ಆಯುರ್ವೇದ ಪ್ರಾಚೀನ ಭಾರತದ ಪರಿಪೂರ್ಣ ವೈದ್ಯ ಪದ್ಧತಿ: ಸ್ವಾಮೀಜಿ

ಶಿವಮೊಗ್ಗ: ಆಯುರ್ವೇದವು ಆರೋಗ್ಯ ಪಾಲನೆ, ಪೋಷಣೆ ರಕ್ಷಣೆಗಳನ್ನು ಧ್ಯೇಯವನ್ನಾಗಿಟ್ಟು ಕೊಂಡಿರುವ ಪ್ರಾಚೀನ ಭಾರತದ ಪರಿಪೂರ್ಣ ವೈದ್ಯ ಪದ್ಧತಿ. ಆರೋಗ್ಯದೊಂದಿಗೆ ಬದುಕಿ ಗೊಂದು ದಿನಚರಿ, ವ್ಯಕ್ವಿತ್ವಕ್ಕೊಂದು ಸಂಸ್ಕಾರ, ಜೀವನಕ್ಕೊಂದು ಅರ್ಥ ನೀಡುವ ವೈದ್ಯ ವಿeನವಾಗಿದೆ ಎಂದು ಡಾ. ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಹೇಳಿದರು.
ತಾಲೂಕಿನ ನಿದಿಗೆಯಲ್ಲಿರುವ ಟಿಎಂಎಇಎಸ್ ಆಯುರ್ವೇದ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾಲೇಜಿಗೆ ನೂತನವಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಉಪನಯನ (ಶಿಷ್ಯೋಪನಯನ) ಮತ್ತು ಪದವಿ ಪೂರೈಸಿದ ವಿದ್ಯಾರ್ಥಿಗಳ ಘಟಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಶರೀರ ಮತ್ತು ಮನಸ್ಸಿನ ಸಮನ್ವಯತೆ ಯನ್ನು ಕಾಪಾಡಿಕೊಳ್ಳಬೇಕು. ಶರೀರ ಧರ್ಮ ಸಾಧನೆಗೆ ಇದೇ ಮೂಲ ತತ್ವ. ಇಂತಹ ತತ್ವ ಆಯುರ್ವೇದ ವೈದ್ಯ ಪದ್ಧತಿ ಯಲ್ಲಿದೆ. ಆಯುರ್ವೇದ ಪದ್ಧತಿ ಯಲ್ಲಿ ತಕ್ಷಣಕ್ಕೆ ಖಾಯಿಲೆಗೆ ಉಪಶಮನ ದೊರೆಯದೇ ಇರಬಹುದು. ಆದರೆ ಅಡ್ಡ ಪರಿಣಾಮಗಳಿಲ್ಲದೆ ಖಾಯಿಲೆ ಯಿಂದ ಮುಕ್ತಿ ಹೊಂದಬಹುದು ಎಂದರು.

ಮನುಷ್ಯನ ಆರೋಗ್ಯ ಹಾಗೂ ಜೀವ ಕಾಪಾಡುವಲ್ಲಿ ವೈದ್ಯಕೀಯ ಸಿಬ್ಬಂದಿಗಳ ಪಾತ್ರ ಮಹತ್ವದಾಗಿದೆ. ವೈದ್ಯರು ಹಾಗೂ ನರ್ಸ್‌ಗಳು ಜೀವ ರಕ್ಷಕರಾಗಿzರೆ. ಆರೋಗ್ಯ ಕ್ಷೇತ್ರವು ಸೇವಾ ಕ್ಷೇತ್ರವಾಗಿದೆ. ಆದ್ದರಿಂದ ವೈದ್ಯಕೀಯ ಸಿಬ್ಬಂದಿಗೆ ಸೇವಾ ಮನೋಭಾವ ಅಗತ್ಯವೇ ಹೊರತು ಹೆಚ್ಚು ಹಣ ಸಂಪಾದನೆಯೇ ಉದ್ದೇಶವಾಗಬಾರದು ಎಂದು ಅಭಿಪ್ರಾಯಿಸಿದರು.
ಆರೋಗ್ಯವೇ ಭಾಗ್ಯ. ನಾವು ಎಷ್ಟು ಹಣ, ಆಸ್ತಿ ಸಂಪಾದನೆ ಮಾಡಿದೆವು ಎಂಬುದಕ್ಕಿಂತಲೂ ಎಷ್ಟರ ಮಟ್ಟಿಗೆ ಆರೋಗ್ಯವನ್ನು ಉಳಿಸಿಕೊಂಡೆವು ಎಂಬುವುದು ಮುಖ್ಯ ನೈತಿಕ ಮೌಲ್ಯವನ್ನು ಮೈಗೂಡಿಸಿಕೊಂಡಲ್ಲಿ ಆರೋಗ್ಯ ಸಂರಕ್ಷಣೆ ಸಾಧ್ಯ ಎಂದು ಪ್ರತಿಪಾದಿಸಿದರು.
ಹರಪನಹಳ್ಳಿಯ ತೆಗ್ಗಿನಮಠ ಸಂಸ್ಥಾನದ ಪಟ್ಟಾಧ್ಯಕ್ಷರಾದ ಷ||ಬ್ರ|| ಶ್ರೀ ವರಸದ್ಯೋಜತ ಶಿವಾಚಾರ್ಯರ ಕೃಪಾಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಟಿಎಂಎಇಎಸ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕಾಲೇಜು ಹಾಗೂ ಆಸ್ಪತ್ರೆ ಜನ ಮನ್ನಣೆ ಪಡೆದಿದೆ. ಇದಕ್ಕೆ ಇಲ್ಲಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಪರಿಶ್ರಮ, ಸೇವಾ ಮನೋಭಾವ ಕಾರಣ ಎಂದರು.
ಟಿಎಂಎಇಎಸ್ ಆಯುವೇ ದ ಕಾಲೇಜಿನ ಆಡಳಿತಾಧಿಕಾರಿ ಜಿ.ಎ. ಹಿರೇಮಠ, ಪ್ರಾಂಶು ಪಾಲೆ ಡಾ. ರುದ್ರಾಂಬಿಕೆ ಬಿರಾದಾರ, ಉಪ ಪ್ರಾಂಶುಪಾಲ ಡಾ. ವಿನಯ್ ಟಿ.ಸಿ., ಜಿ ಆಯುಷ್ ಅಧಿಕಾರಿ ಡಾ. ಪುಷ್ಪ, ವಿಘ್ನೇಶ್ವರ ಸೊಪುರ ಮತ್ತಿತರರು ಉಪಸ್ಥಿತರಿದ್ದರು. ನಾಗಶ್ರೀ, ಅನನ್ಯ ಪ್ರಾರ್ಥಿಸಿ, ಡಾ.ಎಸ್.ಪಿ. ಪ್ರಶಾಂತ್ ಸ್ವಾಗತಿಸಿ, ಶಾಂತಾ ಆನಂದ್ ನಿರೂಪಿಸಿದರು.