ಭದ್ರಾವತಿ: ಪ್ರಜತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳ ಎ ಆಶಯಗಳು ಈಡೇರಿದರೆ ಆಗ ಕಲ್ಯಾಣ ರಾಜ್ಯ ಆಗುವುದರಲ್ಲಿ ಯಾವುದೆ ಅನುಮಾನ ಇಲ್ಲ ಎಂದು ಶಿವಮೊಗ್ಗ ಚಿಕ್ಕಮಗಳೂರು ಬಸವ ಕೇಂದ್ರದ ಪೂಜ್ಯಶ್ರೀ ಬಸವ ಮರುಳಸಿದ್ದ ಸ್ವಾಮಿಗಳವರು ಅಭಿಪ್ರಾಯಿಸಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಸಿzರೂಢ ನಗರದಲ್ಲಿರುವ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಹಾಗೂ ಅಭಿನಂದನೆ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ಇಂದು ಸಮಾಜದಲ್ಲಿ ಹೆಸರು ಉದ್ಯೋಗದ ಮೂಲಕ ಯಾವ ಜತಿಯನ್ನು ಗುರುತಿಸಲು ಸಾಧ್ಯ ವಾಗದಂತಹ ಪರಿಸ್ಥಿತಿ ನಿರ್ಮಾಣ ವಾಗಿರುವುದು ಬದಲಾವಣೆಯ ಸಂಕೇತ. ಮನುಷ್ಯನನ್ನು ಮನುಷ್ಯ ರಂತೆ ಕಾಣಬೇಕೆ ಹೊರತು ಸಂಕುಚಿತ ಭಾವದಿಂದ ನೋಡ ಬಾರದು. ಯೋಗ್ಯತೆ ಇರುವವನು ಶಿವನ ಕೃಪೆಗೆ ಪಾತ್ರನಾಗುತ್ತಾನೆ. ಆಗ ಆತನ ಜತಿ ಮತ ಪರಿಗಣನೆಗೆ ಬರುವುದಿಲ್ಲ. ಜತಿ ಆಧಾರದ ಮೇಲೆ ಶ್ರೇಷ್ಠ ಕನಿಷ್ಟ ಎಂದು ಆಳೆಯಬಾರದು. ಇಂದು ತಳ ಸಮುದಾಯಗಳಲ್ಲೂ ಶ್ರೇಷ್ಠತೆಯ ಸಂಗತಿಗಳು ಇರುತ್ತವೆ. ಅವರು ಗಳನ್ನು ನಿರ್ಲಕ್ಷಿಸಿದರೆ ಅವರಲ್ಲಿರುವ ಮಹತ್ವದ ಸಂಗತಿಗಳು ಮರೆಯಾಗಿ ಬಿಡುತ್ತದೆ ಎಂದರು.


ಇಂದಿನ ದಿನಗಳಲ್ಲಿ ಜತಿ ಎಂಬುದು ಕೇವಲ ಸರ್ಕಾರದ ಸರ್ಟಿಫಿಕೇಟ್‌ಗಳಲ್ಲಿದೆ. ಆದರೆ ಮೊದಲು ಇಂತಿಂತಹವರು ಇಂತಿಂತಹ ಕಸುಬುಗಳನ್ನು ಮಾಡಬೇಕು ಎಂಬುದಿತ್ತು. ಆದರೆ ಇಂದು ಜತಿಯ ಕಸುಬುಗಳನ್ನು ಎ ಜತಿಯವರು ಮಾಡುತ್ತಿ zರೆ. ಇದು ಬಸವಣ್ಣನವರ ಅನುಭವ ಮಂಟಪದ ಕಲ್ಪನೆಯ ಪರಿಣಾಮ ಸಮಾಜದಲ್ಲಿರುವ ಆಗಿರುವ ಬದಲಾವಣೆಗಳು. ಇದನ್ನು ಮುಂದುವರೆಸಿಕೊಂಡು ಹೋಗುವ ಅಗತ್ಯ ಇದೆ ಎಂದು ಅಭಿಪ್ರಾಯಿಸಿದರು.
ಶಾಸಕರಾಗಿ ಚುನಾಯಿತರಾದ ಮೇಲೆ ಇದೆ ಪ್ರಪ್ರಥಮ ಬಾರಿಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಬಿ.ಕೆ.ಸಂಗಮೇಶ್ವರ ಬಸವಾದಿ ಶಿವ ಶರಣರು ಪ್ರತಿಪಾದಿಸಿದ ಸಂಗತಿಗಳನ್ನು ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಅಳವಡಿಸಿ ಕೊಂಡಿದೆ. ಇದರ ಪರಿಣಾಮ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಅದರಂತೆ ಪ್ರಣಾಳಿಕೆಯಲ್ಲಿನ ವಿಷಯಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದರು.
