ಶಿವಮೊಗ್ಗ: ವಿದ್ಯುತ್ ದರ ಹೆಚ್ಚಳ, ನಿಗಧಿತ ದರ ಕೂಡ ಹೆಚ್ಚಳ ಮಾಡಿರುವುದರಿಂದ ಕೈಗಾರಿಕೆ, ಉದ್ಯಮಗಳಿಗೆ ತೊಂದರೆ ಉಂಟಾಗಲಿದ್ದು, ಮುಚ್ಚಿಹೋಗುವ ಸಾಧ್ಯತೆ ಇದೆ. ಕೈಗಾರಿಕೆ ಉದ್ಯಮ ಗಳ ಉಳಿವಿಗಾಗಿ ದರ ಕಡಿಮೆ ಮಾಡಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಮೆಸ್ಕಾಂ ಅಧಿಕಾರಿ ಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ವಿದ್ಯುತ್ ದರ ಹೆಚ್ಚಳ ಮಾಡಿರುವುದು ಕೈಗಾರಿಕೆ, ಉದ್ದಿಮೆಗಳಿಗೆ ಮಾತ್ರವಲ್ಲ. ಗೃಹೋಪಯೋಗಿ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದೆ. ಪ್ರಸ್ತುತ ವಿದ್ಯುತ್ ದರ ಏರಿಕೆಯಿಂದ ಆಗಿರುವ ಸಮಸ್ಯೆಗಳನ್ನು ಗಮನಿಸಿ ಕೂಡಲೇ ದರ ಇಳಿಸಬೇಕು ಎಂದು ತಿಳಿಸಿದರು.
ವಿದ್ಯುತ್ ದರ ವಿಚಾರದಲ್ಲಿ ಕೈಗಾರಿಕೆಗಳಿಗೆ ಸಂಬಂಧಿಸಿ ನಿಗಧಿತ ದರ ಕೂಡ ಹೆಚ್ಚಿಸಿದ್ದು, ಇದರಿಂದ ಉದ್ಯಮಗಳಿಗೆ ತೀವ್ರ ನಷ್ಟ ಉಂಟಾ ಗುತ್ತಿದೆ. ಉದ್ದಿಮೆಗಳು ಮುಚ್ಚಿ ಹೋಗುವ ಸಾಧ್ಯತೆ ಇರುವುದ ರಿಂದ ದರ ಕಡಿಮೆ ಮಾಡಬೇಕು ಅಥವಾ ಸರ್ಕಾರದಿಂದ ನಿಗಧಿತ ದರದ ಸಬ್ಸಿಡಿ ನೀಡಬೇಕು ಎಂದು ಅಧಿಕಾರಿಗಳಿಗೆ ಸರ್ಕಾರದ ಗಮನಕ್ಕೆ ತರುವಂತೆ ಮನವಿ ಮಾಡಿದರು.
ಮೆಸ್ಕಾಂ ಅಧಿಕಾರಿಗಳು ಪ್ರತಿಕ್ರಿಯಿಸಿ, ಪ್ರಸ್ತುತ ವಿದ್ಯುತ್ ದರ ಹೆಚ್ಚಾಗಿರುವ ಹಾಗೂ ದರ ಹೆಚ್ಚಳ ಮಾಡುವ ಸಮಯದಲ್ಲಿ ಪಾಲಿಸುವ ನಿಯಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸಲಾಗು ವುದು. ಕೆಇಆರ್‌ಸಿ ಸ್ವಾಯತ್ತ ಸಂಸ್ಥೆಯು ವಿದ್ಯುತ್ ದರ ಪರಿಷ್ಕರಣೆಯ ನಿರ್ಧಾರ ತೆಗೆದು ಕೊಳ್ಳುತ್ತದೆ. ಕೆಇಆರ್‌ಸಿ ಆದೇಶ ವನ್ನು ಎಸ್ಕಾಂಗಳು ಪಾಲಿಸುತ್ತವೆ ಎಂದು ಉತ್ತರಿಸಿದರು.
ಮೆಸ್ಕಾಂ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ವೀರೇಂದ್ರ, ಎಇಇ ಸುರೇಶ್, ಶಿವಮೊಗ್ಗ ಜಿ ವಾಣಿಜ್ಯ ಸಂಘದ ಪದಾಧಿಕಾರಿಗಳಾದ ಬಿ. ಗೋಪಿನಾಥ್, ವಸಂತ ಹೋಬಳಿದಾರ್, ಜಿ. ವಿಜಯ ಕುಮಾರ್, ಗಣೇಶ್ ಎಂ ಅಂಗಡಿ, ಇ.ಪರಮೇಶ್ವರ್, ರಮೇಶ್ ಹೆಗಡೆ, ಮರಿಸ್ವಾಮಿ, ಸುಕುಮಾರ್, ಡಿ.ಎಸ್. ಚಂದ್ರಶೇಖರ್ ಇನ್ನಿತರಿದ್ದರು.