ಹೊನ್ನಾಳಿ: ಕಳೆದ ವರ್ಷದಿಂದ ವಿದ್ಯಾರ್ಥಿಗಳಿಗೆ ಅನುಕೂಲವಾ ಗುವಂತೆ ಆಯಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿ ಸಮನ್ವಯಾಧಿಕಾರಿಗಳ ನೇತೃತ್ವದಲ್ಲಿ ಅವರ ಕಚೇರಿಯಲ್ಲಿ ದಾಖಲೆ ಪರಿಶೀಲನೆ ಮಾಡುವಂತೆ ವ್ಯವಸ್ಥೆ ಮಾಡಿರು ವುದರಿಂದ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ವಿದ್ಯಾರ್ಥಿಗಳಿಗೆ ಅನುಕೂಲವಾ ಗುವಂತೆ ಅವರ ದಾಖಲೆ ಪರಿಶೀ ಲನೆಯನ್ನು ಇಂದು ಹೊನ್ನಾಳಿ ನಗರದ ಕ್ಷೇತ್ರ ಸಮನ್ವಯಾ ಧಿಕಾರಿ ಕಚೇರಿಯಲ್ಲಿ ದಾಖಲೆ ಪರಿಶೀಲ ನೆಗೆ ವ್ಯವಸ್ಥೆ ಮಾಡಿದರು.
ಅದರಂತೆ ಈ ಹಿಂದೆ ಜಿ ಮಟ್ಟದಲ್ಲಿ ವಿಭಾಗ ಮಟ್ಟದಲ್ಲಿ ನಡೆಯುತ್ತಿದ್ದ ದಾಖಲೆ ಪರಿಶೀಲನೆ ಕಾರ್ಯವು ಇಂದು ತಾಲೂಕು ಮಟ್ಟದಲ್ಲಿ ಆಗುತ್ತಿದೆ ಇದೊಂದು ಉತ್ತಮ ಬೆಳವಣಿಗೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ನಂಜರಾಜ್ ಅವರು ಹೇಳಿದರು ಕ್ಷೇತ್ರ ಸಮನ್ವ ಯಾಧಿಕಾರಿ ತಿಪ್ಪೇಶಪ್ಪ ಅವರು ಉಪಸ್ಥಿತರಿದ್ದರು.
ರಾಜ್ಯದ ಎ ವಿದ್ಯಾರ್ಥಿಗಳ ಪಟ್ಟಿ ನಮಗೆ ಬಂದಿದ್ದು ಅದರಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ತಾ ಲೂಕುಗಳಲ್ಲಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಮ್ಮ ಕಚೇರಿಗೆ ಕಳಿಸಿರುತ್ತಾರೆ ಅಂತ ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಶೀಲನೆ ಮಾಡುವುದು ನಮ್ಮ ಕರ್ತವ್ಯ ಎಂದು ಬಿ ಆರ್ ಸಿ ಚಂದ್ರ ಶೇಖರ್ ಅವರು ತಿಳಿಸಿದರು.
ಇಂದು ೧೨ ಗಂಟೆಯ ಒಳಗೆ ೧೦ ವಿದ್ಯಾರ್ಥಿಗಳು ದಾಖಲೆ ಪರಿ ಶೀಲನೆಗೆ ಬಂದಿದ್ದು ನಾವು ಪ್ರಯತ್ನ ಮಾಡುತ್ತಿದ್ದೇವೆ ಆದರೆ ಸರ್ವರ್ ಅನಾನುಕೂಲತೆಯಿಂದ ಕೆಲಸ ತಡವಾಗುತ್ತಿದೆ ಎಂದು ಕಂಪ್ಯೂ ಟರ್ ನಿರ್ವಾಹಕ ರವಿ ತಿಳಿಸಿದರು.
ತಾಲೂಕಿನ ಗ್ರಾಮಾಂತರ ಪ್ರದೇಶದಿಂದ ದಾಖಲೆ ಪರಿಶೀಲ ನೆಗೆ ಬಂದಿದ್ದ ವಿದ್ಯಾರ್ಥಿ ವಿದ್ಯಾ ರ್ಥಿನಿಯರು ದಾಖಲೆ ಪರಿಶೀಲನೆ ಗಾಗಿ ಕುತೂಹಲದಿಂದ ಕಾಯುತ್ತಿ ದ್ದು ಬಿ ಆರ್ ಸಿ ಕಚೇರಿ ಮುಂಭಾಗ ಕಂಡುಬಂದಿತು ಈ ಸಂದರ್ಭದಲ್ಲಿ ಬಿ ಆರ್ ಪಿ ಮಶಪ್ಪ ಡಾಟಾ ಎಂ ಟ್ರಿ ಆಪರೇಟರ್ ಶಿವಕುಮಾರ್ ಮತ್ತು ಇತರರು ಉಪಸ್ಥಿತರಿದ್ದರು.