ತಾಲೂಕಿನಾದ್ಯಾಂತ ಜನುವಾರುಗಳಿಗೆ ಲಸಿಕೆ..

ಕುಕನೂರು : ಕಳೆದ ವರ್ಷ ಜನುವಾರಗಳನ್ನು ಪೀಡಿಸಿದ ಚರ್ಮಗಂಟು ರೋಗ ಮರುಕಳಿಸ ಬಾರದು ಎಂಬ ಉದ್ದೇಶದಿಂದ ಗೋಟ್ ಫಾಕ್ಸ್ ಕ್ರಾಸ್ ಹೂಮಿನಿಟಿ ಲಸಿಕೆಯನ್ನು ತಾಲೂಕಿನಾದ್ಯಂತ ಮನೆಮನೆಗೆ ತೆರಳಿ ಜನುವಾರು ಗಳಿಗೆ ಲಸಿಕೆ ನೀಡುವ ಅಭಿಯಾನ ಪ್ರಾರಂಭಗೊಂಡಿರುತ್ತದೆ.
ತಾಲೂಕಿನ ಮಂಡಲಗಿರಿ ಬಟಪ್ಪನಹಳ್ಳಿ ಸೋಂಪುರ ಚಿಕ್ಕೇನಕೊಪ್ಪ ಸೇರಿದಂತೆ ಇತರೆ ಹಳ್ಳಿಗಳಲ್ಲಿ ಜನುವಾರುಗಳಿಗೆ ಚರ್ಮಗಂಟು ರೋಗ ಹರಡದಂತೆ ಅಗತ್ಯ ಲಸಿಕೆ ಹಾಕುವ ಮೂಲಕ ಲಸಿಕಾ ಅಭಿಯಾನ ನಿಮಿತ್ತ ಸತತ ಎರಡು ದಿನಗಳ ಕಾಲ ತಾಲೂಕಿನ ಪ್ರತಿ ಮನೆ ಮನೆಗೆ ತೆರಳಿ ಜನುವಾರುಗಳಿಗೆ ಲಸಿಕೆ ಹಾಕುವ ಉದ್ದೇಶ ಹೊಂದಲಾಗಿದೆ.
ಲಸಿಕೆ ಹಾಕಲು ಯಾವ ದಿನ ಯಾವ ಗ್ರಾಮಕ್ಕೆ ಆಗಮಿಸುತ್ತಿದ್ದೇವೆ ಎಂದು ಆಯಾ ಗ್ರಾಪಂಗಳಿಗೆ ಮೊದಲೇ ಮಾಹಿತಿ ನೀಡಿ ಗ್ರಾಮದ ಜನುವಾರು ಹೊಂದಿರುವವರ ರೈತ ವರ್ಗ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಿ ಪ್ರಚಾರ ಕಾರ್ಯ ಕೈಗೊಳ್ಳಲು ತಿಳಿಸಲಾಗಿದೆ.
ಒಂದೇ ಸ್ಥಳದಲ್ಲಿ ಎ ಜನುವಾರುಗಳನ್ನು ಸೇರಿಸಿ ಲಸಿಕೆ ನೀಡುವುದರಿಂದ ರೋಗ ಹರಡುವ ಸಾಧ್ಯತೆ ಹೆಚ್ಚಾಗಿದ್ದು ಅದರ ಬದಲಾಗಿ ಪ್ರತಿ ಮನೆಮನೆಗೆ ಸಿಬ್ಬಂದಿಗಳೇ ತೆರಳಿ ಲಸಿಕೆ ನೀಡಿ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಲಾಗಿದೆ ಎಂದು ಇಲಾಖೆ ತಿಳಿಸಿರುತ್ತದೆ.
ಈ ತಿಂಗಳ ಅಂತ್ಯದವರೆಗೆ ತಾಲೂಕಿನಲ್ಲಿ ಅಭಿಯಾನ ಕಾರ್ಯ ಜರುಗಲಿದ್ದು ಸರ್ಕಾರದ ನಿರ್ದೇಶನದಂತೆ ಎಮ್ಮೆಗಳನ್ನು ಹೊರತುಪಡಿಸಿ ಚಿಕಿತ್ಸೆ ನೀಡಲು ನಿರ್ದೇಶನ ಮಾಡಿದ್ದು ಅದರಂತೆ ತಾಲೂಕಿನ ೨೫,೦೦೦ ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು ರೈತ ವರ್ಗ ದವರು ಹಾಗೂ ಸಾರ್ವಜನಿಕರು ಸಹಕರಿಸಿ ಅಭಿಯಾನದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಪಶು ವೈದ್ಯ ಡಾ. ಸುರೇಶ ಸರಗಣಾಚಾರಿ, ಸಿಬ್ಬಂದಿಗಳಾದ ಶರಣಪ್ಪ ಗಾಳಿ ಮಲ್ಲಪ್ಪ ದಳವಾಯಿ, ಮಾರುತಿ ಕುರಿ, ಇನ್ನಿತರರು ಪಾಲ್ಗೊಂಡಿದ್ದರು.