ವೃತ್ತಿ ಮತ್ತು ತಾಂತ್ರಿಕ ಶಿಕ್ಷಣದಲ್ಲಿಂದು ವಫುಲ ಅವಕಾಶಗಳು:ಬಾಬು ನಾಯ್ಕ
ಸೊರಬ:ಸಾಮಾನ್ಯ ಶಿಕ್ಷಣ ಕ್ಕಿಂತ ಹೆಚ್ಚಿನ ಅವಕಾಶಗಳು ಇಂದು ವೃತ್ತಿ ಮತ್ತು ತಾಂತ್ರಿಕ ಶಿಕ್ಷಣಕ್ಕಿದೆ. ಈ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಒಲವು ಹೊಂದಿದ್ದು ಅವರ ಆರ್ಥಿಕ ನೆರವಿಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸುeನನಿಧಿ ಶಿಷ್ಯವೇತನ ವಿತರಣೆ ಮಾಡಲಾಗುತ್ತದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಶಿರಸಿ ಜಿ ನಿರ್ದೇಶಕ ಬಾಬು ನಾಯ್ಕ ಹೇಳಿದರು.
ಗುರುವಾರ ಪಟ್ಟಣದ ಯೋಜನಾ ಕಚೇರಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂ ಡಿದ್ದ ಪ್ರಗತಿಬಂಧು- ಸ್ವಸಹಾಯ ಸಂಘಗಳ ಸದಸ್ಯರ ಮಕ್ಕಳ ವೃತ್ತಿಪರ ಹಾಗೂ ತಾಂತ್ರಿಕ ಶಿಕ್ಷಣಕ್ಕಾಗಿ ಸುeನನಿಧಿ ಶಿಷ್ಯವೇತನ ಕಾರ್ಯ ಕ್ರಮದ ಅಡಿ ವಿದ್ಯಾರ್ಥಿಗಳಿಗೆ ಮಂಜೂರಾತಿ ಪತ್ರವನ್ನು ವಿತರಣೆ ಮಾಡಿ ಅವರು ಮಾತನಾಡಿದರು.
ಬಡ ಮತ್ತು ಅಸಂಘಟಿತ ವಲ ಯದ ಜನಸಾಮಾನ್ಯರ ಪ್ರತಿಭಾ ವಂತ ಮಕ್ಕಳಿಗೆ ಇಂದು ವೃತ್ತಿ ಪರ ಹಾಗೂ ತಾಂತ್ರಿಕ ಶಿಕ್ಷಣ ಪಡೆಯು ವುದೇ ದುಸ್ತರವಾಗಿದೆ. ಇದನ್ನು ಗಮನಿಸಿದ ಧರ್ಮಸ್ಥಳ ಧರ್ಮಾ ಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಯವರು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗಾಗಿ ಸುeನ ನಿಧಿ ಶಿಷ್ಯವೇತನ ಕಾರ್ಯಕ್ರಮ ಜರಿಗೆ ತಂದಿzರೆ. ಸಂಸ್ಥೆಯ ಬೆಳ್ಳಿಹಬ್ಬದ ಸವಿ ನೆನಪಿಗೆ ೨೦೦೭ ರಲ್ಲಿ ಪ್ರಾರಂ ಭಿಸಲಾದ ಈ ಕಾರ್ಯಕ್ರಮದಂತೆ ಇದುವರೆಗೆ ರಾಜ್ಯದ ೭೧,೦೯೧ ವಿದ್ಯಾರ್ಥಿಗಳಿಗೆ ೮೨.೫೨ ಕೋಟಿ ರೂ. ಮೊತ್ತದ ವಿದ್ಯಾರ್ಥಿವೇತನ ನೀಡಲಾಗಿದೆ. ಅಭಿವೃದ್ಧಿ ಕಾಣದ ತೀರಾ ಹಿಂದುಳಿದ ಗ್ರಾಮ ಮತ್ತು ಹಳ್ಳಿಗಳ ಸಾಮಾನ್ಯ ಬಡ ಕೂಲಿ ಕಾರ್ಮಿಕರ ಮಕ್ಕಳೂ ಸಹ ಸುe ನನಿಧಿ ಶಿಷ್ಯವೇತನ ಉಪಯೋಗ ಪಡೆದು ಡಾಕ್ಟರ್, ಸಾಫ್ಟ್‌ವೇರ್ ಇಂಜಿನಿಯರ್‌ನಂಥ ಉನ್ನತ ಶಿಕ್ಷಣ ಪಡೆಯಬಹುದು ಎನ್ನುವುದನ್ನು ಈ ಕಾರ್ಯಕ್ರಮ ನಿರೂಪಿಸಿದೆ.
ತಾಲೂಕಿನಲ್ಲಿ ೨೧.೬೦ ಲಕ್ಷ ಸುeನ ನಿಧಿ ಮೊತ್ತ ಮುಂಜೂ ರಾಗಿದ್ದು ೯೩ ಬಡ ವಿದ್ಯಾರ್ಥಿ ಗಳನ್ನು ಆಯ್ಕೆ ಮಾಡಲಾಗಿದೆ. ಈ ಎ ವಿದ್ಯಾರ್ಥಿಗಳಿಂದ ಪ್ರತಿ ತಿಂಗಳು ರೂ.೬೧,೦೦೦ ದಂತೆ ಕೋರ್ಸ್ ಮುಗಿಯುವವರೆಗೆ ಬರಿಸಲಾಗುತ್ತದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕ ಯೋಜನಾಧಿಕಾರಿ ಸುಬ್ರಾಯ ನಾಯ್ಕ ಕಾರ್ಯಕ್ರಮ ದಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷ ಮಧುರಾಯ್‌ಜಿ.ಶೇಟ್, ವಲಯ ಕ್ಷೇತ್ರ ಶಿಕ್ಷಣ ಸಂಯೋಜಕ ಸಂಜೀ ವ್ ಕುಮಾರ್, ಮೇಲ್ವಿಚಾರಕ ಉಮೇಶ್, ಹಣಕಾಸು ಪ್ರಬಂಧಕ ಶ್ರೀನಿವಾಸ, ಆಡಳಿತ ಸಹಾಯಕ ಪ್ರಬಂದಕ ಕಾವ್ಯಶ್ರೀ ಶೆಟ್ಟಿ, ವಿದ್ಯಾ ರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.