ಪರಿಸರ ಕುರಿತ ಕಾಳಜಿ ಹೃದಯದಿಂದ ಬರಬೇಕು…
ಹೊನ್ನಾಳಿ: ಮದುವೆ ವಾರ್ಷಿಕೋತ್ಸವ ಹುಟ್ಟುಹಬ್ಬ ಹಾಗೂ ಇನ್ನಿತರ ಶುಭ ಸಮಾರಂಭಗಳ ಸವಿ ನೆನಪಿಗಾಗಿ ಪ್ರತಿಯೊಬ್ಬರು ಒಂದು ಸಸಿ ನೆಟ್ಟರೆ ಬೆಂಗಾಡಾಗಿರುವ ನಾಡನ್ನು ಹಸಿರು ನಾಡನ್ನಾಗಿ ಮಾಡಬಹುದು ಎಂದು ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ತರಗನಹಳ್ಳಿ ರಮೇಶ್ ಹೇಳಿದರು.
ತಾಲೂಕಿನ ಸಿಂಗಟಗೆರೆ ಹಾಗೂ ತರಗನಹಳ್ಳಿ ಸಮೀಪ ಇರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಆವರಣದಲ್ಲಿ ನಡೆದ ಪರಿಸರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಸಮಾರಂಭದ ಸವಿನೆನಪಿಗೆ ಸಾವಿರಾರು ಖರ್ಚು ಮಾಡಿ ಕಾರ್ಯಕ್ರಮಗಳನ್ನು ಮಾಡುವ ಬದಲು ಪ್ರತಿಯೊಬ್ಬರು ಸಸಿಗಳನ್ನು ನೆಟ್ಟರೆ ಪ್ರತಿಯೊಬ್ಬರು ಸಮಾಜಮುಖಿ ಕಾಳಜಿ ತರಬಹುದು ಎಂದರು.
ಪ್ರತಿವರ್ಷ ಪರಿಸರ ದಿನಾಚರಣೆ ಅಂಗವಾಗಿ ಒಂದು ಗಿಡ ನೆಟ್ಟು ಫೇಸ್ಬುಕ್ ವಾಟ್ಸಪ್ಪ್ ಸ್ಟೇಟಸ್ ಹಾಗೂ ಪತ್ರಿಕೆಗಳಲ್ಲಿ ಒಂದು ಸುದ್ದಿ ಪ್ರಚಾರ ಮಾಡಿದರೆ ಸಾಕು ಎನ್ನುವ ಸಂಕುಚಿತ ಮನೋಭಾವ ನಮ್ಮ ಸಮಾಜ ದಲ್ಲಿದೆ ಇದು ಬದಲಾಗಬೇಕು. ಪರಿಸರ ಕಾಳಜಿ ಹೃದಯದಿಂದ ಹೊರಬರಬೇಕು. ನಾವು ನೆಟ್ಟ ಒಂದು ಸಸಿಯನ್ನು ಪ್ರತಿನಿತ್ಯ ನೀರು ಹಾಕಿ ಅದರ ಪೋಷಣೆ ಮಾಡಿದರೆ ಇದು ನಿಜಕ್ಕೂ ನೀವು ಸಸಿಯನ್ನು ನೆಟ್ಟಿದ್ದಕ್ಕೂ ಸಾರ್ಥಕವಾಗುತ್ತದೆ. ಅದನ್ನು ಬಿಟ್ಟು ಬಿಟ್ಟಿ ಪ್ರಚಾರಕ್ಕೆ ನಾವು ಸಸಿ ನೆಟ್ಟರೆ ಏನು ಪ್ರಂi ಜನ ಇಲ್ಲ ಎಂದು ಪ್ರಶ್ನಿಸಿದ ವರು, ನನ್ನ ನಮ್ಮ ಕುಟುಂಬದ ಶುಭ ಸಮಾರಂಭದ ಸವಿನೆನಪಿಗೆ ಸುಮಾರು ೫೦೦ ಸಚಿಗಳನ್ನು ಇಲ್ಲಿನ ಸರ್ಕಾರಿ ಶಾಲಾ ಅವರಣ ದಲ್ಲಿ ನೆಟ್ಟು ಅದರ ಘೋಷಣೆ ಕೂಡ ಮಾಡುತ್ತಿದ್ದೇನೆ. ಇದರಿಂದ ಎ ಐನೂರು ಗಿಡಗಳು ಈಗ ಶೇ. ೫೦ರಷ್ಟು ಬೆಳೆದಿದೆ ಇನ್ನು ಎರಡು ವರ್ಷದಲ್ಲಿ ಮರವಾಗಿ ಹಣ್ಣು ಹಾಗೂ ನೆರಳನ್ನು ನೀಡು ತ್ತದೆ ನೀವು ಕೂಡ ಇಂತಹ ಸಮಾ ಜಮುಖಿ ಕಾರ್ಯದಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ವಿದ್ಯಾರ್ಥಿನಿ ಯರಿಗೆ ಕರೆ ನೀಡಿದರು.
