ವಚನ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ಶ್ರೇಷ್ಟತೆಯನ್ನು ತಂದು ಕೊಟ್ಟ ಸಾಹಿತ್ಯ
ಭದ್ರಾವತಿ: ಕನ್ನಡ ಸಾಹಿತ್ಯಕ್ಕೆ ಒಂದು ಶ್ರೇಷ್ಠತೆಯನ್ನು ತಂದು ಕೊಟ್ಟು ಅದರ ಶ್ರೀಮಂತಿಕೆಯನ್ನು ಹೆಚ್ಚಿಸಿದ ಹಾಗು ಜಗತಿಕ ಮಹತ್ವವನ್ನು ತಂದು ಕೊಟ್ಟ ಸಾಹಿತ್ಯ ಎಂದರೆ ಅದು ಕನ್ನಡ ಭಾಷೆಯಲ್ಲಿನ ವಚನ ಸಾಹಿತ್ಯ ಎಂದು ಜವಳ್ಳಿಯ ಓಪನ್ ಮೈಂಡ್ ವರ್ಲ್ಡ್ ಸ್ಕೂಲ್‌ನ ಶಿಕ್ಷಕಿ ಬಿ.ಮಮತ ನವೀನ್ ತಿಳಿಸಿದರು.
ಅವರು ನಗರದ ವೀರಶೈವ ಲಿಂಗಾಯಿತ ಮಹಿಳಾ ಸಮಾಜ ಮತ್ತು ಕನ್ನಡ ಸಾಹಿತ್ಯ ಪರಿಷತ್‌ನ ಸಹಯೋಗದೊಂದಿಗೆ ಹಳೇ ನಗರದ ಶ್ರೀವೀರಭದ್ರೇಶ್ವರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ದತ್ತಿ ದಾನಿಗಾಳಾದ ಡಾ.ವಿಜಯದೇವಿ ಅವರ ಶ್ರೀಮತಿ ಸರ್ವಮಂಗಳಮ್ಮ ಶ್ರೀ ಶಿವಶಂಕರಯ್ಯ ದತ್ತಿ ಹಾಗು ದತ್ತಿ ದಾನಿ ಎಂ.ವಾಗೀಶ್ ಕೋಠಿ ಅವರ ಶ್ರೀ ಮಲ್ಲಿಕಾರ್ಜುನ ಕೋಠಿ ರವರುಗಳ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದರು.
ಇಂತಹ ಮಹತ್ತರವಾದ ಮಹತ್ವವನ್ನು ಹೊಂದಿರುವ ವಚನ ಸಾಹಿತ್ಯವನ್ನು ಬಸವಾದಿ ಶಿವ ಶರಣರು ರಚಿಸಬೇಕು ಎಂಬ ಉದ್ದೇಶದಿಂದ ಬರೆದವರಲ್ಲ. ಆದರೆ ಅವರುಗಳು ತಮ್ಮ ಜೀವನ ದಲ್ಲಿನ ದಿನ ದಿನಗಳ ತಮ್ಮ ಅನುಭವ ಹಾಗು ಸಮಾಜದಲ್ಲಿ ನಡೆಯುತಿದ್ದ ಘಟನೆಗಳಿಂದ ನೊಂದು ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು ಎಂಬ ದೃಷ್ಟಿಯಿಂದ ವಚನ ಸಾಹಿತ್ಯ ವನ್ನು ಸರಳ ಕನ್ನಡದಲ್ಲಿ ರಚಿಸಿ ಜನ ಸಾಮಾನ್ಯರಿಗೆ ಅರ್ಥ ಆಗುವ ರೀತಿಯಲ್ಲಿ ಹಾಗು ಆದರ್ಶ ಜೀವನ ರೀತಿ ನೀತಿಗಳಂತೆ ನಡೆಸುವಂತೆ ಉಪದೇಶಿಸಿ ರಚಿಸಿ ಕೊಟ್ಟ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ ಎಂದರು.
ವಚನ ಸಾಹಿತ್ಯವು ರಾಮಾಯಣ, ಮಹಾಭಾರತ, ಪುರಾಣಗಳಲ್ಲಿ ಇರುವ ಸಂಗತಿಗಳನ್ನು ಆಯ್ದುಕೊಳ್ಳಲಿಲ್ಲ. ಆದರೆ ಸಮಾಜದಲ್ಲಿ ನಡೆಯುತ್ತಿದ್ದ ಅಸಮಾನತೆ, ಅಧರ್ಮ, ಅನ್ಯಾಯ, ಮೂಢನಂಬಿಕೆಗಳು, ಢಾಂಭೀಕತನ, ಇತರ ಸಂಗತಿಗಳನ್ನು ತೊಡೆದು ಹಾಕಿ ಸಮಾಜವನ್ನು ಸುಧಾರಣೆ ಮಾಡುವುದು ಶಿವಭಕ್ತಿ ಯನ್ನು ಪ್ರಸಾರ ಮಾಡುವುದಾ ಗಿತ್ತು. ಆದರೆ ಇದರಲ್ಲಿ ಯಾವುದೆ ರೀತಿಯ ತಾರತಮ್ಯ, ಜತಿಯತೆ ಎಂಬುದು ಸುಳಿಯದಂತೆ ನೋಡಿ ಕೊಂಡರು ಎಂದರು.
