ಕಸಾಪ ಹೊಬಳಿ ಘಟಕಗಳ ಮೂಲಕ ಗ್ರಾಮೀಣ ಯುವಕರಿಗೆ ಪ್ರೋತ್ಸಾಹ ನೀಡಲು ಕ್ರಮ: ಶೆಟ್ಟಿ

ನಾಯಕನಹಟ್ಟಿ: ಕನ್ನಡ ಸಾಹಿತ್ಯ ಪರಿಷತ್‌ನಿಂದ ಹೋಬಳಿ ಘಟಕಗಳನ್ನು ಪ್ರಾರಂಭಿಸಲಾ ಗುತ್ತಿದೆ. ಈ ಮೂಲಕ ಗ್ರಾಮೀಣ ಭಾಗದಲ್ಲೂ ಸಾಹಿತ್ಯ ಚಟುವಟಿಕೆ ಗಳನ್ನು ಕೈಗೊಳ್ಳಲಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಚಿತ್ರದುರ್ಗ ತಾಲ್ಲೂಕು ಘಟಕದ ಅಧ್ಯಕ್ಷ ರಾಮಲಿಂಗಶೆಟ್ಟಿ ತಿಳಿಸಿದರು.
ಕೂನಬೇವು ಗ್ರಾಮದಲ್ಲಿ ಏರ್ಪಡಿಸಿದ್ದ ಟಿ.ಆರ್. ಅವಿನಾಶ್ ಅವರ ‘ತತ್ವ ಸಾರುವ ಪೈರು’ ಕವನ ಸಂಕಲನ ಬಿಡುಗಡೆ ಮತ್ತು ಹೋಬಳಿ ಪದಗ್ರಹಣ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಕನ್ನಡದ ಬಗ್ಗೆ ಒಲವು ಹೊಂದಿರುವ ಯುವಕರು ಹಾಗೂ ಹಿರಿಯರು ಅಪಾರ ಸಂಖ್ಯೆಯಲ್ಲಿzರೆ. ಅವರನ್ನು ಗುರುತಿಸಿ ಅವಕಾಶ, ವೇದಿಕೆ ಒದಗಿಸಲಾಗುವುದು ಎಂದರು.
‘ಕನ್ನಡ ಸಾಹಿತ್ಯ ಪರಿಷತ್‌ನ ಹೋಬಳಿ ಘಟಕಗಳು ತಿಂಗಳಿಗೆ ಒಂದು ಕಾರ್ಯಕ್ರಮ ಆಯೋಜಿಸ ಬೇಕು. ಕಲೆ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಜನರಲ್ಲಿ ಆಸಕ್ತಿ ಮೂಡಿಸ ಬೇಕು’ ಎಂದು ನಿವೃತ್ತ ಶಿಕ್ಷಕ ರೇವಣಸಿದ್ದಪ್ಪ ಸಲಹೆ ನೀಡಿದರು.
ತುರುವನೂರು ಹೋಬಳಿ ಅಧ್ಯಕ್ಷ ಎ.ಬಸಣ್ಣ, ಪದಾಧಿಕಾರಿ ಗಳಾದ ವೆಂಕಟೇಶ್, ಎಂ. ವಿಶ್ವನಾಥ್, ತಿಪ್ಪೇಸ್ವಾಮಿ ಇದ್ದರು.