ವಿಶೇಷಚೇತನರಿಗೆ ಅನುಕಂಪಕ್ಕಿಂತ ಅನುದಾನ ಮುಖ್ಯ

ಶಿವಮೊಗ್ಗ: ವಿಶೇಷಚೇತನರಿಗೆ ಸಿಗುವ ಸೌಲಭ್ಯಗಳು ಪೂರ್ಣ ವಾಗಿ ತಲುಪಬೇಕು ಎಂದು ಉದ್ಯ ಮಿ ಭಾಸ್ಕರ್ ಜಿ. ಕಾಮತ್ ಹೇಳಿ ದರು.
ಅವರು ಇಂದು ವಿನೋಬ ನಗರದ ಮಾಧವನೆಲೆಯಲ್ಲಿ ಸಕ್ಷಮ (ಸಮದೃಷ್ಠಿ, ಕ್ಷಮತ, ವಿಕಾಸ ಮತ್ತು ಅನುಸಂಧಾನ ಮಂಡಳಿ) ವತಿಯಿಂದ ಆಯೋಜಿ ಸಿದ್ದ ಸಕ್ಷಮ ಸಂಸ್ಥಾಪನಾ ದಿನಾ ಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಕ್ಷಮ ಸಂಸ್ಥೆ ವಿಶೇಷಚೇತನರ ಸಬಲೀಕರಣಕ್ಕಾಗಿ ಇರುವ ರಾಷ್ಟ್ರೀಯ ಸಂಘಟನೆಯಾಗಿದೆ. ಸರ್ಕಾರ ವಿಶೇಷಚೇತನರಿಗಾಗಿ ಹಲವು ಯೋಜನೆಗಳನ್ನು ಜರಿಗೆ ತಂದಿದ್ದು, ಈ ಯೋಜನೆಗಳ ಪ್ರ ಯೋಜನವನ್ನು ವಿಶೇಷಚೇತನರು ಪಡೆದುಕೊಳ್ಳ ಬೇಕು. ವಿಶೇಷ ಚೇತನರಿಗೆ ಅನುಕಂಪ ಕ್ಕಿಂತ ಅನುದಾನ ಮುಖ್ಯ. ಇವರ ಸೇವೆ ಮತ್ತು ಸಹಾಯ ಮಾಡುವುದು ಪುಣ್ಯದ ಕೆಲಸ. ಶಿವಮೊಗ್ಗದ ತರಂಗ ಸಂಸ್ಥೆ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಅದು ಶ್ಲಾಘ ನೀಯ ಎಂದರು.
ದಿಕ್ಸೂಚಿ ಭಾಷಣ ಮಾಡಿದ ಸಕ್ಷಮದ ಟ್ರಸ್ಟಿ ಜಯದೇವ ಕಾಮತ್, ಸಕ್ಷಮ ಭಾರತದ ಪ್ರತಿ ಜಿಲ್ಲೆಯಲ್ಲೂ ಕೆಲಸ ಮಾಡುತ್ತಿದೆ. ವಿಶೇಷಚೇತನರಿಗೆ ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರ ನೀಡುತ್ತಿದೆ. ಶಿವಮೊಗ್ಗ ದಲ್ಲಿಯೂ ಸಂಘ ರಚನೆಯಾಗಿ ಪ್ರಾಮಾಣಿಕ ಕೆಲಸ ಮಾಡುತ್ತಿದೆ. ಇಲ್ಲಿನ ಅಧ್ಯಕ್ಷರಾದ ಡಾ. ಪ್ರಶಾಂತ್ ಇಸ್ಲೂರ್ ಅವರು ಉತ್ತಮ ಸೇವೆ ನೀಡುತ್ತಿದ್ದಾರೆ ಎಂದರು.
ವಿಶೇಷಚೇತನರಿಗೆ ತಮ್ಮದೇ ಆದ ಜಣ್ಮೆ ಇರುತ್ತದೆ. ಸಮಾಜ ಇವರನ್ನು ಕೀಳಾಗಿ ನೋಡ ಬಾರದು. ಸಂಘ, ಸಂಸ್ಥೆಗಳು ಇವರ ಕಲ್ಯಾಣಕ್ಕಾಗಿ ಪ್ರಯತ್ನಿಸಬೇಕು. ಮುಖ್ಯವಾಗಿ ಯುವಕರು ವಿಶೇಷ ಚೇತನರಿಗೆ ಸಹಾಯ ಮಾಡಬೇಕು ಎಂದರು.
ಜಿಲ್ಲಾ ಸಂಯೋಜಕ ತ್ಯಾಗ ರಾಜ್ ಮಿತ್ಯಾಂತ, ದಕ್ಷಿಣ ಪ್ರಾಂತ ಯುವ ಪ್ರಮುಖ್ ನಾಗರಾಜ್, ಶಬರೀಶ್ ಕಣ್ಣನ್, ಶಿವಕುಮಾರ್, ಕುಮಾರಶಾಸ್ತ್ರಿ ಮುಂತಾದವರಿ ದ್ದರು. ಸಕ್ಷಮದ ಜಿಲ್ಲಾಧ್ಯಕ್ಷ ಡಾ. ಪ್ರಶಾಂತ್ ಇಸ್ಲೂರ್ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ದಿವ್ಯಾಂಗ ಬಂಧುಗಳಿಗೆ ಚರೈವೇತಿ ಯೋಜನೆ ಯಡಿ ವ್ಹೀಲ್ ಚೇರ್, ಊರು ಗೋಲುಗಳನ್ನು ನೀಡಲಾಯಿತು.