ಪರಿಸರ ರಕ್ಷಣೆಗಾಗಿ ನಾವೆಷ್ಟು ಮರಗಿಡಗಳನ್ನು ಬೆಳೆಸಿದ್ದೇವೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ…
ದಾವಣಗೆರೆ: ಪರಿಸರ ರಕ್ಷಿಸುವ ಬಗ್ಗೆ ಬರೀ ಮಾತನಾಡದೆ ವರ್ಷ ದಲ್ಲಿ ಎಷ್ಟು ಗಿಡಗಳನ್ನು ನೆಟ್ಟಿದ್ದೇವೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನ ಜಗದ್ಗುರು ಶ್ರೀ ಮ ನಿ ಪ್ರ ಮುಪ್ಪಿನ ಬಸವಲಿಂಗ ಮಹಾ ಸ್ವಾಮಿಗಳವರು ಕರೆ ನೀಡಿದರು.
ದೇವರಾಜ ಅರಸು ಬಡಾವಣೆ ಯಲ್ಲಿರುವ ಶ್ರೀ ಅನ್ನದಾನೇಶ್ವರ ಶಾಖ ಮಠದಲ್ಲಿ ಏರ್ಪಡಿಸಿದ್ದ ೨೫೯ನೇ ಶಿವಾನುಭವ ಸಂಪದ ಹಾಗೂ ಪರಿಸರ ದಿನಾಚರಣೆಯ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸಾಲುಮರದ ತಿಮ್ಮಕ್ಕಳ ಬಗ್ಗೆ ನಾವು ಮಾತನಾಡುತ್ತೇವೆ. ನಾವು ಅವರಂತೆ ಗಿಡಗಳನ್ನು ಬೆಳೆಸಿದ್ದೇ ವೆಯೇ ಎಂದು ನಮ್ಮ ಮನಸ್ಸನ್ನು ನಾವೇ ಪ್ರಶ್ನಿಸಿಕೊಳ್ಳಬೇಕೆಂದ ಶ್ರೀಗಳು, ಬೇಗ ಶ್ರೀಮಂತರಾಗಬೇಕು, ಹಣವಂತ ರಾಗಬೇಕೆಂದು ಭಾವಿಸಿ ಸುಂದರ ವಾದ ಭೂಮಿಗೆ ರಸಗೊಬ್ಬರ ಹಾಕಿ ಬೆಳೆ ಬೆಳೆಯುವುದರಿಂದ ನಿತ್ಯವೂ ವಿಷವನ್ನು ಸೇವಿಸುತ್ತೇವೆ ಎಂದರು.
ಇರುವ ಸ್ವಲ್ಪ ಭೂಮಿ ಯದರೂ ನಿಮ್ಮ ಮನೆಯವರ ಆಹಾರಕ್ಕಾಗಿ ಸಾವಯವ ಗೊಬ್ಬರ ದಿಂದ ಬೆಳೆಯಿರಿ. ಎ ಭೂಮಿ ಯನ್ನು ನೀರಾವರಿ ಮಾಡಿ ಜಮೀನನ್ನು ಬಂಜರು ಮಾಡದೆ ಪರಿಸರವನ್ನು ರಕ್ಷಿಸಿ ಉಳಿಸಿ ಬೆಳೆಸಬೇಕೆಂದರು.
ಗಿಡಕ್ಕೆ ನೀರು ಹಾಕುವುದರ ಮೂಲಕ ಪರಿಸರ ದಿನಾಚರಣೆ ಯನ್ನು ಉದ್ಘಾಟಿಸಿದ ಕರುಣಾಜೀವ ಕಲ್ಯಾಣ ಟ್ರಸ್ಟಿನ ಸಂಸ್ಥಾಪಕ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಇವರು ವಚನಗಳಲ್ಲಿ ಪ್ರಕೃತಿಯ ಪ್ರೇಮ ವಿಷಯವಾಗಿ ಉಪನ್ಯಾಸ ನೀಡುತ್ತಾ ೧೨ನೇ ಶತಮಾನದ ಶರಣರು ಪರಿಸರ ರಕ್ಷಣೆಗಾಗಿ ವಚನಗಳಲ್ಲಿ ಸಾಕಷ್ಟು ಉದಾಹರಣೆ ಸಮೇತ ವಿವರಿಸಿzರೆ. ಪರಿಸರ ರಕ್ಷಿಸುವ ನೆಪದಲ್ಲಿ ಮನೋಮಾಲಿನ್ಯಕ್ಕೆ ಮನುಷ್ಯ ಹೆಚ್ಚು ಒತ್ತು ಕೊಟ್ಟಿದ್ದ ರಿಂದ ನೆಮ್ಮದಿಯನ್ನು ಕಳೆದು ಕೊಂಡಿzನೆಂದು ನುಡಿದರು.
