ಸಚಿವ ಅನುರಾಗ್ ನಿವಾಸಕ್ಕೆ ಭೇಟಿ: ಕುಸ್ತಿಪಟುಗಳಿಂದ ೫ ಬೇಡಿಕೆಗಳಿಗೆ ಪಟ್ಟು

ನವದೆಹಲಿ: ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಭಾರತ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಯ ನೇತೃತ್ವ ವಹಿಸಿ ರುವ ಪದಕ ವಿಜೇತ ಕುಸ್ತಿಪಟು ಗಳಾದ ಭಜರಂಗ್ ಪೂನಿಯಾ ಮತ್ತು ಸಾಕ್ಷಿ ಮಲ್ಲಿಕ್ ಅವರು, ಇಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್‌ರನ್ನು ಭೇಟಿ ಮಾಡಿದ್ದಾರೆ.
ಮಾತುಕತೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದ ಅನು ರಾಗ್ ಠಾಕೂರ್ ಅವರು, ಮಾತು ಕತೆಗೆ ಕುಸ್ತಿಪಟುಗಳಿಗೆ ಆಹ್ವಾನ ನೀಡಿದ್ದರು. ಆಹ್ವಾನ ನೀಡಿದ ಬೆನ್ನ ಲ್ಲೇ ಇದೀಗ ಭಜರಂಗ್ ಪೂನಿಯಾ ಮತ್ತು ಸಾಕ್ಷಿ ಮಲ್ಲಿಕ್, ಅನುರಾಗ್ ಠಾಕೂರ್ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಸಚಿವರ ಮುಂದೆ ಕುಸ್ತಿಪಟುಗಳ ೫ ಬೇಡಿಕೆ ಗಳನ್ನು ಇಟ್ಟಿದ್ದಾರೆ, ಅದರಲ್ಲಿ ೧ ಮಹಿಳಾ ಫೆಡರೇಶನ್ ಮುಖ್ಯ ಸ್ಥರು ಬೇಕು ಎಂದು ಹೇಳಿದ್ದಾರೆ.

ಕೇಂದ್ರ ಕ್ರೀಡಾ ಸಚಿವ ಅನು ರಾಗ್ ಠಾಕೂರ್ ಟ್ವಿಟ್ಟರ್‌ನಲ್ಲಿ ತಡ ರಾತ್ರಿಯ ಸಭೆಗೆ ಆಹ್ವಾನ ನೀಡಿ ದ್ದು, ಕುಸ್ತಿಪಟು ಗಳಾದ ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಅವರು ಇಂದು ಕ್ರೀಡಾ ಸಚಿವರ ಮನೆಯಲ್ಲಿ ಮಾತುಕತೆ ನಡೆಸಿ ದರು.
ಐದು ದಿನಗಳಲ್ಲಿ ಕುಸ್ತಿಪಟು ಗಳು ಮತ್ತು ಸರ್ಕಾರದ ನಡುವೆ ನಡೆದ ಎರಡನೇ ಸಭೆಯಾಗಿದೆ. ಏಳು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮಕೈಗೊಳ್ಳಲು ಕುಸ್ತಿಪಟುಗಳು ಶನಿವಾರ ತಡರಾತ್ರಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರು.
ಭಾರತ ಕುಸ್ತಿ ಒಕ್ಕೂಟಕ್ಕೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಹಾಗೂ ಮಹಿಳಾ ಮುಖ್ಯಸ್ಥರ ನೇಮಕ ಸೇರಿದಂತೆ ಐದು ಬೇಡಿಕೆಗಳನ್ನು ಕುಸ್ತಿಪಟುಗಳು ಸಚಿವರಿಗೆ ಸಲ್ಲಿಸಿದರು.
ಬ್ರಿಜ್ ಭೂಷಣ್ ಸಿಂಗ್ ಅಥ ವಾ ಅವರ ಕುಟುಂಬ ಸದಸ್ಯರು ಡಬ್ಲ್ಯುಎಫ್‌ಐ ಭಾಗವಾಗಿರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಬ್ರಿಜ್ ಭೂಷಣ್ ಸಿಂಗ್ ಬಂಧನ ಮಾಡಬೇಕು ಎಂದು ಬೇಡಿಕೆಯನ್ನು ಪುನರು ಚ್ಚರಿಸಿದ್ದಾರೆ.