ಮುಗ್ಧ ಮನಸ್ಸಿನ ಮಕ್ಕಳಿಗೆ ಬೇಕಾಗಿರುವುದು ಪುಸ್ತಕವೇ ಹೊರತು ಕೆಲಸವಲ್ಲ…

ಜೂ.೧೨ರ ಇಂದು ವಿಶ್ವ ಬಾಲಕಾರ್ಮಿಕರ ವಿರೋಧಿ ದಿನ. ಈ ನಿಮಿತ್ತ ಶಿಕ್ಷಕ ಹಾಗೂ ಖ್ಯಾತ ಬರಹಗಾರರಾದ ಸವದತ್ತಿಯ ಎಂ.ಎನ್. ಕಬ್ಬೂರ ಅವರು ಬರೆದ ಕುರಿತ ಲೇಖನ ಹೊಸನಾವಿಕ ಓದುಗರಿಗಾಗಿ…
ಮಕ್ಕಳು ಎಂದ ತಕ್ಷಣ ನೆನಪಿಗೆ ಬರುವುದು ಮುzದ ಮುಖ, ನಿಷ್ಕಲ್ಮಶ ನಗು, ಹಾಗೂ ಅವರ ಆಟ-ಪಾಠ ಮತ್ತು ತುಂಟಾಟ. ಬಾಲ್ಯದಲ್ಲಿ ಆಟವಾಡುತ್ತಾ ತನ್ನ ಜೊತೆಗಾರರೊಂದಿಗೆ ಶಾಲೆಗೆ ಹೋಗಿ ವಿದ್ಯೆಯನ್ನು ಕಲಿಯಬೇಕಾದ ಮಕ್ಕಳು ಇಂದು ಹಲವಾರು ಕಾರಣಗಳಿಂದ ಬಾಲಕಾರ್ಮಿಕರಾಗಿ ಕಟ್ಟಡ ಕೆಲಸಗಳಲ್ಲಿ, ಅಂಗಡಿ ಮಳಿಗೆಗಳಲ್ಲಿ, ಗಾರ್ಮೆಂಟ್ಸ್ ಗಳಲ್ಲಿ, ಬೇಕರಿ, ಗ್ಯಾರೇಜ್, ಹೊಟೇಲ್, ಕಾರ್ಖಾನೆ ಹೀಗೆ ಹಲವಾರು ಸ್ಥಳಗಳಲ್ಲಿ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಕ್ಕೆ ಕಷ್ಟವಾಗುವಂತಹ ಕೆಲಸಗಳನ್ನು ಮಾಡುತ್ತಿzರೆ.

ಇದರ ಪರಿಣಾಮ ಆಹಾರದ ಕೊರತೆಯುಂಟಾಗಿ ಅಪೌಷ್ಟಿಕತೆಯಿಂದ ಹಲವಾರು ರೋಗಗಳಿಗೆ ತುತ್ತಾಗುತ್ತಿzರೆ, ಅಷ್ಟೇ ಅಲ್ಲದೇ ಅವರ ಮೂಲಭೂತ ಹಕ್ಕಾದ ಶಿಕ್ಷಣದಿಂದಲೂ ವಂಚಿತರಾಗುತ್ತಿzರೆ. ಹಾಗಾಗಿ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಹಾಗೂ ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂ.೧೨ರಂದು ಭಾರತ ಸೇರಿದಂತೆ ವಿಶ್ವಾದ್ಯಂತ ಬಾಲ ಕಾರ್ಮಿಕರ ವಿರೋಧಿ ದಿನವನ್ನು ಆಚರಿಸಲಾಗುತ್ತದೆ.
ಬಾಲಕಾರ್ಮಿಕ ಎಂದರೆ ಯಾರು? ಅದರ ಪರಿಕಲ್ಪನೆ- ೧೪ ವರ್ಷದೊಳಗಿನ ಮಕ್ಕಳು ಶಾಲೆ ಕಲಿಯುವದನ್ನು ಬಿಟ್ಟು ಕೆಲಸ ಮಾಡುತ್ತಿದ್ದರೆ ಅವರನ್ನು ಬಾಲಕಾರ್ಮಿಕರು ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಬಾಲಕಾರ್ಮಿಕ ಪದವನ್ನು ಮಕ್ಕಳ ಬಾಲ್ಯ, ಅವರ ಸಾಮರ್ಥ್ಯ ಮತ್ತು ಅವರ ಘಣತೆಯನ್ನು ಕಸಿದುಕೊಳ್ಳುವ ಕೆಲಸ ಎಂದು ವ್ಯಾಖ್ಯಾನಿಸಲಾಗುತ್ತಿದೆ ಹಾಗೂ ಅದು ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಹಾನಿಕಾರಕವಾಗಿದೆ.
