಗಳು ಪೂರ್ವಜರ ನಡೆ-ನುಡಿಗಳನ್ನು ಹೇಳಿ ಅವರ ಮನಸ್ಸನ್ನು ಪರಿವರ್ತಿಸಿದ ನೂರಾರು ನಿದರ್ಶನಗಳು ಇವೆ. ಎಲ್ಲ ಕೋಮಿನವರು ನ್ಯಾಯದಾನದ ಫಲಾನುಭವಿಗಳಾಗಿದ್ದರು. ಸ್ವಾಮೀಜಿಯವರ ಚಾಣಾಕ್ಷತೆಯನ್ನು ಕಾಣಲು ಸ್ವತಹ ವಕೀಲರು, ನ್ಯಾಯಾಧೀಶರು, ಆರಕ್ಷಕ ನಿರೀಕ್ಷಕರು ಶ್ರೀಮಠಕ್ಕೆ ಬರುತ್ತಿದ್ದರು.
ಶ್ರೀಗಳು ಸದಾ ಅಧ್ಯಯನಶೀಲರಾಗಿರುತ್ತಿದ್ದರು. ಗ್ರಂಥಗಳೆಂದರೆ ಅವರಿಗೆ ಪಂಚಪ್ರಾಣ ಗ್ರಂಥಾ ಅವಲೋಕನ ಒಂದು ತಪಸ್ಸು ಎಂದು ಹೇಳುತ್ತಿದ್ದರು. ಆದಿಕವಿ ಪಂಪ ಶರಣರ ವಚನ ಸಾಹಿತ್ಯದ ಜೊತೆಗೆ ಇಂಗ್ಲಿಷ್ ಸಾಹಿತ್ಯವನ್ನು ಅಧ್ಯಕ್ಷಿಸಿದ್ದರು. ಇದರ ಪರಿಣಾಮವಾಗಿ ಶ್ರೀಗಳು ಸಹಜವಾಗಿ ಉತ್ತಮ ವಾಣಿಯು ಆಗಿದ್ದರು.
ಅವರ ಅಸ್ಕಲಿತ ಮಾತು ಇಬ್ಬರು ತಲೆನೋವು ಅಂತಿರುತ್ತಿತ್ತು ನಾನು ದೇವರನ್ನು ನಿತ್ಯ ಕಂಡಿದ್ದೇನೆ ಮಾತನಾಡುತ್ತಿದ್ದೇನೆ ಎಂದು ಹೇಳುತ್ತಿದ್ದ ಸ್ವಾಮೀಜಿಯವರು ಅದೇ ಉಸಿರಿನಲ್ಲಿ ಮಕ್ಕಳಿಗಿಂತ ದೇವರು ಇನ್ನಾರಿರಲು ಸಾಧ್ಯ ಎಂದು ಹೇಳುತ್ತಿದ್ದರು. ಮಕ್ಕಳಲ್ಲಿ ಅವರನ್ನು ದೇವರನ್ನಾಗಿ ಕಾಣುತ್ತಿದ್ದರು.