ಕ್ಷೇತ್ರದ ಅಭಿವೃದ್ಧಿಗಾಗಿ ೨ ಸಾವಿರ ಕೋಟಿ ರೂ.ಗಳ ಪ್ರಸ್ತಾವನೆ ಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇನೆ. ಅದರಲ್ಲಿ ೬೮೦ ಕೋಟಿ ನೀರಾವರಿ ಇಲಾಖೆಗೆ ಸಂಭಂಧಿಸಿದ್ದು, ಇದರಲ್ಲಿ ಭದ್ರಾ ನದಿಗೆ ತಡೆ ಗೋಡೆ ನಿರ್ಮಾಣ, ಸೇತುವೆಗಳು, ೩೮೦ ಕೋಟಿ ರೂ ವೆಚ್ಚದಲ್ಲಿ ರಿಂಗ್ ರಸ್ತೆ ನಿರ್ಮಾಣ, ಭದ್ರಾ ಕಾಲೋನಿ ಯಲ್ಲಿರುವ ಆರೋಗ್ಯ ಇಲಾಖೆಗೆ ಸೇರಿದ ೭ ಎಕರೆ ಜಗದಲ್ಲಿ ೧೫೦ ಹಾಸಿಗೆಗಳ ಆಸ್ಪತ್ರೆ ಹಾಗು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ನಿರ್ಮಾಣ, ಚನ್ನಗಿರಿ ರಸ್ತೆ ಹಾಗು ಹೊಳೆಹೊನ್ನೂರು ರಸ್ತೆಗಳ ಆಗಲೀಕರಣ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಎಂಪಿಎಂ ಪುನರಾರಂಭಕ್ಕೆ ಸರ್ಕಾರಕ್ಕೆ ಒತ್ತಾಯಿಸಿದ್ದೇನೆ, ವಿಐಎಸ್‌ಎಲ್ ಕಾರ್ಖಾನೆ ಕೇಂದ್ರ ಸರ್ಕಾರದ ಉಕ್ಕು ಪ್ರಾಧಿಕಾರದ ಒಡೆತನದಲ್ಲಿದೆ. ಅವರು ಅಭಿವೃದ್ಧಿಗೆ ಹಣವನ್ನು ಬಿಡುಗಡೆ ಮಾಡುತ್ತಿಲ್ಲ, ಆ ಕಾರಣ ಅದನ್ನು ವಾಪಸ್ ರಾಜ್ಯ ಸರ್ಕಾರದ ವಶಕ್ಕೆ ನೀಡಬೇಕು ಎಂದು ರಾಜ್ಯ ಮುಖ್ಯ ಕಾರ್ಯದರ್ಶಿಯವರ ಮೂಲಕ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.
ಸಂಕೇಶ್ವರದ ವಿಶ್ರಾಂತ ಪ್ರಾಧ್ಯಾಪಕ ಡಾ| ಗುರಪಾದ ಎಸ್ ಮರಿಗುದ್ದಿ ಮಾನವತೆಯ ಮಹಾ ಯಾನಿ ಬಸವಣ್ಣ ಎಂಬ ವಿಷಯದ ಬಗ್ಗೆ ಉಪನ್ಯಾಸ ಮಾಡುತ್ತಾ ಬಸವಣ್ಣ ನವರ ಬಗ್ಗೆ ಅಂದಿನಿಂದ ಇಂದಿನವರೆಗೂ ಬಹಳಷ್ಟು ಜನ ಮಾತನಾಡಿzರೆ ಉಪನ್ಯಾಸ ನೀಡಿ zರೆ. ಆದರೆ ಅವರ ವಿಚಾರಧಾರೆ ಗಳಿಗೆ ಕೊನೆ ಎಂಬುದು ಎಂದಿಗೂ ಇಲ್ಲ ಎಂದರು.
ಮೌಢ್ಯ, ಕಂದಾಚಾರ, ಜತಿಯತೆ, ಮೇಲು ಕೀಳುಗಳಿಂದ ಅಸಮಾನತೆಯನ್ನು ಹುಟ್ಟು ಹಾಕಿ ಸಮಾಜದಲ್ಲಿನ ಅಮಾಯಕ ಜನರನ್ನು ದಾರಿ ತಪ್ಪಿಸುತ್ತಿದ್ದ ಸಂಧರ್ಭದಲ್ಲಿ ಬಸವಣ್ಣ ಯುಗಪುರುಷನಾಗಿ ದಾರ್ಶನಿಕ ನಾಗಿ ಉದಯಿಸಿ ಇವುಗಳನ್ನು ಧಿಕ್ಕರಿಸಿ ವೈಚಾರಿಕತೆಯ ಬೀಜವನ್ನು ಬಿತ್ತಿದರು. ಈಗ ನಾವು ಸಸಿಯಾಗಿ ಕಾಪಾಡಿ ಹೆಮ್ಮರವಾಗಿ ಬೆಳೆಸಬೇಕಿದೆ ಎಂದರು.