ಬಾಲಕಾರ್ಮಿಕರ ನಿಷೇಧ ಮತ್ತು ನಿಯಂತ್ರಣ ಕಾಯ್ದೆ (೧೯೮೬)- ೧೪ ವರ್ಷದೊಳಗಿನ ಮಕ್ಕಳನ್ನು ಅವರ ಜೀವ ಮತ್ತು ಆರೋಗ್ಯಕ್ಕೆ ಹಾನಿಕರವಾದ ಯಾವುದೇ ವೃತ್ತಿ ಹಾಗೂ ಕಾರ್ಯ ವಿಧಾನಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಿದೆ. ಇದು ಬಾಲಕಾರ್ಮಿಕರ ಸಮಯ ಮತ್ತು ಕೆಲಸದ ಪರಿಸ್ಥಿತಿಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ, ಕಾರ್ಖಾನೆಗಳಲ್ಲಿ ಬಾಲಕಾರ್ಮಿಕರನ್ನು ನೇಮಿಸಿಕೊಳ್ಳುವುದನ್ನು ನಿಷೇಧಿಸಿದೆ.
ಬಾಲಕಾರ್ಮಿಕರ ನಿಷೇಧ ಮತ್ತು ನಿಯಂತ್ರಣ ತಿದ್ದುಪಡಿ ಕಾಯ್ದೆ (೨೦೧೬)- ೧೯೮೬ರ ಕಾಯ್ದೆಯನ್ನು ೨೦೧೬ರಲ್ಲಿ ತಿದ್ದುಪಡಿ ಮಾಡಿ ಎ ಉದ್ಯೋಗಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದನ್ನು ನಿಷೇಧಿಸುವ ಮತ್ತು ಹದಿಹರೆಯದವರನ್ನು ಅಪಾಯಕಾರಿ ಉದ್ಯೋಗಗಳು ಮತ್ತು ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ನಿಷೇಧಿಸುವ ಕಾಯ್ದೆಯಾಗಿ ಬದಲಾವಣೆ ಮಾಡಲಾಯಿತು. ಮುಂದುವರೆದು ಇದನ್ನು ಉಲ್ಲಂಸುವ ಉದ್ಯೋಗದಾತರನ್ನು ಗುರುತಿಸುವುದು ಮತ್ತು ಅಂತಹ ಪ್ರಕರಣ ಕಂಡು ಬಂದಲ್ಲಿ ಭಾರತ ಸರಕಾರ ಕಠಿಣ ಶಿಕ್ಷೆಯನ್ನು ನೀಡಲಾಗುತ್ತದೆ.


ಬಾಲಕಾರ್ಮಿಕರ ನಿಷೇಧ ಮತ್ತು ನಿಯಂತ್ರಣ ತಿದ್ದುಪಡಿ ನಿಯಮಗಳು (೨೦೧೭)- ಈ ಕಾಯ್ದೆಗೆ ೨೦೧೭ ರ ತಿದ್ದುಪಡಿಗಳ ನಿಯಮಗಳ ಅಡಿಯಲ್ಲಿ ಕೆಲವೊಂದು ನಿಬಂಧನೆಗಳನ್ನು ಹಾಕಲಾಯಿತು, ಅದರಂತೆ ವಿಶಾಲ ಮತ್ತು ನಿರ್ದಿಷ್ಟ ಚೌಕಟ್ಟು ಹಾಕಲಾಯಿತು, ಕುಟುಂಬ ಉದ್ಯಮಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸ್ಪಷ್ಟತೆ ನೀಡಲಾಯಿತು. ಕಾಯ್ದೆಯಡಿಯಲ್ಲಿ ಕೆಲಸ ಮಾಡಲು ಅನುಮತಿಸಲಾದ ಸೃಜನಶೀಲ ಕೆಲಸಗಾರರು ಅಥವಾ ಕಲಾವಿಧರ ಸುರಕ್ಷತೆಯ ಬಗೆಗೆ ನಿಯಮ ರೂಪಿಸಲಾಯಿತು. ಹಾಗೂ ಕಾನೂನು ಜರಿ ಸಂಸ್ಥೆಗೆ ಜವಾಬ್ದಾರಿಗಳು ಮತ್ತು ಕರ್ತವ್ಯಗಳನ್ನು ನಿಗದಿಪಡಿಸಲಾಯಿತು.
