ನಿಮ್ಮ ಪ್ರೀತಿಗೆ ನಾನು ಚಿರಋಣಿ: ಹೇಮಣ್ಣ

ಕುಕನೂರು: ತಾಲೂಕಿನ ಬೆಣಕಲ್ ನೃಪತುಂಗ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಎಚ್.ಎ.ಹೇಮಣ್ಣ ಅವರು ಇತ್ತೀಚಿಗೆ ವಯೋ ನಿವೃತ್ತಿ ಹೊಂದಿದ ಸಂದರ್ಭದಲ್ಲಿ ೨೦೦೦ ಇಸವಿಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬಳಗವು ಅವರಿಗೆ ಗುರುವಂದನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಗುರುಗಳ ಪಾಠದ ಕ್ರಮ, ಅವರ ನಡವಳಿಕೆ, ಶಿಸ್ತು ಪ್ರತಿಯೊಂದನ್ನು ಎಲ್ಲರೂ ನೆನಪಿಸಿಕೊಂಡರು. ಅವರಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹೇಮಣ್ಣ ಅವರು, ತಮ್ಮೆಲ್ಲರ ಪ್ರೀತಿ ವಿಶ್ವಾಸ ನನಗೆ ಖುಷಿ ತಂದಿದೆ. ಒಬ್ಬ ಶಿಕ್ಷಕನಾಗಿ ನಾನು ಏನು ಕೆಲಸ ಮಾಡಬೇಕಾಗಿತ್ತು, ಅದನ್ನು ನನ್ನ ಕರ್ತವ್ಯ ಎಂದು ಭಾವಿಸಿ ಮಾಡಿದ್ದೇನೆ. ಅದನ್ನು ಸನ್ಮಾನಿಸುವುದರ ಮೂಲಕ ವ್ಯಕ್ತಪಡಿಸಿರುವುದು ನಿಮ್ಮ ಪ್ರೀತಿಯ ಸಂಕೇತ ಎಂದು ಭಾವುಕರಾಗಿ ನುಡಿದರು.
ವಿಜಯಕುಮಾರ ಸೊಪ್ಪಿಮಠ, ಶಿವಾನಂದ, ಅಶೋಕ, ಸೋಮ ಶೇಖರ, ಮೈಲಾರಗೌಡ, ಶಿವ ಲೀಲಾ, ಭಾಗ್ಯಶ್ರೀ, ಮಂಜುಳಾ, ಪ್ರೇಮಾ, ಸುನಿತಾ ಇದ್ದರು.