ಸಮಾಜದಲ್ಲಿನ ವಿವಿಧ ಕಾಯಕಗಳನ್ನು ಮಾಡುತ್ತಿದ್ದ ವಚನಕಾರರು ಅನುಭವ ಮಂಟಪ ದಲ್ಲಿ ಕುಳಿತು ರಚಿಸಿದ ವಚನಗಳು ನಿರಾಭರಣ ಸುರಿದಂತೆ ಮನ ಸೇಳೆಯುತ್ತದೆ. ಇಂತಹ ವಚನಗಳು ಭಾರತದ ದೇಶದ ಬೇರೆ ಯಾವ ದೇಶಗಳ ಭಾಷೆಗಳಲ್ಲೂ ಇಲ್ಲ ಹಾಗು ರಚಿತವಾಗಿಲ್ಲ ಎಂಬುದು ಹೆಮ್ಮೇಯ ಸಂಗತಿ. ಕನ್ನಡ ಭಾಷೆ ಸಾಹಿತ್ಯದಿಂದ ವಿಶ್ವ ಸಾಹಿತ್ಯಕ್ಕೆ ಏನಾದರೂ ಕೊಡುಗೆ ಕೊಡ ಬೇಕೆಂದಿದ್ದರೆ ಆಗ ನಾವು ವಚನ ಸಾಹಿತ್ಯವನ್ನೇ ಆರಿಸಿಕೊಳ್ಳಬೇಕಾ ಗುತ್ತದೆ ಎಂದರು.
ಈ ರಚನೆಯಲ್ಲಿ ಜತಿ ಮತ ಪಂಥಗಳ ಪ್ರಶ್ನೆ ಇರಲಿಲ್ಲ. ಹಗ್ಗ ಹೊಸೆಯುವವ, ಸೌದೆ ಹೊರುವವ, ಚಪ್ಪಲಿ ಹೋಲೆಯುವವ, ಅಕ್ಕಸಾಲಿಗ, ಅಗಸ, ಬೇಡ, ಬೇಸ್ತ, ವೈದ್ಯ, ಸೇರಿದಂತೆ ಇತರರ ವೃತ್ತಿಯನ್ನು ಮಾಡುತ್ತಿರುವವರೆಲ್ಲರೂ ವೇದ ಓದುವ ಕಲಿತ ಬ್ರಾಹ್ಮಣರಷ್ಟೆ ಶ್ರೇಷ್ಟರು ಎಂದರಲ್ಲದೆ. ಇದರ ಜೋತೆಯಲ್ಲಿ ಮಹಿಳೆಯರಿಗೂ ಸಮಾನತೆಯ ಅವಕಾಶವನ್ನು ನೀಡಿದರು ಎಂದರು.
ಜಿ ಕಸಾಪ ಅಧ್ಯಕ್ಷ ಕಾರ್ಯಕ್ರಮ ಉಧ್ಘಾಟಿಸಿದರು. ಡಾ. ವಿಜಯದೇವಿ, ವಾಗೀಶ್ ಕೋಠಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕೋಡ್ಲು ಯಜ್ಞಯ್ಯ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಮಾಜಿ ಅಧ್ಯಕ್ಷೆ ಹಾಗು ಕನ್ನಡ ಸಾಹಿತ್ಯ ಸಾಂಸ್ಕ್ರತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್.ಸುಧಾಮಣಿ, ಕನ್ನಡ ಜನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಆರ್.ರೇವಣಪ್ಪ, ವೀರಶೈವ ಲಿಂಗಾಯಿತ ಮಹಿಳಾ ಸಮಾಜದ ಅಧ್ಯಕ್ಷೆ ಆರ್.ಎಸ್. ಶೋಭಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಗರಸಭಾ ಸದಸ್ಯೆ ಅನುಪಮ ಚನ್ನೇಶ್ ಪ್ರಾರ್ಥಿಸಿದರು. ರಾಜೇಶ್ವರಿ ಸ್ವಾಗತಿಸಿದರು. ಪರಿಮಳ ಅಥಿತಿಗಳ ಪರಿಚಯ ಮಾಡಿದರು. ತಿಮ್ಮಪ್ಪ ಪ್ರಸ್ತಾವಿಕ ಭಾಷಣ ಮಾಡಿದರು. ಎಂ.ಇ.ಜಗದೀಶ್ ವಂದನಾರ್ಪಣೆ ಮಾಡಿದರು. ನಾಗರತ್ನ ಕೋಠಿ ವಂದನಾರ್ಪಣೆ ಮಾಡಿದರು.