ಸರ್ಕಾರಿ ಶಾಲೆಗೆ ರೋಟರಿ ಉತ್ತರದಿಂದ ಬ್ಯಾಂಡ್ ಸೆಟ್
ಶಿವಮೊಗ್ಗ: ಸೇವೆಯೇ ನಮ್ಮ ಪ್ರಮುಖ ಆಶಯ. ಸರ್ಕಾರಿ ಶಾಲೆ ಸೇರಿದಂತೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ವರ್ಷಪೂರ್ತಿ ಸೇವಾ ಚಟುವಟಿಕೆಗಳನ್ನು ನಡೆಸಿದ್ದೇವೆ ಎಂದು ರೋಟರಿ ಶಿವಮೊಗ್ಗ ಉತ್ತರ ಕ್ಲಬ್ ಅಧ್ಯಕ್ಷ ಸಜ ಜಗದೀಶ್ ಹೇಳಿದರು.
ಶಿವಮೊಗ್ಗ ನಗರದ ಗಾಡಿಕೊಪ್ಪ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಶಿವಮೊಗ್ಗ ಉತ್ತರ ಕ್ಲಬ್ ವತಿಯಿಂದ ಬ್ಯಾಂಡ್ ಸೆಟ್ ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದಿನ ಸಾಲಿನ ಜುಲೈನಿಂದ ಈವರೆಗೂ ನೂರಾರು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದೇವೆ. ಸರ್ಕಾರಿ ಶಾಲೆಗಳಿಗೆ ವಿವಿಧ ರೀತಿ ಅಗತ್ಯ ಸೌಕರ್ಯ ಗಳನ್ನು ಒದಗಿಸುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳ ಜತೆಯಲ್ಲಿ ಸಾಮಾ ಜಿಕ, ದೈಹಿಕ ಹಾಗು ಮಾನಸಿಕವಾಗಿ ಸದೃಢ ಆಗಬೇಕು. ನಾವು ಕೊಟ್ಟಂ ತಹ ಬ್ಯಾಂಡ್ ಸೆಟ್ ಅನ್ನು ಸರಿ ಯಾಗಿ ಉಪಯೋಗಿಸುವ ಮನೋಭಾವ ನಿಮ್ಮದಾಗಬೇಕು. ಈ ಮೂಲಕ ದೇಶಭಕ್ತಿ ಹಾಗೂ ದೈವಭಕ್ತಿ ಬೆಳಸಿಕೊಳ್ಳಬೇಕು ಎಂದರು. ಮಾಜಿ ಸಹಾಯಕ ಗವರ್ನರ್ ಯು.ರವೀಂದ್ರನಾಥ್ ಐತಾಳ್ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಹಾಗೂ ದೈಹಿಕ ಶಿಕ್ಷಣಗಳು ಅಗತ್ಯವಾಗಿ ಬೇಕಾಗು ತ್ತದೆ. ಈ ನಿಟ್ಟಿನಲ್ಲಿ ಇಂದು ರೋಟರಿ ಉತ್ತರದ ಬ್ಯಾಂಡ್ಸೆಟ್ ಕೊಡುಗೆ ಯಿಂದ ಮಕ್ಕಳ ಎ ಕಾರ್ಯ ಕ್ರಮಗಳಿಗೂ ಸಹಕಾರಿ ಯಾಗುತ್ತದೆ ಎಂದು ಅಭಿಪ್ರಾಯಪಟ್ಟರು
ಇದೇ ಸಂದರ್ಭದಲ್ಲಿ ಗಾಡಿಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬ್ಯಾಂಡ್ ಸೆಟ್ ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾರ್ಯದರ್ಶಿ ಬಸವರಾಜಪ್ಪ, ಹಾಲಪ್ಪ ಎಮ್, ಉಮೇಶ, ಸದಸ್ಯರಾದ ವಾರಿಜ ಜಗದೀಶ ಮತ್ತು ರಮೇಶ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಚಲುವರಾಜ ವಂದನಾರ್ಪಣೆ ಮಾಡಿದರು.