ಸಂಚಾರ ನಿಯಮ ಪಾಲಿಸುವಂತೆ ಜಗೃತಿ ಕಾರ್ಯಕ್ರಮ

ಶಿವಮೊಗ್ಗ: ನಗರದಲ್ಲಿ ಇಂದು ಸಂಚಾರ ನಿಯಮ ಉಲ್ಲಂಘಿಸಿ ದವರಿಗೆ ಟ್ರಾಫಿಕ್ ಪೊಲೀಸರಿಂದ ತಿಳುವಳಿಕೆ ನೀಡಿ ಫೋಟೋ ಕ್ಲಿಕ್ಕಿಸಿ ಗಾಂಧಿಗಿರಿ ನಡೆಸಲಾಯಿತು. ಸಂಚಾರ ನಿಯಮ ಪಾಲಿಸುವಂತೆ ಜಗೃತಿ ಮೂಡಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ನಗರ ದಲ್ಲಿ ವಾಹನಗಳ ಸಂಖ್ಯೆ ಅಧಿಕವಾ ಗುತ್ತಿದ್ದು, ಸಂಚಾರ ದಟ್ಟಣೆ ನಿಯಂ ತ್ರಣ ಮಾಡುವುದು ಟ್ರಾಫಿಕ್ ಪೊಲೀಸರಿಗೆ ಸವಾಲಾಗಿ ಪರಿಣ ಮಿಸಿದೆ. ನಾಗರಿಕರು ಕೂಡ ತಮ್ಮ ಜವಾಬ್ದಾರಿ ಯನ್ನು ಮರೆತು ಪದೇ ಪದೇ ಸಿಗ್ನಲ್ ಜಂಪ್ ಮಾಡು ವುದು, ಹೆಲ್ಮೆಟ್ ಹಾಕದೇ, ವಾಹ ನಗಳ ದಾಖಲೆ ಇಲ್ಲದೇ ಓಡಾಡು ವುದು ಹೆಚ್ಚಾಗಿದ್ದು, ಸಂಚಾರಿ ಪೊಲೀಸರು ಇಂತಹವರಿಗೆ ತಿಳು ವಳಿಕೆ ನೀಡಿ ಇನ್ನು ಮುಂದೆ ಸಂಚಾರ ನಿಯಮ ಉಲ್ಲಂಘಿಸ ದಂತೆ ಎಚ್ಚರಿಕೆ ನೀಡಿದ್ದಾರೆ.
ನಗರದ ಪ್ರವಾಸಿ ಮಂದಿರ ವೃತ್ತದಲ್ಲಿ ಪಶ್ಚಿಮ ಸಂಚಾರಿ ಠಾಣೆ ಪೊಲೀಸರು ನಾಗರಿಕರಿಗೆ ಝೀ ಬ್ರಾ ಕ್ರಾಸ್ ಬಗ್ಗೆ ಅರಿವು ಮೂಡಿಸಿ ದರು. ಹಸಿರು ದೀಪ ಹತ್ತಿದಾಗ ಮಾತ್ರ ದೀಪದಲ್ಲಿ ಮನುಷ್ಯನ ಚಿತ್ರ ಕಂಡರೆ ಮಾತ್ರ ರಸ್ತೆ ದಾಟ ಬೇಕು. ಕೆಂಪು ದೀಪವಿದ್ದರೆ ರಸ್ತೆ ದಾಟುವಂತಿಲ್ಲ, ಹಸಿರು ದೀಪವಿ ದ್ದಾಗ ಮನುಷ್ಯ ಚಿತ್ರ ಬಂದಾಗ ವಾಹನಗಳು ಕೂಡ ಪಾದಚಾ ರಿಗಳಿಗೆ ರಸ್ತೆ ದಾಟಲು ಅವಕಾಶ ಮಾಡಿಕೊಡಬೇಕು ಎಂದು ಪೊಲೀ ಸರು ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದ ಪಾದಚಾರಿಗಳಿಗೆ ತಿಳುವಳಿಕೆ ಸೂಚನೆ ನೀಡುವ ಪ್ಲೇಕಾರ್ಡ್‌ಗಳನ್ನು ಕೈಗೆ ಕೊಟ್ಟು ಛಾಯಾಚಿತ್ರ ಕ್ಲಿಕ್ಕಿಸಿ ಕಳಿಸಿದರು. ಸಂಚಾರಿ ಪೊಲೀಸರ ಅಭಿಯಾನಕ್ಕೆ ನಾಗರಿಕರಿಂದ ಪ್ರಶಂಸೆ ವ್ಯಕ್ತವಾ ಗಿದೆ. ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಅಧಿಕಾರಿಗಳು ,ಸಿಬ್ಬಂದಿ ಇದ್ದರು.