೨೦೨೩ ರ ಥೀಮ್- ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐ.ಎಲ್.ಓ) ಪ್ರತಿ ವರ್ಷ ಒಂದೊಂದು ಥೀಮ್ ನೊಂದಿಗೆ ಬಾಲ ಕಾರ್ಮಿಕರ ವಿರೋಧಿದಿನವನ್ನು ಆಚರಿಸುತ್ತದೆ. ೨೦೨೨ ರಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಕೊನೆಗೊಳಿಸಲು ಸಾರ್ವತ್ರಿಕ ಸಾಮಾಜಿಕ ರಕ್ಷಣೆ ಎಂಬ ಥೀಮ್ ನೊಂದಿಗೆ ಆಚರಣೆ ಮಾಡಿದರೆ, ೨೦೨೩ ರ ಈ ವರ್ಷ ಬಾಲಕಾರ್ಮಿಕರ ವಿರುದ್ಧ ಕ್ರಮದ ವಾರ ಎಂಬ ಥೀಮ್‌ನೊಂದಿಗೆ ಆಚರಣೆ ಮಾಡಲಾಗುತ್ತಿದೆ. ಇದರ ಮುಖ್ಯ ಉದ್ದೇಶ ಬಾಲಕಾರ್ಮಿಕ ಪದ್ಧತಿಯತ್ತ ಗಮನ ಹರಿಸುವುದು ಮತ್ತು ಅದನ್ನು ಕೊನೆಗೊಳಿಸಲು ಬದ್ಧತೆಯನ್ನು ಮಾಡುವುದಾಗಿದೆ.


ಇಂದಿನ ೨೧ನೇ ಶತಮಾನದಲ್ಲೂ ಸಹ ಬಾಲಕಾರ್ಮಿಕ ಪದ್ದತಿಯೆಂಬ ಪೆಡಂಭೂತ ನಮ್ಮನ್ನು ಬಿಟ್ಟು ಬಿಡದೆ ಕಾಡುತ್ತದೆ. ಆದ್ದರಿಂದ ನಾವು ನೀವೆಲ್ಲರೂ ಕೈಜೋಡಿಸಿ ಈ ಪದ್ದತಿಯನ್ನು ಹೊಡೆದೊಡಿಸಬೇಕಾಗಿದೆ. ಪ್ರತಿ ಮಗುವು ಶಾಲೆಯಲ್ಲಿ ದಾಖಲಾಗಬೇಕು, ದಾಖಲಾಗ ಪ್ರತಿ ಮಗುವು ಸಹ ಗುಣಾತ್ಮಕ ಶಿಕ್ಷಣವನ್ನು ಪಡೆಯಬೇಕು ಎಂಬ ಸರಕಾರದ ಆಶಯವನ್ನು ನನಸಾಗಿಸಬೇಕಿದೆ. ಅದ್ದಕ್ಕಾಗಿ ಎಲ್ಲರೂ ಕಂಕಣಬದ್ಧರಾಗೋಣ. ಶಿಕ್ಷಣದ ಮಹತ್ವದ ಸಾರದಿಂದ ಮಾತ್ರ ಬಾಲಕಾರ್ಮಿಕತೆ ನಿರ್ಮೂಲನೆ ಸಾಧ್ಯ, ಆದ್ದರಿಂದ ಮುಗ್ಧ ಮನಸ್ಸಿನ ಮಕ್ಕಳಿಗೆ ಶಿಕ್ಷಣ ಎಂಬುದು ಒಂದು ಪ್ರಾಧಾನ ಸಾಧನವಾಗಬೇಕು, ಅವರ ಕೈಗೆ ನಾವು ಕೊಡಬೇಕಾದ್ದು ಪುಸ್ತಕವೇ ಹೊರತು ಕಾಮಗಾರಿಯ ಸಲಕರಣೆಗಳನ್ನಲ್ಲ.