ಏಕಾಏಕಿ ಬೀಸಿದ ಬಿರುಗಾಳಿಗೆ ಕುಸಿದು ಬಿದ್ದ ಮನೆ ಮೇಲ್ಛಾವಣಿ…

ಹೊಸನಗರ : ತಡರಾತ್ರಿ ಬೀಸಿದ ಏಕಾಏಕಿ ಬಿರುಗಾಳಿಗೆ ಮನೆ ಮೇಲ್ಛಾವಣಿ ಹಾಗೂ ಗೋಡೆ ಕುಸಿದು ಬಿದ್ದ ಘಟನೆ ತಾಲೂಕಿನ ಕೋಡೂರು ಗ್ರಾ.ಪಂ ವ್ಯಾಪ್ತಿಯ ಕಾರಕ್ಕಿ ಗ್ರಾಮದಲ್ಲಿ ನಡೆದಿದೆ.
ಪ್ರೇಮ ಕೆ.ಆರ್. ಕೋಂ ನಾಗಪ್ಪ ಕುಂಬತ್ತಿ ಎಂಬುವವರಿಗೆ ಸೇರಿದ ವಾಸದ ಮನೆ ಇದಾಗಿದ್ದು ಮನೆ ಮೇಲ್ಛಾವಣಿ ಹಾಗೂ ಗೋಡೆ ಬೀಳುತ್ತಿದ್ದಂತೆ ಮನೆ ಒಳಗಿದ್ದವರು ಹೊರಗೆ ಓಡಿ ಬಂದು ಕೂದಲೆಳೆ ಅಂತರದಲ್ಲಿ ಪಾರಾಗಿzರೆ. ಈ ವೇಳೆ ಓರ್ವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಮನೆಯಲ್ಲಿದ್ದ ದವನ ಧಾನ್ಯಗಳು ಸೇರಿದಂತೆ ಇನ್ನಿತರ ವಸ್ತುಗಳು ಹಾಳಾಗಿದ್ದು ಅಪಾರ ಹಾನಿ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಕೋಡೂರು ಗ್ರಾ.ಪಂ ಸದಸ್ಯ ಯೋಗೇಂದ್ರಪ್ಪ ಮತ್ತು ಪಿಡಿಒ ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರದ ಭರವಸೆ ನೀಡಿzರೆ.