ಸರ್ಕಾರ ಖಾಸಗಿ ಬಸ್‌ಗಳಿಗೂ ಉಚಿತ ಪ್ರಯಾಣ ವಿಸ್ತರಿಸಿ…

ಶಿಕಾರಿಪುರ : ಈಗಾಗಲೇ ಕಾಂಗ್ರೆಸ್ ಸರ್ಕಾರ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದಂತೆ ಖಾಸಗಿ ಬಸ್‌ಗಳಿಗೂ ಮಾನ್ಯತೆ ನೀಡುವ ಮೂಲಕ ಉಚಿತ ಪ್ರಯಾಣದ ವ್ಯವಸ್ಥೆಯನ್ನು ವಿಸ್ತರಿಸಲಿ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಚಂದ್ರಕಾಂತ್ ರೇವಣ್‌ಕರ್ ಆಗ್ರಹಿಸಿದ್ದಾರೆ.
ರಾಜ್ಯದ ೧೭ ಜಿಗಳಲ್ಲಿ ಸುಮಾರು ೨೦ ಸಾವಿರಕ್ಕೂ ಅಧಿಕ ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದು, ಖಾಸಗಿ ಬಸ್‌ಗಳ ಮಾಲೀಕರು ತಪ್ಪದೇ ತೆರಿಗೆ ಕಟ್ಟುತ್ತಾ ಬಂದಿದ್ದಾರೆ. ವರ್ಷಕ್ಕೆ ಒಂದು ಬಸ್ಸಿಗೆ ಲಕ್ಷಾಂತರ ರೂಪಾಯಿಗಳು ತೆರಿಗೆ, ಡೀಜಲ್ ಹೀಗೆ ವ್ಯಯಿಸುತ್ತಾ ಬಂದಿದ್ದಾರೆ.
ಖಾಸಗಿ ಬಸ್ ವ್ಯವಸ್ಥೆಯಲ್ಲಿ ಸುಮಾರು ೨೦ ರಿಂದ ೩೦ ಲಕ್ಷ ಕಾರ್ಮಿಕರು ತಮ್ಮ ಜೀವನದ ನೆಲೆ ಕಂಡುಕೊಂಡಿದ್ದಾರೆ ಎಂದರು.
ಸರ್ಕಾರ ಖಾಸಗಿ ಬಸ್‌ಗಳ ನೆರವಿಗೆ ಬರದಿದ್ದರೆ ಸುಮಾರು ೨೦ ಸಾವಿರ ಬಸ್‌ಗಳನ್ನ ಎಲ್ಲಿ ಬೇಕಂದರಲ್ಲಿ ಡಿ.ಸಿ. ಕಛೇರಿ, ಆರ್.ಟಿ.ಓ. ಕಛೇರಿ, ತಾಲೂಕ್ ಆಪೀಸ್, ಬಸ್ಟಾಂಡ್ ಹತ್ತಿರ ನಿಲ್ಲಿಸಿ ಬಸ್ ಮಾಲೀಕ ಆತ್ಮಹತ್ಯೆಗೆ ಶರಣಾಗಬೇಕಾದ ಸಂದರ್ಭ ಬಂದೊದಗುವ ಸಾಧ್ಯತೆಯಿದ್ದು, ಈ ಮೂಲಕ ಲಕ್ಷಾಂತರ ಕಾರ್ಮಿಕರು ಬೀದಿ ಪಾಲಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿರುವ ಅವರು, ತಕ್ಷವೇ ಸರ್ಕಾರ ಖಾಸಗಿ ಬಸ್‌ಗಳ ತೆರಿಗೆ ಸೇರಿದಂತೆ ಇನ್ನಿತರ ವಿನಾಯಿತಿ ನೀಡುವ ಮೂಲಕ ಅವರ ನೆರವಿಗೆ ಬರುವಂತೆ ಆಗ್ರಹಿಸಿದ್ದಾರೆ.