ರೈತರ ಹಿತ ಕಾಪಾಡಲು ಒಂದಾಗ ಮುಂದೆಬಂದ ಸಂಸ್ಥೆಗಳು…
ಶಿವಮೊಗ್ಗ: ಭಾರತದ ಸಣ್ಣ ರೈತರಿಗೆ ನೆರವಾಗಲು ಜಗತಿಕ ಮಟ್ಟದ ಸಂಸ್ಥೆಗಳಾದ ಬಾಯರ್ ಮತ್ತು ಕಾರ್ಗಿಲ್ ಸಂಸ್ಥೆಗಳು ಪಾಲುದಾರಿಕೆ ಮಾಡಿಕೊಂಡು ಡಿಜಿಟಲ್ ಸಲೂಷನ್ ಮೂಲಕ ರೈತರ ಹಿತ ಕಾಪಾಡಲು ಮುಂದಾಗಿವೆ.
ಪಾಲುದಾರಿಕೆ ಬಗ್ಗೆ ಮಾತನಾಡಿರುವ ಬಾಯರ್ ನ ಕ್ರಾಫ್ಟ್ ಸೈನ್ಸ್ ವಿಭಾಗದ ಮುಖ್ಯಸ್ಥ ಸೈಮನ್ ಥಾಷನ್ ಅವರು, ಸಣ್ಣ ಹಿಡುವಳಿದಾರ ರೈತರನ್ನು ಸಬಲರನ್ನಾಗಿ ಮಾಡಲು ನಮ್ಮ ಪಾಲುದಾರಿಕೆ ಸಹಾಯ ಮಾಡುತ್ತಿದೆ. ಕರ್ನಾಟಕ ಸೇರಿದಂತೆ ಭಾರತವಲ್ಲದೇ, ಬಾಂಗ್ಲಾ, ಶ್ರೀಲಂಕಾದಲ್ಲೂ ಈ ಸಂಸ್ಥೆಗಳು ಜಗತಿಕ ಮಟ್ಟದಲ್ಲಿ ಕಾರ್ಯನಿರ್ವ ಹಿಸಲು ತೊಡಗಿವೆ. ರೈತರ ಮಲ್ಯಗಳನ್ನು ಕಾಪಾಡುವ ನಿಟ್ಟಿನಲ್ಲಿ ಈ ಎರಡೂ ಸಂಸ್ಥೆಗಳ ಒಪ್ಪಂದ ಮುಖ್ಯ ಪಾತ್ರ ವಹಿಸಿದೆ ಎನ್ನುತ್ತಾರೆ.
ಭಾರತದಲ್ಲಿನ ಕಾರ್ಗಿಲ್ ಸಂಸ್ಥೆಯ ಅಧ್ಯಕ್ಷ ಸೈಮನ್ ಜರ್ಜ್ ತಮ್ಮ ಅಭಿಪ್ರಾಯ ಹಂಚಿಕೊ ಂಡು, ಈಗಾಗಲೇ ಕಾರ್ಗಿಲ್ ನಲ್ಲಿ ಹೊಸ ಮಾದರಿ ಯ ಡಿಜಿಟಲ್ ಪರಿಹಾರಗಳನ್ನು ಸೂಚಿಸುವಲ್ಲಿ ನಾವು ಸಫಲರಾಗಿದ್ದೇವೆ. ಭಾರತದ ರೈತರಿಗೆ ಉತ್ಪಾದ ನೆಯಲ್ಲಿ ಲಾಭ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದಿzರೆ.
ಡಿಜಿಟಲ್ ಸಾಥಿಯಾ ಸಂಸ್ಥಾಪಕ ರಾಮನ್ ಸಕ್ಸೇನಾ ಮಾತನಾಡಿ, ಈ ವರ್ಷದ ಆರಂಭದಲ್ಲಿ ನಾವು ನಮ್ಮ ಸಹಭಾಗಿತ್ವದಲ್ಲಿ ಕೃಷಿ ಸಲಹಾ ಕೇಂದ್ರ ಮತ್ತು ಮಣ್ಣು ಪರೀಕ್ಷೆಯನ್ನು ಪರಿಚಯಿಸುತ್ತಿದ್ದೇವೆ. ಈ ಸೇವೆಗಳ ಮೂಲಕ ರೈತರು ತಮ್ಮ ಬೆಳೆಗಳ ಇಳುವರಿ ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ. ವಿಶ್ವದಾದ್ಯಂತ ರೈತರಿಗೆ ಬೆಂಬಲ ಬೆಲೆ ನೀಡಿ ಅವರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವುದೇ ಪಾಲುದಾರಿಕೆಯ ಧ್ಯೇಯವಾಗಿದೆ ಎಂದರು.
ನಮ್ಮ ಡಿಜಿಟಲ್ ಸಾಥಿ ಇಂಗ್ಲಿಷ, ಕನ್ನಡ ಮತ್ತು ಹಿಂದಿ ಭಾಷಗಳಲ್ಲಿ ಲಭ್ಯವಿದ್ದು, ಕರ್ನಾಟಕ ಮತ್ತು ಮಧ್ಯಪ್ರದೇಶ ರಾಜ್ಯಗಳ ರೈತರನ್ನು ಸೇರಿದಂತೆ ಮುಂದಿನ ೫ ವ?ಗಳಲ್ಲಿ ಸುಮಾರು ೫ ಲಕ್ಷ ಸಣ್ಣ ರೈತರಿಗೆ ಬೆಂಬಲ ನೀಡಲು ಮತ್ತು ೩ ಮಿಲಿಯನ್ ರೈತರನ್ನು ಸಂಪರ್ಕಿಸುವ ಗುರಿ ಹೊಂದಲಾಗಿದೆ.
ಒಟ್ಟಾರೆ ಭಾರತದ ರೈತರನ್ನು ಸಬಲಗೊಳಿಸು ವುದು, ಮಾರುಕಟ್ಟೆ ಪ್ರವೇಶ ಸರಳಗೊಳಿಸುವುದು, ಡಿಜಿಟಲ್ ಸಲೂಷನ್ ಮೂಲಕ ರೈತರಿಗೆ ನೆರವಾಗು ವುದು, ಮೊಬೈಲ್ ಚಾಲಿತ ಡಿಜಿಟಲ್ ಸಾಥಿ ಮಾಡುವುದು ನಮ್ಮ ಗುರಿಯಾಗಿದೆ ಎಂದಿzರೆ.