ರಾಜ್ಯದಲ್ಲಿ ಕ್ಷೇತ್ರವಾರು ಬಿತ್ತನೆಬೀಜದ ಕೊರತೆಯಾಗದಂತೆ ಸರ್ಕಾರಕ್ರಮ : ಶಾಂತನಗೌಡ
ಹೊನ್ನಾಳಿ; ಪ್ರಶಕ್ತ ವರ್ಷದಲ್ಲಿ ಬಿತ್ತನೆ ಬೀಜದ ಕೊರತೆಯಾಗ ದಂತೆ ಮುಖ್ಯಮಂತ್ರಿಗಳು ಹಾಗು ಕೃಷಿ ಸಚಿವರು ಸಭೆ ನಡೆಸಿ ಆಯಾ ಕ್ಷೇತ್ರವಾರು ರೈತರ ಬೇಡಿಕೆಗಳ ಬಿತ್ತನೆ ಬೀಜ ವಿತರಣೆಗೆ ಸರ್ಕಾರ ಮಂದಾಗಿದೆ ಎಂದು ಶಾಸಕ ಶಾಂತನಗೌಡ ಹೇಳಿದರು.
ಅವರು ಟಿ.ಎ.ಪಿ.ಸಿ. ಎಂ. ಎಸ್ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಸಹಾಯಧನದಡಿ ರೈತರಿಗೆ ಬಿತ್ತನೆ ಬೀಜಗಳನ್ನು ವಿತರಿಸಿ ಮಾತನಾಡಿದರು.
ಸರ್ಕಾರವು ಕೃಷಿ ಇಲಾಖೆ ಮೂಲಕ ಮುಂಗಾರು ಹಂಗಾಮಿ ನಲ್ಲಿ ಮೆಕ್ಕೆಜೋಳ, ತೊಗರಿ ಅಲ ಸಂಧಿ, ಹೆಸರು, ಸೋಯಾಬೀನ್ ಹಾಗೂ ಶೇಂಗಾ ಬೆಳಗಳ ಬಿತ್ತನೆ ಬೀಜಗಳನ್ನು ರೈತರಿಗೆ ರಿಯಾಯಿ ತಿ ದರದಲ್ಲಿ ವಿತರಿಸಲಾಗುತ್ತಿದೆ.
ಪ್ರಸ್ತುತ ಮುಂಗಾರು ಹಂಗಾ ಮಿನಿಂದ ರಾಜ್ಯದ ರೈತ ಸಂಪರ್ಕ ಕೇಂದ್ರಗಳಲ್ಲಿ ಬಾರ್ ಕೋಡ್ ಮೂಲಕ ಬಿತ್ತನೆ ಬೀಜ ಹಾಗೂ ಕೃಷಿ ಪರಿಕರಗಳನ್ನು ವಿತರಣೆ ಮಾಡವುದು ವಿಳಂಬವಾದರೆ ರೈತರು ಸಹಕರಿಸಬೇಕಾಗಿದೆ. ತಾಲ್ಲೂಕಿನ ರೈತರ ಬೇಡಿಕೆಗೆ ಅನು ಗುಣವಾಗಿ ಬಿತ್ತನೆ ಬೀಜಗಳ ಹಾಗೂ ರಸಗೊಬ್ಬರದ ದಾಸ್ತಾ ನಿದ್ದು, ಯಾವುದೇ ಕೊರತೆ ಇಲ್ಲ ವೆಂದರು.
ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವುದು ರೈತರು ಕೃಷಿ ಇಲಾ ಖೆ ಅಥವ ತಮ್ಮ ಗಮನಕ್ಕೆ ತಂದರೆ ಕ್ರಮ ಕೈಗೊಳ್ಳಲು ಮುಂದಾಗು ವುದಾಗಿ ತಿಳಿಸಿದ ಅವರು ಕೃಷಿ ಇಲಾಖೆಯ ಸಲಹೆಯಂತೆ ಮಳೆ ವಿಳಂಬವಾದರು ಜುಲೈ ಕೊನೆಯ ವಾರದ ವರೆಗೂ ತಾಲ್ಲೂಕಿನ ರೈತ ರು ಬಿತ್ತನೆ ಮಾಡಲಿದ್ದು ರಾಗಿಯ ಬೆಳೆಗೆ ಮುಂದಾಗುವಂತೆಯು ಕರೆ ನೀಡದರು.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿದೇರ್ಶಕಿ ಪ್ರತಿಮಾ,ಕೃಷಿ ಅಧಿಕಾರಿ ಅತಿಕ್,ಟಿಎಪಿಸಿಎಂಎಸ್ ಅಧ್ಯಕ್ಷ ಗಜೇಂದ್ರಪ್ಪ, ನಿದೇರ್ಶಕ ರಾದ ಸೊಗಿಲು ಮಶಪ್ಪ,ಹೆಚ್ ಎಂ ಬಸವರಾಜ್, ಈಶ್ವರಪ್ಪ, ಶೇಖರಪ್ಪ,ಕಾರ್ಯದರ್ಶಿ ಮುರು ಗೇಶ,ಪಿಎಲ್‌ಡಿ ಬ್ಯಾಂಕ ಉಪಾ ಧ್ಯಕ್ಷ ಹನುಮಂತಪ್ಪ,ರೈತ ಮುಖಂ ಡರಾದ ಕೆಂಗನಹಳ್ಳಿ ಶಣ್ಮುಕಪ್ಪ, ಕ್ಯಾಸಿನಕೇರಿ ಶೇಖರಪ್ಪ,ಶಿವರಾಮ ನಾಯ್ಕ,ತರಗನಹಳ್ಳಿ ಅಶೋಕ ಮೊದಲಾದವರು ಉಪಸ್ಥಿತ ರಿದ್ದರು.