ಭೂಗತ ಕೇಬಲ್ ಸಂಪರ್ಕದ ಫೀಡರ್ ಪಿಲ್ಲರ್ ಬಾಕ್ಸ್ ನಲ್ಲಿ ಬೆಂಕಿ…
ಶಿವಮೊಗ್ಗ: ಗಾಂಧಿನಗರದಲ್ಲಿ ಭೂಗತ ಕೇಬಲ್ ಸಂಪರ್ಕ ಹೊಂದಿರುವ ಫೀಡರ್ ಪಿಲ್ಲರ್ ಬಾಕ್ಸ್ ನಲ್ಲಿ ಬೆಂಕಿ ಕಾಣಿಸಿದೆ. ನಗರದ ಜನತೆ ಯಲ್ಲಿ ಭಯ ಮತ್ತು ಆತಂಕ ಉಂಟಾಗಿದ್ದು, ಈ ಯೋಜ ನೆಗೆ ಸಂಬಂಧಪಟ್ಟ ಗುತ್ತಿಗೆದಾರ ರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿ ನಗರ ಪಾಲಿಕೆಯ ಕಾರ್ಪೊರೇಟರ್ ನಾಗರಾಜ್ ಕಂಕಾರಿ ಇಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ಗಾಂಧಿನಗರದ ಒಂದನೇ ಪ್ಯಾರಲಲ್ ರೋಡ್‌ನಲ್ಲಿ ನಿನ್ನೆ ಭೂಗತ ಕೇಬಲ್ ಸಂಪರ್ಕ ಹೊಂದಿರುವ ಫೀಡರ್ ಪಿಲ್ಲರ್ ಬಾಕ್ಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳು ಮತ್ತು ಭೂಗತ ಕೇಬಲ್ ಸಂಪರ್ಕ ಕಲ್ಪಿಸಿರುವ ಗುತ್ತಿಗೆದಾರರ ನಡು ವಿನ ಸಂಪರ್ಕದ ಕೊರತೆಯಿಂದಾಗಿ ಈ ರೀತಿಯ ಅವಘಡಗಳು ನಡೆ ಯುತ್ತಿವೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ಲಕ್ಷ್ಮಿ ಟಾಕೀಸ್ ನ ೧೦೦ ಅಡಿ ರಸ್ತೆಯ ಫುಟ್ ಪಾತ್‌ನಲ್ಲೂ ಕೂಡ ಈ ರೀತಿ ಬೆಂಕಿ ಕಾಣಿಸಿದೆ. ಅಲ್ಲದೇ, ಗಾಂಧಿನಗರದ ಟ್ರಾನ್ಸ್ ಫಾರ್ಮ ರ್‌ನಲ್ಲಿ ಮತ್ತು ಫೀಡರ್ ಪಿಲ್ಲರ್ ಬಾಕ್ಸ್ ನಲ್ಲಿ ಬೆಂಕಿ ಕಾಣಿಸಿ ಜನರಲ್ಲಿ ಭಯದ ವಾತಾವರಣ ನಿರ್ಮಾಣ ವಾಗಿದೆ ಎಂದು ದೂರಿದ್ದಾರೆ.
ಫೀಡರ್ ಪಿಲ್ಲರ್ ಬಾಕ್ಸ್ ಅಳವ ಡಿಸಿರುವ ಕಡೆಗಳಲ್ಲಿ ಪಿಲ್ಲರ್‌ಗಳ ನಡುವೆ ಗುಂಡಿ ಇದ್ದು, ಅಲ್ಲದೇ ಯಾವುದೇ ಸುರಕ್ಷತಾ ಕ್ರಮ ಅನು ಸರಿಸಿಲ್ಲ. ನೀರು ನಿಲ್ಲದಿರುವ ರೀತಿ ಜಲ್ಲಿ, ಇತರೆ ಸುರಕ್ಷತಾ ಸಾಮ ಗ್ರಿ ಹಾಕಿಲ್ಲ. ಹಾಗಾಗಿ ಗುಂಡಿಗ ಳಲ್ಲಿ ನೀರು ನಿಂತು ಶಾರ್ಟ್ ಸಕೂ ಟ್ ಆಗುತ್ತಿದೆ ಎಂದು ತಿಳಿಸಿ ದ್ದಾರೆ.
ಈ ರೀತಿ ಹಲವು ಕಡೆಗಳಲ್ಲಿ ಇದೇ ಸಮಸ್ಯೆ ಇದೆ. ಕೂಡಲೇ ಇವನ್ನು ಸರಿಪಡಿಸಬೇಕು. ಸ್ಮಾರ್ಟ್ ಸಿಟಿ ಎರಡನೇ ಎ ಪ್ಯಾಕೇಜ್ ವ್ಯಾಪ್ತಿಯಲ್ಲಿ ಅನೇಕ ಕಳಪೆ ಭೂಗತ ಕೇಬಲ್‌ಗಳನ್ನು ಮತ್ತು ಫೀಡರ್ ಪಿಲ್ಲರ್ ಬಾಕ್ಸ್ ಗಳನ್ನು ಹಾಗೂ ಟ್ರಾನ್ಸ್‌ಫಾರ್ಮರ್‌ಗಳ ಗುಣಮಟ್ಟದಲ್ಲಿ ಅನುಮಾನ ವಿದ್ದು, ಯೋಜನೆಗೆ ಸಂಬಂಧ ಪಟ್ಟಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದ್ದಾರೆ.
ಮಾಜಿ ಕಾರ್ಪೊರೇಟರ್ ಹೆಚ್. ಪಾಲಾಕ್ಷಿ, ಪ್ರಮುಖರಾದ ನರಸಿಂಹ ಗಂಧದಮನೆ, ಪ್ರಶಾ ಂತ್ ರಾಯ್, ಭಾಸ್ಕರ್, ಸಿದ್ದಪ್ಪ, ಉಮೇಶ್, ನವಲೆ ಮಂಜುನಾ ಥ್, ಗಣೇಶ್, ಶ್ಯಾಮ್ ಡಿ. ಇದ್ದರು.