ಮಲಾನಾ ಅಜದ್ ಮಾದರಿ ಶಾಲೆ ಶೀಘ್ರ ಆರಂಭಿಸಲು ಆಗ್ರಹ…

ಶಿವಮೊಗ್ಗ: ಸೋಮಿನಕೊಪ್ಪ ಮುಖ್ಯರಸ್ತೆಯಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ಶಾಲಾ ಕಟ್ಟಡವನ್ನು ಶೀಘ್ರವೇ ಉದ್ಘಾಟನೆ ಮಾಡಿ ತರಗತಿಗಳನ್ನು ಪ್ರಾರಂಭಿಸ ಬೇಕು ಎಂದು ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆಯ ಜಿ ಘಟಕ ಇಂದು ಪ್ರತಿಭಟನೆ ಮೂಲಕ ಜಿಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ವಿನೋಬನಗರದ ಸೋಮಿನ ಕೊಪ್ಪದಲ್ಲಿ ಸುಮಾರು ೨ಕೋಟಿ ರೂ. ವೆಚ್ಚದಲ್ಲಿ ಅಲ್ಪಸಂಖ್ಯಾತರ ಮಲಾನಾ ಆಜದ್ ಮಾದರಿ ಶಾಲೆಯನ್ನು ಕಟ್ಟಲಾಗಿದೆ. ಕಾಮ ಗಾರಿ ಮುಗಿದು ಒಂದು ತಿಂಗಳು ಮುಗಿದರೂ ಶಾಲೆಯ ಉದ್ಘಾಟನೆ ಯನ್ನು ಇನ್ನೂ ನೆರವೇರಿಸಿಲ್ಲ. ಜೂ.೧ರಿಂದಲೇ ತರಗತಿಗಳು ಆರಂಭವಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ತರ ಗತಿಗಳು ಇದುವರೆಗೂ ಆರಂಭ ವಾಗಿಲ್ಲ ಎಂದು ದೂರಿದರು.

ಇದರಿಂದ ಬಡ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗಿದೆ. ಬೇರೆಬೇರೆ ಶಾಲೆಗಳಲ್ಲಿ ದಾಖಲಾತಿಗಳು ಮುಗಿದಿವೆ. ಶಾಲೆ ಆರಂಭವಾಗದಿದ್ದರೆ ಮಕ್ಕಳ ಗತಿ ಏನು? ಆದ್ದರಿಂದ ಕೂಡಲೇ ಈ ಶಾಲೆಯನ್ನು ಉದ್ಘಾಟಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ವೇದಿಕೆಯ ರಾಜಧ್ಯಕ್ಷೆ ಚೇತನಾ ಶೆಟ್ಟಿ, ಕಾಂಗ್ರೆಸ್ ಎಸ್.ಸಿ. ಎಸ್ಟಿ ವಿಭಾಗದ ರಾಜ್ಯ ಸಂಚಾಲಕ ಸಿದ್ದಪ್ಪ, ಮಸೀದಿ ಅಧ್ಯಕ್ಷ ಜುಬೇದ್ ಅಹ್ಮದ್, ಪ್ರಮುಖರಾದ ಹಸೀನಾ, ಸ್ವಪ್ನಾ, ಶಿವಕುಮಾರ್, ಮಹಮದ್ ಅಲಿ ಮುಂತಾದವರಿದ್ದರು.