ಬದುಕು ನಡೆಸುವತ್ತ ಮನುಷ್ಯ ಒತ್ತಡದಲ್ಲಿ ಜೀವಿಸುತ್ತಾ ಅಸೂಯೆ, ದುರಾಸೆ, ದ್ವೇಷ, ಅಪ್ರಾಮಾಣಿಕತೆ ಯಿಂದ ಹೊರ ಬರಬೇಕೆಂದರೆ, ಪ್ರೀತಿ, ಸಮಚಿತ್ತತೆ, ಏಕತೆ, ಸಜ್ಜನರ ಸಹವಾಸದಂತಹ ದಿವ್ಯ ಔಷಧಿಯ ಮೊರೆ ಹೋಗಬೇಕು. ಇಲ್ಲದಿದ್ದರೆ ಮನುಷ್ಯ ತಾನೂ ವಿನಾಶದತ್ತ ಹೋಗುವುದರ ಜೊತೆಗೆ ಪರಿಸರ ನಾಶಕ್ಕೆ ನಾ ವೇ ಕಾರಣರಾಗುತ್ತೇವೆ ಎಂದರು.
ನಮ್ಮ ಉಳಿವಿಗಾಗಿ ಪರಿಸರ ವನ್ನು ನಾವೇ ರಕ್ಷಿಸಿಕೊಳ್ಳಬೇಕು. ತಂಬಾಕು ಸೇವನೆ, ಕುಡಿತದ ದಾಸ ರಾಗದೆ ನಡೆ ನುಡಿ ಒಂದಾಗುತ್ತ ಶರಣರ ವಚನಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೆಂದರು.
ಇದೇ ಸಂದರ್ಭದಲ್ಲಿ ೭೫ ವರ್ಷಗಳನ್ನು ಪೂರೈಸಿದ ನಗರದ ವಿನಾಯಕ ಸ್ಟೀಲ್ ಮಾಲೀಕ ಬಿ. ತಿಪ್ಪೇಶ್ ಮತ್ತು ಶ್ರೀಮತಿ ಮಂಜು ಳಾ ತಿಪ್ಪೇಶ್ ದಂಪತಿಗಳನ್ನು ಸನ್ಮಾನಿಸಲಾಯಿತು.
ಹರಿಹರ ಪುರಸಭೆಯ ಮಾಜಿ ಅಧ್ಯಕ್ಷ ದಿ. ಯಜಮಾನ್ ಜಯದೆ ವಪ್ಪ ದಿ. ಶ್ರೀಮತಿ ತಿಪ್ಪಮ್ಮ ಇವರ ಸ್ಮರಣಾರ್ಥವಾಗಿ ಅವರ ಮಕ್ಕಳು ಭಕ್ತಿ ಸೇವೆಯನ್ನು ವಹಿಸಿಕೊಂಡಿ ದ್ದರು.
ಹರಿಹರ ತಾ.ಪಂ ಮಾಜಿ ಅಧ್ಯಕ್ಷ ಜೆ.ಮುರುಗೇಶ್, ಬಕ್ಕಣ್ಣ, ರುದ್ರೇಶ್, ಟಿ. ಜೆ. ಸುರೇಶ್, ಆಡಿಟರ್ ಕೊಟ್ರಣ್ಣ, ಶ್ರೀಮಠದ ಟ್ರಸ್ಟಿಗಳಾದ ಅಮರಯ್ಯ ಗುರು ವಿನ ಮಠ, ಶಿವಪುತ್ರಪ್ಪ, ನಾಗರಾಜ್ ಯರಗಲ್, ತ್ರಿಶೂಲ್ ಚಿತ್ರಮಂದಿರದ ತಿಪ್ಪೇಶ್, ಪ್ರಭಣ್ಣ ಮತ್ತಿರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಆರಂಭದಲ್ಲಿ ಟಿ.ಹೆಚ್.ಎಂ ಶಿವಕುಮಾರಸ್ವಾಮಿ ಸಂಗಡಿಗ ರಿಂದ ಪ್ರಾರ್ಥಿಸಿ, ಪತ್ರಕರ್ತ ವೀರಪ್ಪ ಎಂ ಭಾವಿ ಸ್ವಾಗತಿಸಿದರು. ಶ್ರೀಮತಿ ಸುಜತ ಶ್ರೀಮತಿ ತನುಜ ವಿ.ಬಿ ಇವರು ಕಾರ್ಯಕ್ರಮ ನಿರೂಪಿಸಿದರು.