ಸರ್ವರ ಹಿತ ಕಾಯುವ ಏಕೈಕ ಪಕ್ಷ ಕಾಂಗ್ರೆಸ್: ಶಾಸಕ ಶಾಂತನಗೌಡ

ಹೊನ್ನಾಳಿ: ಬೇಲಿಮಲ್ಲೂರು ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರಿಗೆ ಸರ್ಕಾರದಿಂದ ಸಿಗುವ ಎ ಸೌಲಭ್ಯಗಳನ್ನು ಅರ್ಹರಿಗೆ ಸಿಗುವಂತೆ ಕ್ರಮ ಜರುಗಿಸಬೇಕೆಂದು ಶಾಸಕ ಡಿ.ಜಿ.ಶಾಂತನಗೌಡ ನೂತನವಾಗಿ ಬೇಲಿಮಲ್ಲೂರು ಗ್ರಾಪಂ ಉಪಾಧ್ಯಕ್ಷರಾಗಿ ಆಯ್ಕೆಯಾದ ರತ್ಮಮ್ಮ ಆನಂದಪ್ಪ ಅವರಿಗೆ ಸಲಹೆ ನೀಡಿದರು.
ಅವರು ಗೊಲ್ಲರಹಳ್ಳಿಯ ನಿವಾಸದಲ್ಲಿ ನೂತನವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದ ರತ್ನಮ್ಮ ಆನಂದಪ್ಪ ಇವರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರವು ಹಿಂದಿ ನಿಂದಲೂ ಬಡವರ, ದೀನ-ದಲಿತರ ಪರವಾಗಿ ಹತ್ತು ಹಲವಾರು ಯೋಜನೆಗಳನ್ನು ಜರಿಗೊಳಿಸಿ ಸರ್ವರಿಗೂ ಸಮ ಬಾಳು ಸರ್ವರಿಗೂ ಸಮಪಾಲು ನೀಡಿ ಕೊಟ್ಟ ಭರವಸೆಗಳನ್ನು ಈಡೇರಿಸಿದ ಏಕೈಕ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಈಗಾಗಲೇ ನೀಡಿದ ಭರವಸೆ ಗಳಲ್ಲಿ ಶಕ್ತಿ ಯೋಜನೆಯನ್ನು ರಾಜ್ಯದ ಮಹಿಳೆಯರು ಸದುಪಯೋಗ ಪಡಿಸಿಕೊಳ್ಳುತ್ತಿದ್ದು ಇನ್ನುಳಿದ ಭಾಗ್ಯಗಳನ್ನು ಶೀಘ್ರದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ-ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಈಡೇರಿಸಲಿದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬೆನಕನಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಡಿ.ಎಸ್. ಸುರೇಂದ್ರಗೌಡ, ಬೇಲಿ ಮಲ್ಲೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾದ ರತ್ನಮ್ಮ ಆನಂದಪ್ಪ, ಬೇಲಿಮಲ್ಲೂರು ವಿ.ಎಸ್.ಎಸ್.ಎನ್. ನಿರ್ದೇಶಕ ವೆಂಕಟೇಶಪ್ಪ, ರವೀಶ್,ಬೀರಪ್ಪ ದೊಡ್ಡಮನೆ, ಹೊಸಕುರುಬರ ಪಾಲಾಕ್ಷಪ್ಪ, ರಮೇಶ್, ಅರಕೆರೆ ಮಧುಗೌಡ ಮತ್ತಿತರರು ಉಪಸ್ಥಿತರಿದ್ದರು.