ಅಂದಿನ ಪುರೋಹಿತಶಾಹಿ ಮನಸ್ಥಿತಿ ಇಂದಿಗೂ ಹಲವಾರಿ ರೀತಿಯಲ್ಲಿ ಹಲವಾರು ಕ್ಷೇತ್ರದಲ್ಲಿ ಸದ್ದಿಲ್ಲದೆ ತಲೆ ಎತ್ತುತ್ತಿದೆ. ಹಾಗಾಗಿ ಇಂದು ಆಸಮಾನತೆಯ ಭೇಧ ಭಾವದ ಮೇಲು ಕೀಳುಗಳ ಆಚರಣೆಗಳು ಇಂದಿಗೂ ಇದೆ. ಹಾಗಾಗಿ ಬಸವಣ್ಣ ದೇವಾಲಯ ಸಂಸ್ಕ್ರತಿಯನ್ನು ವಿರೋಧಿಸಿ ಅದಕ್ಕಿಂತ ಭಿನ್ನವಾದ ದೇಹವನ್ನೇ ದೇವಾಲಯವನ್ನಾಗಿಸಿದರು. ದೇವಾಲಯದ ಪೂಜೆಗೆ ಬದಲಾಗಿ ಇಷ್ಟ ಲಿಂಗದ ಪೂಜೆಯ ಪರಿಕಲ್ಪನೆ ಯನ್ನು ನೀಡಿದರು. ಸಾಮಾನ್ಯರೂ ಸಹ ಸ್ವತಃ ತಾವೇ ಪೂಜಿಸುವಂತೆ ಹೇಳಿದರು. ಇದಕ್ಕೆ ಸಾಕ್ಷಿಯಾಗಿ ಅನುಭವ ಮಂಟದಲ್ಲಿ ಶರಣರಿಗೆ ಇಷ್ಟ ಲಿಂಗದ ದೀಕ್ಷೆಯನ್ನು ನೀಡಿದರು ಎಂದರು.
ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ.ಧನಂಜಯ ತಮ್ಮ ಅಭಿನಂದನಾ ಭಾಷಣದಲ್ಲಿ ರಾಜಕಾರಣವೇ ಸಮಾಜ ಸೇವೆಯಲ್ಲ. ಆದರೆ ಇಂದು ರಾಜಕಾರಣವೆ ಸಮಾಜ ಸೇವೆ ಎಂಬಂತಾಗಿದೆ. ಆದರೆ ಇದು ಸರಿಯಲ್ಲ. ರಾಜಕಾರಣವೇ ಬೇರೆ ಸಮಾಜ ಸೇವೆಯೆ ಬೇರೆ. ಆದರೆ ರಾಜಕಾರಣದಲ್ಲಿ ಸಮಾಜ ಸೇವೆ ಇರಬೇಕೆ ಹೊರತು ಸಮಾಜ ಸೇವೆಯಲ್ಲಿ ರಾಜಕಾರಣ ಇರಬಾರದು ಎಂದರು.
ಎನ್,ಎಸ್. ಮಲ್ಲಿಕಾರ್ಜು ನಯ್ಯ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಾರುದ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹೇಮ, ಮಲ್ಲಿಕಾಂಬ ವಚನ ಗಾಯನ ಮಾಡಿದರು. ಕತ್ತಲಗೆರೆ ತಿಮ್ಮಪ್ಪ ಸ್ವಾಗತಿಸಿದರು. ಎಂ.ವಿರುಪಾಕ್ಷಪ್ಪ ಕಾರ್ಯಕ್ರಮ ನಿರೂಪಣೆ ಮಾಡಿದರು. ಡಾ.ಧನ್ಯ ಶ್ರೀ ಅಥಿತಿಗಳ ಪರಿಚಯ ಮಾಡಿದರು. ಶ್ರೀ ಬಸವೇಶ್ವರ ಧರ್ಮ ಸಂಸ್ಥೆಯ ಟ್ರಸ್ಟಿ ಶಿವಕುಮಾರ್ ಭಾಗವಹಿಸಿದ್ದರು. ಮಲ್ಲಿಕಾಂಬ ವಂದನಾರ್ಪಣೆ ಮಾಡಿದರು.