ರೈತ ವಿರೋಧಿ ಭೂಸುಧಾರಣೆ ತಿದ್ದುಪಡಿ ಕಾಯ್ದೆ ವಾಪಸ್ ಆಗ್ರಹಿಸಿ ಮನವಿ …
ಶಿವಮೊಗ್ಗ: ರೈತ ವಿರೋಧಿ ಭೂಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜನುವಾರು ಹತ್ಯೆ, ಪ್ರತಿಬಂಧಕ ಮತ್ತು ಸುರಕ್ಷತಾ ಕಾಯ್ದೆ ವಾಪಸ್ ಪಡೆಯುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಜಿ ಘಟಕದ ವತಿಯಿಂದ ಜಿಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆದು ಜಿಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕೃಷಿ ಬೆಲೆ ಆಯೋಗಕ್ಕೆ ಶಾಸನಾ ತ್ಮಕ ಅಧಿಕಾರ ನೀಡಬೇಕು. ರೈತ ಪರ ನೀತಿಗಳನ್ನು ರೂಪಿಸಬೇಕು. ಕೇಂದ್ರ ಸರ್ಕಾರ ಜರಿಗೆ ತರಲು ಉದ್ದೇಶಿಸಿರುವ ೨೦೨೨ ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆಯನ್ನು ರಾಜ್ಯದಲ್ಲಿ ಜರಿಗೆ ತರುವುದಿಲ್ಲ ಎಂದು ಮುಂಬರುವ ಅಧಿವೇಶನದಲ್ಲಿ ತೀರ್ಮಾನಿಸಬೇಕು. ಮತ್ತು ೧೦ ಹೆಚ್.ಪಿ. ಕೃಷಿ ಪಂಪ್ಸೆಟ್ಗಳಿಗೆ ಗುಣಾತ್ಮಕ ವಿದ್ಯುತ್ ಸರಬರಾಜು ಮಾಡುವ ಬದ್ಧತೆ ಉಳಿಸಿಕೊಳ್ಳಬೇಕು. ಕೃಷಿ ವಿದ್ಯುತ್ ಮೀಟರ್ ಗಳಿಗೆ ಆಧಾರ್ ಜೋಡಣೆ ಮಾಡುವು ದನ್ನು ತಡೆಹಿಡಿಯಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿ ದರು.
ಖರೀದಿ ಕೇಂದ್ರಗಳ ಮುಖಾಂತರ ರಾಗಿ ಮಾರಾಟ ಮಾಡಿದ ರೈತರಿಗೆ ಹಿಂದಿನ ಸರ್ಕಾರ ಬಾಕಿ ಉಳಿಸಿಕೊಂಡಿದ್ದು, ಕೂಡಲೇ ಪಾವತಿಸಲು ಕ್ರಮಕೈಗೊ ಳ್ಳಬೇಕು.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆ ತುಂಬಿದ ರೈತರಿಗೆ ನಷ್ಟ ಪರಿಹಾರದ ಬಾಕಿಯನ್ನು ವಿಮಾ ಕಂಪನಿಗಳು ಉಳಿಸಿಕೊಂಡಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸೇರಿದಂತೆ ಹಲವು ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಬೇ ಕೆಂದು ಮನವಿಯಲ್ಲಿ ಒತ್ತಾಯಿಸ ಲಾಗಿದೆ.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ, ಜಿ ಉಪಾಧ್ಯಕ್ಷ ಯು.ಪಿ. ಜೋಸೆಫ್, ಆಮ್ ಆದ್ಮಿ ಪಕ್ಷದ ಮುಖಂಡೆ ನೇತ್ರಾವತಿ, ಬಿ.ಎಸ್.ಪಿ. ಜಿಧ್ಯಕ್ಷ ಎ.ಡಿ. ಶಿವಪ್ಪ, ಮುಖಂಡರಾದ ಟಿ.ವಿ. ಮಶಪ್ಪ, ಕೆ.ಟಿ. ರಮೇಶ್, ಕಣ್ಣಪ್ಪ, ಕೆ.ಪಿ. ರಮೇಶ್ ಇನ್ನಿತರರು ಭಾಗವಹಿಸಿದ್ದರು.