ಮಲೆನಾಡು ಕಾವ್ಯ ರಚನೆಗೆ ಪೂರಕ: ವಸುಧಾ ಶರ್ಮ

ಸಾಗರ : ಮಲೆನಾಡು ಕಾವ್ಯ ರಚನೆಗೆ ಪೂರಕವಾಗಿದೆ. ಮಲೆನಾ ಡಿನ ಕವಿಗಳ ಕವನಗಳನ್ನು ಗಾಯನ ರೂಪದಲ್ಲಿ ಕೇಳುಗರ ಮುಂದೆ ತರುವುದು ಅಗತ್ಯ ಎಂದು ವಿದುಷಿ ವಸುಧಾ ಶರ್ಮ ತಿಳಿಸಿ ದರು.
ಇಲ್ಲಿನ ಅಣಲೆಕೊಪ್ಪದ ಕೆ.ಟಿ.ವಿಶ್ವನಾಥ್ ಮನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಶ್ರಯ ದಲ್ಲಿ ವಿಪ್ರ ನೌಕರರ ಸಂಘ ಡಾ. ನಾ.ಡಿಸೋಜ ಹೆಸರಿನಲ್ಲಿ ನೀಡಿದ ದತ್ತಿ ಕಾರ್ಯಕ್ರಮದಲ್ಲಿ ಅವರು ಮಲೆನಾಡಿನ ಕವಿಗಳ ಕಾವ್ಯಾವ ಲೋಕನ ವಿಷಯ ಕುರಿತು ಮಾತನಾಡುತ್ತಿದ್ದರು.

ಮಲೆನಾಡಿನಲ್ಲಿ ಅನೇಕ ಧೀಮಂತ ಕವಿಗಳಿzರೆ. ಮಲೆನಾ ಡಿನ ವೈಶಿಷ್ಯವನ್ನು ತಮ್ಮ ಕಾವ್ಯಗಳ ಮೂಲಕ ಕಟ್ಟಿಕೊಡುವ ಕೆಲಸ ಕವಿಗಳು ಅತ್ಯಂತ ಅರ್ಥಪೂರ್ಣ ವಾಗಿ ಮಾಡಿzರೆ. ಕಾವ್ಯ ಉದ್ಭವವಾಗಲು ಪೂರಕ ವಾತಾ ವರಣ ಇರಬೇಕು. ವಾತಾವರಣದ ಜೊತೆಗೆ ಕವಿಯ ಮನಸ್ಸು ಸಹ ಪದ ಜೋಡಣೆಗೆ ಸ್ಪಂದಿಸುವಂತೆ ಇರಬೇಕು. ಅಂತಹ ಕವಿಗಳಿಂದ ಮಾತ್ರ ಶ್ರೇಷ್ಟವಾದ ಕಾವ್ಯ ರಚನೆ ಸಾಧ್ಯವಾಗುತ್ತದೆ. ಅಂತಹ ಕವಿಗಳಿಗೆ ಸಾಹಿತ್ಯ ಪರಿಷತ್ ನಿರಂತರ ವೇದಿಕೆ ಕಲ್ಪಿಸುತ್ತಾ ಬಂದಿರುವುದು ಸಂತೋಷದ ಸಂಗತಿ. ಇಂತಹ ಉಪನ್ಯಾಸಗಳ ಮೂಲಕ ಮಲೆನಾಡಿನ ಕವಿಗಳ ಕಾವ್ಯಗಳ ಮೇಲೆ ಬೆಳಕು ಚೆಲ್ಲಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿ ಸಿದ ನಿವೃತ್ತ ಅರಣ್ಯಾಧಿಕಾರಿ ಕೆ.ಟಿ.ವಿಶ್ವನಾಥ್, ಸಾಹಿತ್ಯ ಮನ ಸ್ಸುಗಳನ್ನು ಕಟ್ಟುವ ಕೆಲಸ ಮಾಡು ತ್ತಿದೆ. ಸಾಹಿತ್ಯ ಸಂಸ್ಕಾರವನ್ನು ನೀಡುತ್ತದೆ. ಸಾಹಿತ್ಯ ಪರಿಷತ್ ಜನರ ಬಳಿಗೆ ಸಾಹಿತ್ಯವನ್ನು ತೆಗೆದು ಕೊಂಡು ಹೋಗುವ ಸಾರ್ಥಕ ಕೆಲಸ ಮಾಡುತ್ತಿದೆ ಎಂದು ಹೇಳಿ ದರು.

ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ. ನಾ.ಡಿಸೋಜ, ನಾರಾಯಣ ಮೂರ್ತಿ ಕಾನುಗೋಡು ಉಪಸ್ಥಿತ ರಿದ್ದರು.
ಶುಭಾ ನಾಗರಾಜ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ವೈ.ಮೋಹನ್ ಸ್ವಾಗತಿಸಿದರು. ಮಾ.ಸ.ನಂಜುಂಡಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಕೆಳದಿ ವೆಂಕಟೇಶ್ ಜೋಯ್ಸ್ ನಿರೂಪಿಸಿದರು. ನಂತರ ಸುಕನ್ಯಾ ಜಿ. ಭಟ್, ಲಕ್ಷ್ಮೀ ಭಾಗವತ್, ಅಪರ್ಣಾ ಪ್ರಸಾದ್, ಶ್ರೀದೇವಿ ಮೋಹನ್, ಭುವನೇಶ್ವರಿ ಹೆಗಡೆ, ಅಂಜನಾ ಇನ್ನಿತರರು ಮಲೆನಾ ಡಿನ ಕವಿಗಳ ಕವನ ಹಾಡಿದರು.