ಸಂಘ ಸಂಸ್ಥೆಗಳಿಂದ ಸಮಾಜಿಕ ಸೇವೆ ಶ್ಲಾಘನೀಯ: ಎಸ್ಪಿ

ಶಿವಮೊಗ್ಗ : ರಕ್ತದಾನ ಶ್ರೇಷ್ಠ ದಾನ ಊರಿನ ಎ ಸಂಘ- ಸಂಸ್ಥೆ ಗಳು ಒಟ್ಟಾಗಿ ಸಮಾಜಮುಖಿ ಸೇವೆಯಲ್ಲಿ ತೊಡಗಿಕೊಂಡಿರು ವುದು ತುಂಬಾ ಸಂತೋಷದ ವಿಚಾ ರ ಹಾಗೂ ರಕ್ತದಾನದ ಪುಣ್ಯ ಕಾರ್ಯದಲ್ಲಿ ಅತಿ ಹೆಚ್ಚು ರಕ್ತ ದಾನಿಗಳು ಭಾಗವಹಿಸಿರುವುದು ಅಭಿನಂದನೀಯ ಎಂದು ಜಿ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಹೇಳಿದರು.
ಶಿರಾಳಕೊಪ್ಪದ ವಿವಿಧ ಸಂಘ -ಸಂಸ್ಥೆಗಳ ನೇತೃತ್ವದಲ್ಲಿ ಶಿಕಾರಿಪುರ ರಸ್ತೆಯ ವಾಲ್ಮೀಕಿ ಭವನದಲ್ಲಿ ರಕ್ತ ದಾನ ಶಿಬಿರ ಕಾರ್ಯಕ್ರಮದಲ್ಲಿ ಜಿ ರಕ್ಷಣಾಧಿಕಾರಿ ರಕ್ತದಾನ ಮಾಡುವ ಮೂಲಕ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಶಿಬಿರದಲ್ಲಿ ಎಲ್ಲ ಸಂಘ ಸಂಸ್ಥೆ ಗಳ ಸಂಪೂರ್ಣ ಪ್ರಯತ್ನ ಮತ್ತು ಸಹಕಾರದೊಂದಿಗೆ ಒಟ್ಟು ೨೦೦ ಯೂನಿಟ್ ರಕ್ತ ಸಂಗ್ರಹವಾಯಿ ತು.ಮೆಗ್ಗಾನ್ ರಕ್ತ ನಿಧಿ ಮತ್ತು ರೆಡ್ ಕ್ರಾಸ್ ಸಂಜೀವಿನಿ ರಕ್ತ ನಿಧಿಗೆ ರಕ್ತವನ್ನು ಹಸ್ತಾಂತರಿಸಲಾ ಯಿತು.
ಸ್ಪೂರ್ತಿ ಫೌಂಡೇಶನ್ ಗೌರವಾ ಧ್ಯಕ್ಷ ಡಾ. ಪ್ರಭು ಸಾಹುಕಾರ್, ಡಾ. ಮಹೇಶ್, ಸ್ಪೂರ್ತಿ ಫೌಂಡೇಶನ್ ಕಾರ್ಯಾಧ್ಯಕ್ಷ ಹಂಸರಾಜ್ ಜೈನ್, ಊರಿನ ಪ್ರಮುಖರಾದ ಅಗಡಿ ಅಶೋಕ್, ಲಯನ್ಸ್ ಕ್ಲಬ್ ನ ಅಧ್ಯಕ್ಷ ಲಯನ್ ಶಿವಯೋಗಿ ಮತ್ತಿತರರಿದ್ದರು.
ಈ ಶಿಬಿರದ ನೇತೃತ್ವವನ್ನು ಸ್ಪೂರ್ತಿ ಫೌಂಡೇಶನ್ ವಹಿಸಿಕೊಂ ಡಿದ್ದು ಇದರಲ್ಲಿ ಲಯನ್ಸ್ ಕ್ಲಬ್ ಜೆಸಿಐ ಎಸ್‌ಐಒ ,ಹಲವು ಸಾಮಾ ಜಿಕ ಸಂಘ ಸಂಸ್ಥೆಗಳು, ವೃತ್ತಿಪರ ಸಂಘ ಸಂಸ್ಥೆಗಳು ಸಮುದಾಯ ಆರೋಗ್ಯ ಕೇಂದ್ರ , ಪೊಲೀಸ್ ಇಲಾಖೆ ,ಅರಣ್ಯ ಇಲಾಖೆ ಇತ್ಯಾದಿ ಊರಿನ ಪ್ರಮುಖ ಸಂಘ ಸಂಸ್ಥೆಗಳು ಕೈಜೋಡಿಸಿದ್ದವು.