ಶಿವಶರಣರೆಂದರೆ ನುಡಿದಂತೆ ನಡೆಯುವವರು:ಪಾಟೀಲ್

ಹೊನ್ನಾಳಿ: ಶರಣರೆಂದರೆ ನುಡಿದಂತೆ ನಡೆಯುವ ಮೂಲಕ ಅವರು ಪ್ರಸಿದ್ಧ ರಾದವರು. ಅಂತಹ ಶರಣ ಹಡಪದ ಅಪ್ಪಣ್ಣ ಅವರ ಜಯಂತಿ ಕಾರ್ಯಕ್ರಮವನ್ನು ಆಚರಿಸುತ್ತಿರುವುದು ನಮ್ಮ ಭಾಗ್ಯ ಎಂದು ತಹಶೀಲ್ದಾರ್ ತಿರುಪತಿ ಪಾಟೀಲ್ ಹೇಳಿದರು.
೧೨ನೇ ಶತಮಾನದ ಪೂರ್ವ ದಲ್ಲಿ ಸಾಹಿತ್ಯ ರಾಜಶ್ರೀಯದಲ್ಲಿದ್ದು ನಂತರ ವಚನ ಸಾಹಿತ್ಯದ ಮೂಲಕ ಸಾಹಿತ್ಯ ಲೋಕ ಜನಾಶ್ರಯಕ್ಕೆ ಬಂದಿದೆ ತಾಲೂಕು ಆಡಳಿತದಿಂದ ತಾಲೂಕ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ಸಾಹಿತ್ಯ ದಿಗ್ಗಜರು ಕವಿಗಳು ರಾಜಶ್ರಯದಲ್ಲಿದ್ದು ಸಾಹಿತ್ಯ ಸೇವೆ ಮಾಡಿದರು. ಅಕ್ಕಮಹಾದೇವಿ ಮಾದರ ಚೆನ್ನಯ್ಯ ಹಡಪದ ಅಪ್ಪಣ್ಣ ಸರ್ವಜ್ಞರಂತಹ ವಚನಕಾರರು ಯಾವುದೇ ರಾಜಶ್ರಯ ದಲ್ಲಿರದಿದ್ದರೂ ಸಹ ಸ್ವಯಂ ಪ್ರೇರಿತರಾಗಿ ಅವರು ಸಾಹಿತ್ಯ ಸೇವೆಯನ್ನು ಮಾಡಿದರು ಎಂದರು.
ವಚನಕಾರರು ತಮ್ಮ ವೈಚಾರಿಕ ನಿಷ್ಠೆಯಿಂದ ಜನರು ಆಡುವ ಸರಳ ಭಾಷೆ ಮೂಲಕ ಸಾಹಿತ್ಯ ಸೇವೆ ಮಾಡಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತ ಗೊಳಿಸಿzರೆ. ಅವರಲ್ಲಿ ಹಡಪದ ಅಪ್ಪಣ್ಣ ಕೂಡ ಒಬ್ಬರು ಕ್ರಾಂತಿಯೋಗಿ ಬಸವಣ್ಣನವರ ಅನುಭವ ಮಂಟಪದಲ್ಲಿ ಹಡಪದ ಅಪ್ಪಣ್ಣನವರು ಪ್ರಧಾನ ಕಾರ್ಯದರ್ಶಿಯಾಗಿದ್ದರು. ಇಡೀ ಅನುಭವ ಮಂಟಪ ಕಲಾಪ ಹಾಗೂ ಸಾಹಿತ್ಯ ಕಮ್ಮಟಗಳನ್ನು ನಡೆಸುತ್ತಿದ್ದರು ಎಂದರೆ ಅವರ eನ ಭಂಡಾರ ವಿಸ್ತಾರದ ಪರಿಚಯ ವಾಗುತ್ತದೆ ಎಂದು ಬಣ್ಣಿಸಿದರು.
ಶಿವ ಶರಣರು ಎಂದರೆ ನುಡಿದಂತೆ ನಡೆಯುವರು ಎಂದು ಕಾಯಕ ಮತ್ತು ವಚನಗಳ ಮೂಲಕ ಜೀವ ಸಾಕ್ಷಾತ್ಕಾರಗಳನ್ನು ಜನರಿಗೆ ತಂದು ಕೊಟ್ಟವರು ಶಿವಶರಣರು ಇವರ ವಚನಗಳು ಪ್ರತಿಯೊಬ್ಬರಿಗೂ ಜೀವನ ಮೌಲ್ಯಗಳು ಹಡಪದ ಸಮಾಜದ ಅಧ್ಯಕ್ಷ ತಿ ತಿಪ್ಪೇಶಪ್ಪ ಮಾತನಾಡಿದರು. ಸಮಾಜದ ಉಪಾಧ್ಯಕ್ಷ ಅರಬಟ್ಟಿ ವಿರೂಪಾಕ್ಷಪ್ಪ, ಕಾರ್ಯದರ್ಶಿ ಹರಳಹಳ್ಳಿ, ಸುರೇಶಪ್ಪ ಸೇರಿದಂತೆ ಹಡಪದ ಸಮಾಜದ ಮುಖಂಡರು ಕಂದಾಯ ಇಲಾಖೆಯ ರವಿ ಕುಮಾರ್, ನಾಗರಾಜ್, ಅಶೋಕ್ ನಾಯಕ್ ಇದ್ದರು