ಸ.ನಂ ೨೭ ಮತ್ತು ೬೦ರ ೨೮೩ ಎಕರೆ ಪ್ರದೇಶದವನ್ನು ಸಾರ್ವಜನಿಕ ಸದುದ್ದೇಶಕ್ಕೆ ಕಾಯ್ದಿರಿಸಲು ಆಗ್ರಹ

ಶಿವಮೊಗ್ಗ: ಹಾರನಹಳ್ಳಿ ಹೋಬಳಿ ತ್ಯಾಜುವಳ್ಳಿ ಗ್ರಾಮದ ಸ.ನಂ ೨೭ ಮತ್ತು ೬೦ರ ೨೮೩ ಎಕರೆ ಪ್ರದೇಶದವನ್ನು ಸಾರ್ವಜನಿಕ ಸದುದ್ದೇಶಕ್ಕೆ ಕಾಯ್ದಿರಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ಗ್ರಾಪಂ, ಸದಸ್ಯರು ಹಾಗೂ ಗ್ರಾಮಸ್ಥರು ಇಂದು ಜಿಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತ್ಯಾಜುವಳ್ಳಿಯ ಸ.ನಂ ೨೭ ಮತ್ತು ೬೦ರಲ್ಲಿ ಕಾಯ್ದಿಟ್ಟ ಅರಣ್ಯ ಪ್ರದೇಶ ಹಾಗೂ ಗೋಮಾಳ ಗಳಿವೆ. ಈ ಜಮೀನನ್ನು ಜಂಟಿ ಸರ್ವೆ ಮಾಡಿಸಿ ಪ್ರತ್ಯೇಕ ಗಡಿ ರೇಖೆ ಗುರುತಿಸಬೇಕು ಮತ್ತು ದನಗಳಿಗೆ ಮುಫತ್ತು ಜಮೀನನ್ನು ಅರಣ್ಯ ಇಲಾಖೆಗೆ ಇಂಡೀಕರಣ ಮಾಡಿಕೊಡುವುದನ್ನು ಕೈಬಿಡ ಬೇಕು. ಈ ಎ ಜಮೀನನ್ನು ದನಗಳ ಮೇವಿಗಾಗಿ ಮತ್ತು ಸರ್ಕಾ ರದ ವಿವಿಧ ಅಭಿವೃದ್ಧಿ ಕೆಲಸಗಳಿ ಗಾಗಿ ಹಾಗೂ ಗ್ರಾಮದ ಸಾರ್ವಜ ನಿಕ ವಿವಿಧ ಉದ್ದೇಶಕ್ಕಾಗಿ ಕಾಯ್ದಿರಿ ಸಬೇಕು ಎಂದು ಮನವಿದಾರರು ಆಗ್ರಹಿಸಿದರು.
ಎಂಪಿಎಂ ಅರಣ್ಯ ವಿಭಾಗದ ವರು ಈ ಜಮೀನನ್ನು ಒತ್ತುವರಿ ಮಾಡಿಕೊಂಡು ಅವೈeನಿಕ ರೀತಿಯಲ್ಲಿ ಅಕೇಶಿಯಾ ಮತ್ತು ನೀಲಗಿರಿ ಸಸಿಗಳನ್ನು ನೆಟ್ಟು ಬೆಳೆಸು ತ್ತಿzರೆ. ಇದರಿಂದ ಸುತ್ತಮುತ್ತಲ ಗ್ರಾಮಗಳ ಜನುವಾರುಗಳಿಗೆ ಮೇವು ಇಲ್ಲವಾಗಿದೆ. ಇಲ್ಲಿದ್ದ ಶ್ರೀಗಂಧ, ತೇಗ, ಹೊನ್ನೆ ಮುಂ ತಾದ ಬೆಲೆಬಾಳುವ ಗಿಡಮರ ಗಳನ್ನು ಬುಲ್ಡೋಜರ್ ಮೂಲಕ ಕಿತ್ತುಹಾಕಿzರೆ. ಇದರಿಂದ ಪರಿಸರಕ್ಕೂ ತೊಂದರೆ ಆಗುತ್ತಿದೆ. ದನಕರು, ಪ್ರಾಣಿ. ಪಕ್ಷಿಗಳಿಗೂ ತೊಂದರೆಯಾಗಿದೆ. ಎಂದು ಮನವಿದಾರರು ದೂರಿದರು.

ಅರಣ್ಯ ಇಲಾಖೆಯ ಈ ಕ್ರಮ ಖಂಡನೀಯ. ಆದ್ದರಿಂದ ಜಂಟಿ ಸರ್ವೆ ಮಾಡಿ ಗಡಿ ಗುರುತಿಸಿ ಕೊಡಬೇಕು. ದರಕಾಸ್ತು ಅಡಿ ಯಲ್ಲಿ ಪರಿಶಿಷ್ಟ ಮತ್ತು ಇತರ ಜತಿಯ ಬಡವರಿಗೆ ಸಾಗುವಳಿ ಹಕ್ಕುಪತ್ರ ಕೊಡಬೇಕು. ಇಲ್ಲಿ ಭವಿ ಷ್ಯದ ಪ್ರಜೆಗಳಿಗಾಗಿ ಅಂಗನವಾ ಡಿ,, ಶಾಲಾ ಕಾಲೇಜು, ಆಸ್ಪತ್ರೆ, ವಸತಿಶಾಲೆ. ಆಟದ ಮೈದಾನ, ಧಾರ್ಮಿಕ ಕಟ್ಟಡಗಳು, ಹಾಗೂ ಎ ಜನಾಂಗದವರಿಗೆ ಸ್ಮಶಾನ ನಿರ್ಮಿಸಲು ಅನುಕೂಲವಾಗು ವಂತೆ ಇಲ್ಲಿರುವ ೨೮೩ ಎಕರೆ ಜಮಿ ನನ್ನು ಸಾರ್ವಜನಿಕರ ಬಳಕೆಗಾಗಿ ಕಾಯ್ದಿರಿಸಬೇಕು ಎಮದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಕೊನಗವಳ್ಳಿ ಗ್ರಾ,ಪಂ. ಅಧ್ಯಕ್ಷೆ ಚಂದ್ರಮ್ಮ, ಸದಸ್ಯರಾದ ಟಿ. ಚಂದ್ರಪ್ಪ, ಹೇಮಾವತಿ, ಗ್ರಾಮಸ್ಥರಾದ ಕರಿ ಯಪ್ಪ, ಗುಳ್ಳಪ್ಪ, ಶೇಖರಪ್ಪ, ಶಾರ ದಮ್ಮ, ಲೋಕೇಶಪ್ಪ, ಚಂದ್ರಕಲಾ, ಪ್ರವೀಣ್, ಗಂಗಮ್ಮ, ಶಿವಪ್ಪ, ಅವಿನಾಶ, ಮನ್ಸೂರ್ ಅಹ್ಮದ್, ದರ್ಶನ್ ಇದ್ದರು.