24 ಮನೆ ಸಾಧುಶೆಟ್ಟಿ ಜನಾಂಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಶಿವಮೊಗ್ಗ: ಸಂತ ಥಾಮಸ್ ಸಮುದಾಯ ಭವನದಲ್ಲಿ ಇಂದು ೨೦೨೨- ೨೩ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉನ್ನತ ಶ್ರೇಣಿ ಪಡೆದ ೨೪ ಮನೆ ಸಾಧುಶೆಟ್ಟಿ ಜನಾ ಂಗದ ಪ್ರತಿಭಾನ್ವಿತ ವಿದ್ಯಾರ್ಥಿ ಗಳಿಗೆ ಎಲ್ ಎಲ್ ಆರ್ ರಸ್ತೆಯ ಶ್ರೀ ಬಾಲಾಜಿ ಫ್ಲವರ್ಸ್ ಮತ್ತು ಬೊಕ್ಕೆ ಸಂಸ್ಥೆಯ ಮಾಲೀಕ ಡಿ. ಗೋವಿಂದರಾಜ್ ಪಾಲಿಕೆ ಸದಸ್ಯ ರಾದ ಮೀನಾಕ್ಷಿ ಗೋವಿಂದರಾಜ್ ಕುಟುಂಬದಿಂದ ಸಮಾಜದ ೪೫ಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಶಾಸಕ ಎಸ್.ಎನ್. ಚನ್ನಬ ಸಪ್ಪನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗೋವಿಂದರಾಜ್ ಕುಟುಂಬ ಕಳೆದ ೩೦ ವಷಗಳಿಂದ ಸಮಾಜದ ಪ್ರತಿಭಾನ್ವಿತ ಮಕ್ಕಳಿಗೆ ಕ್ರೀಡೆಗೆ ಮತ್ತು ವಿದ್ಯೆಗೆ ಪ್ರೋತ್ಸಾ ಹಿಸುತ್ತಾ ಬಂದಿದೆ.
ಅವರ ಈ ಕಾರ್ಯ ನಿರಂತರ ವಾಗಿ ಮುಂದು ವರೆಯಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜದ ಪ್ರಮು ಖರಾದ ಎನ್. ಉಮಾಪತಿ, ಮಾಜಿ ಕಾರ್ಪೊರೇಟರ್ ಮೋಹ ನ್ ರೆಡ್ಡಿ. ಉದ್ಯಮಿ ಉದಯ್ ಕಡಂಬ. ಮಾಜಿ ನಗರಸಭಾ ಅಧ್ಯಕ್ಷ ಎನ್.ಜೆ. ರಾಜಶೇಖರ್, ನಿವ್ರತ್ತ ದೈಹಿಕ ಶಿಕ್ಷಣ ನಿರ್ದೇಶಕ ಜಿ.ಎಸ್. ನಾಗರಾಜ್, ಹೆಚ್.ಎನ್. ದೇವ ರಾಜ್ ಪಾಲಿಕೆ ಸದಸ್ಯರಾದ ಮೀನಾಕ್ಷಿ ಗೋವಿಂದರಾಜ್. ಆಯೋಜಕರಾದ ಗೋವಿಂದ ರಾಜ್ ಮತ್ತು ಕಿರಣ್ ಹಾಗೂ ಸಮಾಜದ ಪ್ರಮುಖರು ಉಪಸ್ಥಿತ ರಿದ್ದರು.