ಅರ್ಚಕರನ್ನು ಪೂಜ್ಯ ಭಾವನೆಯಿಂದ ನೋಡಿ: ಸ್ವಾಮೀಜಿ
ಶಿವಮೊಗ್ಗ: ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ನಮ್ಮ ಭಾರತೀಯ ಸಮುದಾಯಗಳು ಮತ್ತು ಸಂಸ್ಕೃತಿಯನ್ನು ನೋಡಿದ ಅವರು ಸಂಸ್ಕೃತಿ ಮತ್ತು ಧರ್ಮವನ್ನು ಬೇರೆ ಬೇರೆ ಎಂದು ಇಲ್ಲಿನ ಆಚಾರ ವಿಚಾರಗಳನ್ನು ಗಮನಿಸಿ ಭಿನ್ನತೆ ಸೃಷ್ಟಿ ಮಾಡಿದರು. ಅದೇ ಶಿಕ್ಷಣ ಮತ್ತು ಕಾನೂನಾಗಿ ಇಂದಿಗೂ ಮುಂದುವರಿಯುತ್ತಿರುವುದರಿಂದ ನಮ್ಮ ಪ್ರಾಚೀನ ಸಂಸ್ಕೃತಿ ಮತ್ತು ಧರ್ಮಕ್ಕೆ ಹಿನ್ನಡೆಯಾಗಿದೆ ಎಂದು ಕೂಡಲಿ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಶ್ರೀಮದ್ ಜಗದ್ಗು ರು ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿಗಳವರು ಹೇಳಿ zರೆ.
ಅವರು ಇಂದು ನಗರದ ರವೀ ಂದ್ರನಗರ ಶ್ರೀ ಪ್ರಸನ್ನಗಣಪತಿ ದೇವಸ್ಥಾನದಲ್ಲಿ ದೇವಸ್ಥಾಶನ ಸಮಿತಿ ವತಿಯಿಂದ ಹಮ್ಮಿಕೊಂ ಡಿದ್ದ ಸಾಮಸಂಹಿತಾ ಯಾಗ, ಚತುರ್ವೇದ ಪಾರಾಯಣ, ಶ್ರೀ ಪ್ರಸನ್ನಗಣಪತಿ ಅನುಗ್ರಹ ಪ್ರಶಸ್ತಿ , ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಾಗದ ಪೂರ್ಣಾಹುತಿ ನೆರವೇರಿಸಿ ಅನು ಗ್ರಹ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಆಶೀರ್ವಚನ ನೀಡಿದರು.
ಬ್ರಿಟಿಷರು ಪಾಶ್ಚಿಮಾತ್ಯ ಅನುಭವದ ಮೂಲಕ ನಮ್ಮನ್ನು ಮತ್ತು ನಮ್ಮ ಸಂಸ್ಕೃತಿಯನ್ನು ಅನುವಾದ ಮಾಡಿದ್ದರಿಂದ ಸಂಸ್ಕೃತಿ ಬದಲಾಗಲ್ಲ. ಎ ವ್ಯಕ್ತಿಗಳು ಹುಟ್ಟುವಾಗ ಪಶುವಿನಂತೆ ಇರು ತ್ತಾರೆ. ಅವರಿಗೆ ಶಿಕ್ಷಣ, ಸಂಸ್ಕಾರ ನೀಡಿದ ಮೇಲೆ ವ್ಯಕ್ತಿಯಾಗಿ ರೂಪುಗೊಳ್ಳುತ್ತಾರೆ. ಕಾಲಕ್ಕೆ ತಕ್ಕ ಹಾಗೆ ಸುಶಿಕ್ಷಿತ ವ್ಯಕ್ತಿಯೊಬ್ಬ ಸಂದ ರ್ಭಾನುಸಾರ ಹೇಗೆ ವರ್ತಿಸು ತ್ತಾನೋ ಅದೇ ಧರ್ಮ ಎಂದು ಅನಿಸಲ್ಪಟ್ಟಿದೆ. ಉದಾ. ಮಳೆ ಬಂದಾಗ ಕೊಡೆ ಹಿಡಿಯುವುದು ಧರ್ಮ. ಆದರೆ ಮಳೆ ಬಾರದಂತೆ ತಡೆಹಿಡಿದರೆ ಅದು ಅಧರ್ಮ. ಸುಶಿಕ್ಷಿತ ವ್ಯಕ್ತಿಗಳ ನಿರ್ಧಾರವೇ ಧರ್ಮ ಎಂದು ಶ್ರುತಪಟ್ಟಿದೆ. ವಿದೇಶೀ ವಿಚಾರದ ಮೇಲೆ ಮಾಡಿ ದ ಕಾನೂನುಗಳು ಮತ್ತು ಅದರ ಕನ್ನಡೀಕರಣ ಆದಮಾತ್ರಕ್ಕೆ ಅದು ನಮ್ಮದಾಗುವುದಿಲ್ಲ ಎಂದರು.
