ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ನಿವಾಸಿಗಳ ಆಗ್ರಹ
ಶಿವಮೊಗ್ಗ: ವಾರ್ಡ್ ನಂ. ೩೪ ರ ಮದಾರಿಪಾಳ್ಯ ಬಡಾವಣೆಯ ನೀರಿನ ಸಮಸ್ಯೆ ಬಗೆಹರಿಸಬೇ ಕೆಂದು ಆಗ್ರಹಿಸಿ ಅಲ್ಲಿನ ನಿವಾಸಿ ಗಳು ಮಹಾನಗರ ಪಾಲಿಕೆ ಎದು ರು ಇಂದು ಪ್ರತಿಭಟನೆ ನಡೆಸಿ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಮದಾರಿಪಾಳ್ಯದಲ್ಲಿ ಸುಮಾ ರು ೬ ತಿಂಗಳಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ. ಇದರಿಂದ ಅಲ್ಲಿನ ನಿವಾಸಿಗಳಿಗೆ ತುಂಬಾ ತೊಂದರೆ ಯಾಗಿದೆ. ಈ ಪ್ರದೇಶ ಅತ್ಯಂತ ಜನಜಂಗುಳಿಯಿಂದ ಕೂಡಿದೆ. ಮೂಲ ಸೌಲಭ್ಯವೂ ಇಲ್ಲ. ಆದ್ದ ರಿಂದ ಕೂಡಲೇ ನೀರಿನ ಸಮಸ್ಯೆ ಬಗೆಹರಿಸುವುದರ ಜೊತೆಗೆ ವಾರ್ಡ್ ಗೆ ಮೂಲ ಸೌಕರ್ಯ ಕಲ್ಪಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ನಿವಾಸಿ ಗಳಾದ ಅಕ್ರಂ ಶರೀಫ್, ಮೊಹ ಮ್ಮದ್ ಹನೀಫ್, ಸನಾವುಲ್ಲ, ಸತೀಶ್, ಶಾಹೀನಾ, ವಾಸೀಂ, ಫಜನ್, ಮಮ್ತಾಜ್ , ನೂರು, ರೇಷ್ಮಾ, ನಜೀಯಾ ಬೇಗಂ ಮೊದಲಾದವರಿದ್ದರು.