ಅನಧಿಕೃತ ಅಂಗಡಿಗಳ ತೆರವಿಗೆ ಸೂಚನೆ…
ಶಿಕಾರಿಪುರ: ನಗರದ ಸರ್ಕಾರಿ ಆಸ್ಪತ್ರೆ ಮುಂದಿನ ಗೆಟಿನ ಬಳಿ ಇರುವ ಕ್ಯಾಂಟೀನ್ ಹಾವಳಿ ಯಿಂದ ಸಾರ್ವಜನಿಕರಿಗೆ ಶಾಲಾ ಮಕ್ಕಳಿಗೆ, ವಾಹನ ಸವಾರರಿಗೆ ಹಾಗೂ ವೈದ್ಯ ಸಿಬ್ಬಂದಿಗಳಿಗೆ ಆಗುವ ತೊಂದರೆಯನ್ನು ಗಮನಿಸಿ ಶಾಸಕ ವಿಜೇಯೇಂದ್ರ ಅವರು ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ಸಮಸ್ಯೆ ಆಲಿ ಸಿ ಕ್ಯಾಂಟೀನ್ ಹಾಗೂ ಅಂಗಡಿ ಗಳನ್ನು ತೆರವು ಗೊಳಿಸಲು ಪುರ ಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಕುರಿತು ಈಗಾಗಲೇ ಕೆಲವು ಸಂಘಟನೆಗಳು ಪ್ರತಿಭಟನೆ ನೆಡೆಸಿ ದರೂ ಯಾವುದೇ ಪರಿಣಾಮ ಆಗಿರಲಿಲ್ಲ. ಆದರೆ ಇಂದು ಶಾಸಕ ವಿಜಯೇಂದ್ರ ಅವರು ಸ್ವಯಂ ಪ್ರೇರಿತರಾಗಿ ಸ್ಥಳ ಪರಿಶೀಲನೆ ನಡೆಸಿ ಕ್ರಮಕ್ಕೆ ಸೂಚಿಸಿರುವುದು ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ಪಿಎಸ್ಐ ಪ್ರಶಾಂತ್, ಪುರಸಭೆ ಸದಸ್ಯ ರೇಣುಕಾಸ್ವಾಮಿ, ಪಾಲಾಕ್ಷಪ್ಪ , ಆಡಳಿತ ಅಧಿಕಾರಿ ಡಾ| ಶಿವಾ ನಂದ್, ಡಾ| ಅನಿಲ್ ಕುಮಾರ್ ಉಪಸ್ಥಿತರಿದ್ದರು.