40 ಸೆಕೆಂಡ್‌ನಲ್ಲಿ 26 ಬಾರಿ ಕೊಚ್ಚಿ ರೌಡಿಶೀಟರ್ ಕೊಲೆ

ಬೆಂಗಳೂರು: ನಗರದ ಮಹ ದೇವಪುರದಲ್ಲಿ ಮೇ ೨೫ರಂದು ಬರ್ಬರವಾಗಿ ಕೊಲೆಯಾದ ರೌಡಿಶೀಟರ್ ರೇಣುಕುಮಾರ್ ಹತ್ಯೆಯ ದೃಶ್ಯ ವೈರಲ್ ಆಗುತ್ತಿದೆ. ಸಿಸಿಟಿವಿಯಲ್ಲಿ ರೆಕಾರ್ಡ್ ಆದ ಹತ್ಯೆಯ ದೃಶ್ಯಗಳು ಎಂತವರನ್ನೂ ಬೆಚ್ಚಿಬೀಳಿಸುವಂತಿವೆ. ರೇಣುಕು ಮಾರ್ ಸಹಚರರಾದ ಶ್ರೀಕಾಂತ್ ಹಾಗೂ ಪ್ರಶಾಂತ್ ಇಬ್ಬರು ಸೇರಿ ಕೊಂಡು ಹತ್ಯೆ ಮಾಡಿದ್ದರು. ೪೦ ಸೆಕೆಂಡ್‌ನಲ್ಲಿ ೨೬ ಬಾರಿ ಕೊಚ್ಚಿ ರೌಡಿ ಶೀಟರ್ ಬರ್ಬರ ಕೊಲೆ ಮಾಡಿ ದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಧಮ್ಕಿ ಹಾಕಿದಕ್ಕೆ ಕೊಲೆ : ಈ ಹಿಂದೆ ಜೈಲಿನಿಂದ ಹೊರ ಬಂದ ರೇಣುಕುಮಾರ್ ತನ್ನ ಸಹಚರರಿಗೆ ಧಮ್ಕಿ ಹಾಕಿದ್ದ. ನಾನು ಜೈಲಿನಲ್ಲಿದ್ದಾಗ ಏರಿಯಾದಲ್ಲಿ ನಿಮ್ಮ ಹವಾ ಜಸ್ತಿಯಾಗಿದೆ. ನೀವು ನನ್ನ ಶಿಷ್ಯಂದಿರು, ಇನ್ಮುಂದೆ ಏನು ಮಾಡ ಬೇಕಾದರೂ ನನ್ನ ಪರ್ಮಿಷನ್ ತೆಗೆದುಕೊಳ್ಳಬೇ ಕೆಂದು ಪ್ರಶಾಂತ್, ಶ್ರೀಕಾಂತ್‌ಗೆ ಧಮ್ಕಿ ಹಾಕಿದ್ದ. ಇದರಿಂದ ಸಿಟ್ಟಿಗೆದ್ದ ಸಹಕರರು ಪ್ಲಾನ್ ಮಾಡಿ ಅಟ್ಯಾಕ್ ಮಾಡಿದ್ದಾರೆ. ಕೇವಲ ೪೦ ಸೆಕೆಂಡ್‌ನಲ್ಲಿ ೨೬ ಬಾರಿ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಇನ್ನು ಕೊಲೆಯಾದ ರೇಣು ಕುಮಾರ್ ಕೆಲ ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆ ಯಾಗಿದ್ದ. ಕೊಲೆ, ಕೊಲೆ ಯತ್ನ, ದರೋಡೆ ಸೇರಿದಂತೆ ೭ಕ್ಕೂ ಹೆಚ್ಚು ಪ್ರಕರ ಣಗಳು ಮೃತ ರೇಣುಕುಮಾರ್ ಮೇಲಿತ್ತು.
ವಿವಿಧ ಕೇಸ್‌ಗಳಲ್ಲಿ ಜೈಲುಪಾಲಾಗಿದ್ದ ರೌಡಿಶೀಟರ್ ಜೈಲಿನಿಂದ ಹೊರಬಂದು ಸಹಚರ ರಿಗೆ ಧಮ್ಮಿ ಹಾಕಿ ಈಗ ಕೊಲೆಯಾ ಗಿದ್ದಾನೆ. ಸದ್ಯ ಮಹದೇವಪುರ ಪೊಲೀಸರು ಪ್ರಶಾಂತ್, ಶ್ರೀಕಾಂ ತ್, ವಸಂತ್‌ನ್ನು ಬಂಧಿಸಿದ್ದಾರೆ.