ವಸತಿ ಶಾಲೆಯ ಪ್ರಾಚಾರ್ಯ ಶಿವಕುಮಾರ್ ಮಾತನಾಡಿ ಮನು ಷ್ಯರ ಪರಿಶುದ್ಧ ಆರೋಗ್ಯಕ್ಕೆ ಶುದ್ಧ ಗಾಳಿ ಅತಿ ಅವಶ್ಯಕ ಅಂತಹ ವಾತಾ ವರಣ ನಮ್ಮದಾಗಬೇಕಾದರೆ ನಾವೆ ಲ್ಲರೂ ಪರಿಸರ ವಿಚಾರದಲ್ಲಿ ಜ ಗೃತಿ ಮೂಡಿಸಬೇಕು ಎಂದರು.
ವೇದಿಕೆಯಲ್ಲಿ ಪರಿಸರದ ಬಗ್ಗೆ ಪುಂಕಾನುಪುಂಕವಾಗಿ ಮಾತನಾಡು ತ್ತೇವೆ ಆದರೆ ಅದರಂತೆ ಯಾರೂ ಸಹ ನಡೆದುಕೊಳ್ಳುವುದಿಲ್ಲ. ಇಂತಹ ಸಂದರ್ಭದಲ್ಲಿ ನಾವು ಪರಿಸರ ದಿನಾಚರಣೆ ಮಾಡಿದರೆ ಅದು ವ್ಯರ್ಥ ಎಂದ ಅವರು, ನಮ್ಮ ಪರಿಸರ ಜಗೃತಿ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಮೊದಲು ನಾವು ನಮ್ಮ ಸ್ಥಳದಲ್ಲಿ ತಲಾ ಒಂದು ಸಸಿ ನೆಟ್ಟು ಅದರ ಪೋಷಣೆ ಮಾಡಿದರೆ ಮಾತ್ರ ಪರಿಸರ ದಿನಾಚರಣೆ ಮಾಡಿದ್ದಕ್ಕೂ ಅರ್ಥ ಬರುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಕೂಡ ನೀವು ಸಸಿಗಳನ್ನು ನೆಟ್ಟು ಅದರ ಪೋಷಣೆ ಮಾಡಿ ನಿಮ್ಮ ನಿಮ್ಮ ಜಮೀನು ರಸ್ತೆಗಳಲ್ಲಿ ನಿಮ್ಮ ಪೋಷಕರಿಂದ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಹೊನ್ನಾಳಿ ತಾಲೂಕಿನ ಸಿಂಗಟಗೆರೆ ಹಾಗೂ ತರಗನಹಳ್ಳಿ ಸಮೀಪ ಇರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಆವರಣದಲ್ಲಿ ನಡೆದ ಪರಿಸರ ಕಾರ್ಯಕ್ರಮದಲ್ಲಿ ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಗಣ್ಯ ಮಾನ್ಯ ರು ಸಸಿಗಳನ್ನು ವಿತರಿಸುದರು.
ಈ ಸಂದರ್ಭದಲ್ಲಿ ಸಿಂಗಟಗೆರೆ ಗ್ರಾಮದ ಮುಖಂಡ ಅಣ್ಣಪ್ಪ. ಪಿಡಿಒ ಹನುಮಂತ ನಾಯಕ. ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕರಿಬಸಪ್ಪ. ವಸತಿ ಶಾಲೆಯ ಶಿಕ್ಷಕರಾದ ಸುರೇಶ್. ನಸ್ರು. ರಾಜಶೇಖರ್ ತಳವಾರ್. ಬಶೀರ್ .ಬಳೆಗಾರ. ಪ್ರದೀಪ್. ಗೀತಾ. ಹಾಗೂ ಇತರರು ಇದ್ದರು