ಎಂಎಡಿಬಿಗೆ ಹೆಚ್ಚಿನ ಅನುದಾನ ನಿರೀಕ್ಷೆ: ಮೂಡಾ ಅಧ್ಯಕ್ಷ ಡಿ.ಸುಧಾಕರ್
ಶಿವಮೊಗ್ಗ: ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ನೂತನ ಅಧ್ಯಕ್ಷ ಹಾಗೂ ಸಚಿವ ಡಿ. ಸುಧಾ ಕರ್ ನೇತೃತ್ವದಲ್ಲಿ ಇಂದು ಶಿವ ಮೊಗ್ಗದ ಸಾಗರ ರಸ್ತೆಯ ಮಂಡಳಿ ಯ ಕಚೇರಿಯಲ್ಲಿ ಸಭೆ ನಡೆಯಿತು.
ಎಂಎಡಿಬಿ ವ್ಯಾಪ್ತಿಯಲ್ಲಿ ೬೨ ವಿಧಾನ ಸಭೆ ಮತ್ತು ೨೧ ವಿಧಾನ ಪರಿಷತ್ ಸದಸ್ಯರನ್ನು ಒಳಗೊಂ ಡಿದ್ದು, ಒಟ್ಟು ೮೬ ಜನಪ್ರತಿನಿಧಿಗಳು ಮಂಡಳಿಯ ಸದಸ್ಯರಾಗಿ ದ್ದಾರೆ. ಈ ಬಾರಿ ೪೬ ಹೊಸ ಶಾಸ ಕರು ಆಯ್ಕೆ ಯಾಗಿದ್ದು, ಇಂದಿನ ಸಭೆಗೆ ಆಗಮಿಸಿದ ಶಾಸಕರು ತಮ್ಮ ಪರಿಚಯ ಮಾಡಿಕೊಂಡರು.
ಜು. ೭ ರಂದು ರಾಜ್ಯ ಸರ್ಕಾ ರದ ಬಜೆಟ್ ಮಂಡನೆಯಾಗ ಲಿದ್ದು, ಬಜೆಟ್ ಮೊದಲೇ ಮಂಡ ಳಿಯ ಮೊದಲ ಸಭೆ ಇದಾಗಿದ್ದು, ಹೆಚ್ಚಿನ ಅನುದಾನಕ್ಕೆ ಶಾಸಕರು ಆಗ್ರಹಿಸಿದರು. ಇಂದಿನ ಸಭೆಯಲ್ಲಿ ಪ್ರತಿ ಶಾಸಕರಿಗೆ ೩ ಕೋಟಿ ರೂ. ನೀಡಬೇಕೆಂಬ ಪ್ರಸ್ತಾವನೆ ಸಲ್ಲಿಸ ಲಾಗಿತ್ತು. ಹಿಂದೆ ೧ ಕೋಟಿ ರೂ. ನೀಡಲು ಸರ್ಕಾರ ತೀರ್ಮಾನಿ ಸಿತ್ತು. ಒಟ್ಟು ೩೫೦ ಕೋಟಿ ರೂ. ಪ್ರಸ್ತಾವನೆ ಯನ್ನು ಕೂಡ ಹಿಂದಿನ ಎಂಎಡಿಬಿ ಸಭೆಯಲ್ಲಿ ಠರಾವು ಪಾಸ್ ಮಾಡಲಾ ಗಿತ್ತು. ಅದನ್ನೇ ಈ ಬಾರಿಯೂ ಕೂಡ ಸಭೆಯಲ್ಲಿ ಆಗ್ರಹಿಸಲಾಯಿತು.
೪೪ ಶಾಸಕರು ಕಾಮಗಾರಿಯ ಪ್ರಸ್ತಾವನೆ ಸಲ್ಲಿಸಿರಲಿಲ್ಲ. ಈ ಬಾರಿ ಆಯ್ಕೆಯಾದ ಶಾಸಕರಿಗೆ ಪ್ರಸ್ತಾ ವನೆ ಸಲ್ಲಿಸಲು ವಿನಂತಿಸಲಾಯಿತು. ೨೦೨೩ -೨೪ನೇ ಸಾಲಿಗೆ ಹಿಂದಿನ ಸರ್ಕಾರ ಒಟ್ಟು ೪೩ ಕೋಟಿ ರೂ. ಅನುದಾನ ವನ್ನು ಆಯವ್ಯಯ ದಲ್ಲಿ ನಿಗದಿ ಮಾಡಿದ್ದು, ಹೊಸ ಬಜೆಟ್‌ನಲ್ಲಿ ಮಂಡಳಿಗೆ ಅನು ದಾನವನ್ನು ನಿರೀಕ್ಷಿಸ ಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಮಲೆನಾಡು ಅಭಿವೃದ್ಧಿ ಪ್ರದೇ ಶಾಭಿವೃದ್ಧಿ ಮಂಡಳಿಯ ಒಟ್ಟು ೮೬೧ ಕಾಮಗಾರಿಗಳು ಪ್ರಗತಿ ಯಲ್ಲಿವೆ ೨೦೨೩-೨೪ನೇ ಸಾಲಿನ ಹೊಸ ಕಾಮಗಾರಿಗಳ ಕ್ರಿಯಾ ಯೋಜನೆ ರೂಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಆರಗ ಜನೇಂದ್ರ, ಶೃಂಗೇರಿ ಶಾಸಕ ರಾಜೇಗೌಡ, ಹಿರೇಕೆರೂರು ಶಾಸಕ ಯು.ಬಿ. ಬಣಕಾರ್, ಶಿರಸಿ ಶಾಸಕ ಭೀಮಣ್ಣ ನಾಯಕ, ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣ, ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ, ಚಿಕ್ಕಮಗಳೂರು ಶಾಸಕ ತಮ್ಮಣ್ಣ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಎಂಎಡಿಬಿ ಕಾರ್ಯ ದರ್ಶಿ ಕೆ.ಎಸ್. ಮಣಿ ಮತ್ತಿತರರು ಇದ್ದರು.
ಸಭೆಗೂ ಮೊದಲು ಸಚಿವ ಸುಧಾಕರ್ ಅವರು ಎಂಎಡಿಬಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.