ಲೋಕಕಲ್ಯಾಣಾರ್ಥ ಹೋಮದಿಂದ ನಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಕಲ್ಯಾಣವಾ ಗುತ್ತದೆ ಎಂದರೆ ಕೆಲವರು ಬ್ರಾಹ್ಮ ಣರು ಹೊಟ್ಟೆ ಹೊರೆದುಕೊಳ್ಳಲು ಇದೆಲ್ಲ ಮಾಡುತ್ತಾರೆ ಎನ್ನುತ್ತಾರೆ. ಆದರೆ ಬ್ರಾಹ್ಮಣರು ಗುರುಗಳು ಇದ್ದ ಹಾಗೆ. ಗುರುಗಳೆಂದರೆ ತಂದೆಯ ಸಮಾನ. ಬಾಲ್ಯದಿಂದ ತಂದೆ ಎ ಸಂಸ್ಕಾರ ಮತ್ತು ಬೇಕಾ ದ ಎ ವಸ್ತುಗಳನ್ನು ಮಕ್ಕಳಿಗೆ ಒದಗಿಸುವ ಹಾಗೆ ಗುರುಗಳು ಕೂಡ ವ್ಯಕ್ತಿಗೆ ಬೇಕಾದ ಎ eನವನ್ನು ನೀಡುತ್ತಾರೆ. ಕಾಲ ಬದಲಾದ ಹಾಗೆ ಎಲ್ಲವೂ ಧರ್ಮದ ಮೇಲೆ ಪರಿಣಾಮ ಉಂಟಾಗಿಲ್ಲ. ಕಾರಣ ಅದು ಸಮಯಕ್ಕೆ ತಕ್ಕ ಹಾಗೆ ಅನು ಷ್ಠಾನ ವಿಧಾನಗಳನ್ನು ಕೂಡ ವಿಕಾಸ ಮಾಡುತ್ತಾ ಬಂದಿದೆ ಎಂದರು.
ಕಳೆದ ೩೩ ವರ್ಷಗಳಿಂದ ಅ.ಪ.ರಾಮಭಟ್ಟರು ಚತುರ್ವೇದ ಪಾರಾಯಣ ಮತ್ತು ಯಾಗಗ ಳನ್ನು ಮಾಡುತ್ತಾ ಬಂದಿzರೆ. ವೇದದ ಎ ಶಾಖೆಗಳ ಯಾಗ ವನ್ನು ಕೂಡ ಮಾಡಬೇಕು. ವೇದದ ಕೆಲವು ಶಾಖೆಗಳ ಪುಸ್ತಕ ಲಭ್ಯವಿವೆ. ಆದರೆ ಅದನ್ನು ಅಧ್ಯಯನ ಮಾಡಿ ದವರು ಇzಗ ಮಾತ್ರ ಅದನ್ನು ನಶಿಸದಂತೆ ಕಾಪಾಡಬಹುದು ಎಂದರು.
ಅರ್ಚಕರು ಸೇವೆ ನೀಡುವ ವರು ಎಂದು ಬ್ರಿಟಿಷರು ಭಾವಿಸಿ ದ್ದರು. ಆದರೆ ಅರ್ಚಕರು ಮತ್ತು ಪುರೋಹಿತರು ತಂದೆಯ ಸಮಾನ ಎಂಬ ಭಾವನೆ ನಮ್ಮಲ್ಲಿರಬೇಕು. ಅವರ ಹಣಕ್ಕಾಗಿ ಕೆಲಸ ಮಾಡು ವವರು ಎಂಬ ಭಾವನೆ ಬಿಟ್ಟು ಪೂಜ್ಯ ಭಾವನೆಯಿಂದ ನೋಡ ಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾತೆಯ ರಿಗೆ ಹಲವು ದಶಕಗಳಿಂದ ಸೌಂದ ರ್ಯಲಹರಿ, ಸ್ತೋತ್ರ, ಭಜನೆ ಮತ್ತು ಕೀರ್ತನೆಗಳನ್ನು ಕಲಿಸಿದ ಶ್ರೀಮತಿ ಕಾಮಾಕ್ಷಮ್ಮ ಮತ್ತು ಶ್ರೀಮತಿ ರಾಜಲಕ್ಷ್ಮಿ ಇವರಿಗೆ ಶ್ರೀ ಪ್ರಸನ್ನಗಣಪತಿ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಪಿ.ಶೇಷಾದ್ರಿ, ಧರ್ಮದರ್ಶಿ ಎನ್. ಉಮಾಪತಿ, ಶಬರೀಶ್ ಕಣ್ಣನ್, ಶಂಕರ ಭಟ್ ಮತ್ತಿತರರು ಉಪಸ್ಥಿತರಿದ್ದರು.