ಪಕ್ಷದ ನಿಷ್ಠಾವಂತ ಕಾರ್ಯಕರ್ತರ ತ್ಯಾಗದ ಫಲವೇ ಬಿಜೆಪಿ ಇಂದು ಅಧಿಕಾರಕ್ಕೇರಲು ಕಾರಣ: ಬಿವೈಆರ್
ಭದ್ರಾವತಿ: ಬಿಜೆಪಿ ಪಕ್ಷವು ಕೇವಲ ರಾಜಕೀಯ ಪಕ್ಷವಾಗಿರದೆ ಸಾಮಾಜಿಕ ಸಂಘಟನೆಯಾಗಿದೆ. ಕೇವಲ ಅಧಿಕಾರದ ಗುರಿಯನ್ನು ಹೊಂದದೆ ಅವಕಾಶ ದೊರೆತಾಗ ಅನುಷ್ಟಾನ ಇಲದಿದ್ದಲ್ಲಿ ಹೋರಾಟ ಮಾಡುವುದು ಪಕ್ಷದ ಧ್ಯೆಯ ವಾಗಿದೆ. ಇದಕ್ಕೆ ಪಕ್ಷದ ಪ್ರಾಮಾಣಿಕ ನಿಷ್ಟಾಂತ ಕಾರ್ಯರ್ತರುಗಳ ನಿಸ್ವಾರ್ಥ ಸೇವೆ ತ್ಯಾಗ ಹೋರಾಟದ ಮನೋಭಾವಗಳ ಫಲವಾಗಿ ಇಂದು ಪಕ್ಷವು ಅಧಿಕಾರ ನಡೆಸುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಹಿರಿಯ ಕಾರ್ಯ ಕರ್ತರುಗಳ ಸಮ್ಮಿಲನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನರೇಂದ್ರ ಮೋದಿಯವರು ದೇಶದ ಪ್ರಧಾನ ಮಂತ್ರಿಯಾಗಿ ಸಮರ್ಥ ಆಡಳಿತ ನಡೆಸುತ್ತಿರುವ ಫಲವಾಗಿ ದೇಶದ ಗೌರವ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಖ್ಯಾತಿ ಹೊಂದುತ್ತಿದೆ. ಯಾವ ದೇಶದವರು ಮೋದಿಯವರನ್ನು ಹಗುರವಾಗಿ ಕಂಡಿತ್ತೋ ಆ ದೇಶವೆ ಇಂದು ಮೋದಿಯವರನ್ನು ಕೆಂಪು ರತ್ನಕಂಬಳಿ ಹಾಸಿ ಆಹ್ವಾನಿಸಿ ಗೌರವಿಸುವಂತಹ ಸ್ಥಿತಿ ನಿರ್ಮಾಣ ಆಗಿದೆ ಎಂದರೆ ಅದಕ್ಕೆ ಪಕ್ಷದ ಕಾರ್ಯಕರ್ತರುಗಳು ಕಾರಣ ಎಂದರು.
ಭಾರತವು ಇಂದು ವಿಶ್ವ ಮಟ್ಟದಲ್ಲಿ ಮುಂದುವರೆಯುತ್ತಿ ರುವ ರಾಷ್ಟ್ರದ ಸಾಲಿನಲ್ಲಿ ಸೇರಿದೆ ಎಂಬುದಕ್ಕೆ ಸಾಕ್ಷಿಯಾಗಿ, ನಮ್ಮ ಸರ್ಕಾರದ ಅವಧಿಯಲ್ಲಿ ರಸ್ತೆ, ರೈಲು, ವಾಯುಯಾನ, ಪ್ರವಾಸೋದ್ಯಮ, ರಕ್ಷಣಾ ವ್ಯವಸ್ಥೆ,ಆರೋಗ್ಯ ಕ್ಷೇತ್ರ ಸೇರಿದಂತೆ ಇತರ ಕ್ಷೇತ್ರದಲ್ಲಿ ಅಭೂತಪೂರ್ವ ರೀತಿಯಲ್ಲಿ ಹಿಂದೆಂದೂ ಕಂಡರಿ ಯದ ರೀತಿಯಲ್ಲಿ ವೇಗವಾಗಿ ಅಭಿವೃಧ್ಧಿ ಆಗುತ್ತಿದೆ ಎಂದರು.
ಭಾರತೀಯ ಜನ ಸಂಘ, ಜನತಾ ಪಕ್ಷ, ಬಿಜೆಪಿ ಪಕ್ಷವು ಯಾವ ತತ್ವ ಸಿzಂತಗಳಿಗೆ ಬದ್ದವಾಗಿ ದೆಯೋ ಯಾವ ಸಂಗತಿಗಳಿಗೆ ಆದ್ಯತೆ ನೀಡಿ ಅವುಗಳ ಬಗ್ಗೆ ನಿರಂತರವಾದ ಹೋರಾಟ ಮಾಡುತ್ತಿತ್ತೋ ಆ ಎ ಸಂಗತಿಗಳು ಕಾಮಗಾರಿಗಳನ್ನು ಪ್ರಾಮಾಣಿಕವಾಗಿ ಅನುಷ್ಟಾನ ಮಾಡುತ್ತಿರುವುದು ಹೆಮ್ಮೇಯ ಸಂಗತಿ. ಇದನ್ನು ಈಗಿನ ಕಾರ್ಯಕರ್ತರುಗಳು ತಮ್ಮ ಜೀವನದ ಕಣ್ಣೇದುರ ಕಂಡು ಸಂತೊಷ ಪಡುತ್ತಿzರೆ ಎಂದರು.
ಪ್ರಮುಖರಾದ ಮಂಗೋಟೆ ರುದ್ರೇಶ್, ಡಾ.ಧನಂಜಯ ಸರ್ಜಿ, ಗಿರೀಶ್ ಪಟೇಲ್, ಎಂ.ವಿಶ್ವನಾಥ್ ಕೋಠಿ, ಬಿ.ಕೆ.ಶ್ರೀನಾಥ್, ಪ್ರಭಾಕರ್, ಆಶೋಕ ಮೂರ್ತಿ, ಕೆ.ಹೆಚ್.ತೀರ್ಥಯ್ಯ, ಬಿ.ಜಿ.ರಾಮಲಿಂಗಯ್ಯ, ಕೂಡ್ಲಿಗೆರೆ ಹಾಲೇಶ್, ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.