ನಗರದ ಅಭಿವೃದ್ಧಿಗೆ ಕೆಲಸ ಮಾಡಲು ಸದಾ ಕಾಲ ಬದ್ಧ:ಶಾಸಕ ಚನ್ನಬಸಪ್ಪ
ಶಿವಮೊಗ್ಗ್: ನಗರದ ಅಭಿವೃದ್ಧಿಗೆ ಕೆಲಸ ಮಾಡಲು ಸದಾ ಕಾಲ ಬದ್ಧನಾಗಿದ್ದೇನೆ ಎಂದು ಶಿವಮೊಗ್ಗ ನಗರ ಶಾಸಕ ಎಸ್. ಎನ್. ಚನ್ನಬಸಪ್ಪ ಹೇಳಿzರೆ.
ಅವರು ವಿನೋಬನಗರ ೧ನೇ ಹಂತದ ಚಾಚಾನೆಹರು ಪಾರ್ಕ್ ಸಮುದಾಯ ಭವನದಲ್ಲಿ ಚೈತನ್ಯ ಸಮಿತಿ ಶ್ರೀ ಪ್ರಸನ್ನಗಣಪತಿ ದೇವಸ್ಥಾನ ವಿನೋಬನಗರ ಗೆಳೆಯರ ಬಳಗ ಮತ್ತು ಸ್ಥಳೀಯ ನಾಗರಿಕರು ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈಗ ಬಿಜೆಪಿ ಸರ್ಕಾರ ಇಲ್ಲದಿ ರಬಹುದು. ಆದರೆ ನಾಗರಿಕರ ಮೂಲಭೂತ ಸೌಕರ್ಯದ ಪ್ರಶ್ನೆ ಬಂದಾಗ ಸದನದ ಒಳಗೆ ಮತ್ತು ಹೊರಗೆ ಕೆಲಸ ಮಾಡಲು ಸಿದ್ದನಿ ದ್ದೇನೆ. ಹಾಗೂ ಕೆಲಸ ಆಗದಿದ್ದರೆ ಹೋರಾಟದ ಮೂಲಕವಾದರೂ ಕೆಲಸ ಮಾಡಿಕೊಡುತ್ತೇನೆ ಎಂದರು.
ಸದಾ ಕಾಲ ನಿಮ್ಮ ಜೊತೆಗೇ ಇರುತ್ತೇನೆ. ಎಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡೋಣ. ಅಭಿಪ್ರಾಯ ಸಂಗ್ರಹ ಮಾಡೋಣ. ಅಗತ್ಯ ಕೆಲಸದ ಬಗ್ಗೆ ಚರ್ಚೆ ಮಾಡೋಣ ಅನೇಕ ಭಾಗಗಳಲ್ಲಿ ಅನೇಕ ಕೆಲಸಗಳು ಬಾಕಿ ಇವೆ. ಈ ಭಾಗ ದಲ್ಲಿ ಅಜಿತಶ್ರೀ ಯೋಗಭವನ ಕಾರ್ಯ ನಡೆಯುತ್ತಿದೆ. ನಿಮ್ಮ ಮನಸ್ಸಿನ ಭಾವನೆಗಳಿಗೆ ಶಕ್ತಿ ಕೊಡುವ ಕೆಲಸ ಆಗುತ್ತಿದೆ. ನೀವು ಕೊಟ್ಟ ಹಾರ ತುರಾಯಿ ನನಗೆ ಎಚ್ಚರಿಕೆ ಎಂದು ಭಾವಿಸಿದ್ದೇನೆ. ನೀವು ಕೊಟ್ಟ ಶಕ್ತಿಗೆ ಸದಾ ಋಣಿಯಾಗಿರುತ್ತೇನೆ ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಎ.ಸಿ.ಬಿ. ಪಿಳ್ಳೈ, ವಿನೋಬನಗರ ಗೆಳೆಯರ ಬಳಗದ ಚಂದ್ರಕಾಂತ್, ಯೋಗಕೇಂದ್ರದ ಪ್ರಮುಖರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.