ಅಂಗನವಾಡಿ -ಆಶಾ ಕಾರ್ಯಕರ್ತೆಯರಿಗೆ ಹೆಚ್ಚುವರಿ ವೇತನ ಬಿಡುಗಡೆಗೆ ಆಗ್ರಹ

ಶಿವಮೊಗ್ಗ: ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆ ಯರಿಗೆ ಹೆಚ್ಚುವರಿ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇ ಕೆಂದು ಆಗ್ರಹಿಸಿ ಶಾಂತವೇರಿ ಗೋ ಪಾಲಗೌಡ ಸಮಾಜವಾದಿ ಅಧ್ಯ ಯನ ಕೇಂದ್ರ ಟ್ರಸ್ಟ್ ಇಂದು ಜಿ ಧಿಕಾರಿಗಳ ಮೂಲಕ ಸಿಎಂಗೆ ಮನವಿ ಸಲ್ಲಿಸಿದೆ.
ಎಐಸಿಸಿ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಆಶಾ ಕಾರ್ಯ ಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ, ಬಿಸಿ ಯೂಟ ಸಿಬ್ಬಂದಿಗಳಿಗೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಹೆಚ್ಚುವರಿ ವೇತನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು. ಈ ಭರ ವಸೆಯ ಅನ್ವಯ ರಾಜ್ಯ ಸರ್ಕಾರ ಅವರಿಗೆ ಹೆಚ್ಚುವರಿ ವೇತನ ಬಿಡುಗಡೆ ಮಾಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿ ಅಂಗನವಾಡಿ, ಮಿನಿ ಅಂಗನವಾಡಿ ಸೇರಿ ೬೯, ೭೧೯ ಅಂಗನವಾಡಿಗಳಿವೆ. ೪೨ ಸಾವಿರ ಆಶಾ ಕಾರ್ಯಕರ್ತೆಯರಿ zರೆ. ಅಂಗನವಾಡಿ ಶಿಕ್ಷಕಿಯರಿಗೆ ೧೫ ಸಾವಿರ ರೂ., ಸಹಾಯಕಿ ಯರಿಗೆ ೧೦ ಸಾವಿರ ರೂ., ಆಶಾ ಕಾರ್ಯಕರ್ತೆಯರಿಗೆ ೮ ಸಾವಿರ ರೂ., ಬಿಸಿಯೂಟ ತಯಾರಕರಿಗೆ ೫ ಸಾವಿರ ರೂ. ನೀಡುವುದಾಗಿ ಭರವಸೆ ನೀಡಿದ್ದು, ಈ ಭರವಸೆಯ ಅನ್ವಯ ರಾಜ್ಯ ಸರ್ಕಾರ ಅವರ ವೇತನವನ್ನು ಹೆಚ್ಚು ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸ ಲಾಗಿದೆ.
ಈ ಸಂದರ್ಭದಲ್ಲಿ ಟ್ರಸ್ಟ್ ನ ಮುಖ್ಯಸ್ಥ ಕಲ್ಲೂರು ಮೇಘ ರಾಜ್, ಪ್ರಮುಖರಾದ ಎಲ್. ಆದಿಶೇಷ, ನಾಗೇಶರಾವ್, ಶಂಕ್ರಾ ನಾಯ್ಕ್, ಕೆ.ಆರ್. ಶಿವಕುಮಾರ್, ಟಿ. ಶೇಖರಪ್ಪ, ಜಿ.ವಿ. ಮಂ ಜುಳಾ, ಸುರೇಶ್ ಕೋಟೆಕಾರ್ ಮೊದಲಾದವರು ಉಪಸ್ಥಿತರಿ ದ್ದರು.