ಆರೋಗ್ಯ ಸಮಸ್ಯೆಯಿಂದ ಖಿನ್ನತೆಗೊಳಗಾಗಿ ಕೆರೆಗೆ ಹಾರವಾದ ಸ್ವಾಭಿಮಾನಿ ಟೈಪಿಸ್ ನಿತ್ಯಾನಂದ…

ಸಾಗರ : ಕೆಳದಿ ಕೆರೆಯ ಬಳಿ ಡೆತ್ ನೋಟ್ ಬರೆದು ಸ್ವಾಭಿಮಾನಿ ಬೆರಳಚ್ಚುಗಾರ ನಿತ್ಯಾನಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಇಲ್ಲಿನ ಕೋರ್ಟ್ ಎದುರು ಕಾಯಕ ಮಾಡಿಕೊಂಡಿದ್ದ ಬೆರಳಚ್ಚುಗಾರ ನಿತ್ಯಾನಂದ ಅವರಿಗೆ ಕಿವಿ ಕೇಳುವುದಿಲ್ಲ. ಇದರಿಂದ ಕೆಲಸ ಮಾಡಲು ಆಗುವುದಿಲ್ಲ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿರು ವುದಾಗಿ ಡೆತ್ ನೋಟ್‌ನಲ್ಲಿ ಉಕಿಸಲಾಗಿದೆ.
ಸಾಗರದ ಕೋರ್ಟ್ ಎದುರುಭಾಗದಲ್ಲಿ ಕಳೆದ ನಲವತ್ತು ವರ್ಷಗಳಿಂದ ಬೆರಳಚ್ಚುಗಾರನಾಗಿ ಸ್ವಯಂ ಉದ್ಯೋಗ ಮಾಡಿಕೊಂಡು ಬಂದಿರುತ್ತೇನೆ. ನನ್ನ ಎರಡೂ ಕಿವಿಗಳು ನಿಶ್ಚಲಗೊಂಡು ಕಿವಿ ಕೇಳಿಸುತ್ತಿರುವುದಿಲ್ಲ. ಕಿವಿಗೆ ಚಿಕಿತ್ಸೆ ಪಡೆದರೂ ಮಿಷನ್ ಹಾಕಿ ದರೂ ಒಂದು ಕಿವಿ ಸಂಪೂರ್ಣ ಡೆಡ್ ಆಗಿದೆ. ಇನ್ನೊಂದು ಕಿವಿ ಸ್ವಲ್ಪಮಾತ್ರ ಈಗ ಕೇಳಿಸುತ್ತಿದೆ. ಇನ್ನು ಕೆಲವು ದಿನಗಳಲ್ಲಿ ನಿಶ್ಚಲವಾಗುವ ಸಂದರ್ಭ ಇದೆ. ಆದ್ದರಿಂದ ನನಗೆ ನನ್ನ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಪ್ರಯೋಜನವಿಲ್ಲದ ವ್ಯಕ್ತಿಯಾಗಿ ಬದುಕಲು ಇಷ್ಟವಿಲ್ಲ. ಆದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಬೇರೆ ಯಾರೂ ಹೊಣೆಗಾರರಲ್ಲ. ನಾನು ನನ್ನ ಸ್ವಹಸ್ತಾಕ್ಷರದಿಂದ ಸಹಿ ಮಾಡಿರುತ್ತೇನೆ. ನಾನು ಮಾನಸಿಕವಾಗಿ ನೊಂದಿದ್ದು, ಡಿಪ್ರೆಷನ್‌ಗೆ ಒಳಗಾಗಿದ್ದೇನೆ. ವೈದ್ಯರ ಸಲಹೆಯಂತೆ ಮಾತ್ರೆ ಸಹ ತೆಗೆದು ಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್‌ನಲ್ಲಿ ಬರೆಯಲಾಗಿದೆ ಎಂದು ತಿಳಿದುಬಂದಿದೆ.