ಜು.೧೯: ಹೆಚ್‌ಎಸ್‌ಆರ್ ನೆನಪು ಕಾರ್ಯಕ್ರಮ

ಶಿವಮೊಗ್ಗ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ) ವತಿಯಿಂದ ಜು.೧೯ರಂದು ಶಿವಮೊಗ್ಗ ಬೈಪಾಸ್ ರಸ್ತೆಯ ಮತ್ತೂರು ರಸ್ತೆಯಲ್ಲಿ ಇರುವ ರೈತ ನಾಯಕ ಹೆಚ್.ಎಸ್ ರುದ್ರಪ್ಪ ನವರ ನಿವಾಸದಲ್ಲಿ ಹೆಚ್.ಎಸ್. ರುದ್ರಪ್ಪ ನೆನಪು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘ ದ ರಾಜ್ಯ ಕಾರ್ಯದರ್ಶಿ ಮಂಜು ನಾಥ ಗೌಡ ಹೇಳಿದರು.
ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಹೆಚ್ .ಎಸ್. ರುದ್ರಪ್ಪನವರು ರೈತ ಸಂ ಘದ ಶಕ್ತಿಯಾಗಿದ್ದವರು. ೭೦ ಮತ್ತು ೮೦ರ ದಶಕದಲ್ಲಿ ರೈತರ ಪರ ಹೋರಾಡಿದವರು. ಇಡೀ ರಾಜ ದ್ಯಂತ ರೈತರಿಗಾದ ಅನ್ಯಾಯ ಖಂ ಡಿಸಿ ಸಂಘಟಿಸಿದವರು. ರೈತ ನಾ ಯಕರುಗಳಾದ ಎನ್.ಡಿ. ಸುಂದ ರೇಶ್, ಎಂ.ಡಿ ನಂಜುಂಡ ಸ್ವಾಮಿ ಅವರ ಜೊತೆಗೂಡಿ ರಾಜ್ಯ ರೈತ ಸಂಘ ಸ್ಥಾಪಿಸಿ ಆ ಮೂಲಕ ರಾಜ್ಯದ ಗಮನ ಸೆಳೆದು ಹೋರಾ ಟ ಮಾಡಿ ದವರು ಎಂದರು.
ಅಗಲಿದ ಇಂತಹ ನಾಯಕ ನನ್ನು ನೆನಪು ಮಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅವರ ನೆನಪಿನ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ. ಇದರ ರೂಪುರೇಷೆಗಳ ಬಗ್ಗೆ ಸದ್ಯದ ಲ್ಲಿಯೇ ರಾಜ್ಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗುವುದು. ರಾಜ್ಯ ದ ಎ ರೈತ ಮುಖಂಡರು ಮತ್ತು ರೈತರು ಈ ಕಾರ್ಯಕ್ರಮಕ್ಕೆ ಆಗಮಿಸಲಿzರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಧಕ್ಷ ಸಯ್ಯದ್ ಶಫಿವು, ಕಾರ್ಯದರ್ಶಿ ಹೆಚ್.ಪಿ ಸತೀಶ್, ಪ್ರಮುಖರಾದ ವಸಂತ್ ಕುಮಾ ರ್, ಉಮೇಶ್, ಹರೀಶ್ ಮೊದಲಾದವರು ಉಪಸ್ಥಿತರಿ ದ್ದರು.