ವಿಶ್ವ ಪರಿಸರ ದಿನಾಚರಣೆ ವನಮಹೋತ್ಸವ ನಿತ್ಯೋತ್ಸವವಾಗಲಿ..
ಶಿವಮೊಗ್ಗ: ವಿಶ್ವ ಪರಿಸರ ದಿನಾಚರಣೆ ಸಸಿ ನೆಡುವ ವನ ಮಹೋತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು ನಿತ್ಯೋತ್ಸವ ವಾಗಲಿ ಎಂದು ಕರ್ನಾಟಕ ಸಂಘದಅಧ್ಯಕ್ಷ ಎಂ.ಎನ್. ಸುಂದರರಾಜ್ ಹೇಳಿದರು.
ಪತಂಜಲಿ ಯೋಗ ಕಲಾ ಮಂದಿರದಲ್ಲಿ ಜೂ.೫ ರಿಂದ ೨೧ ರವರೆಗೆ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಮತ್ತು ಜನಪದ ಪರಿಸರ ಗೀತಾಗಾಯನ ಅಭಿಯಾನದಲ್ಲಿ ಪರಿಸರ ಪ್ರೇಮಿಗಳಿಗೆ ಸಸಿ ವಿತರಿಸಿ ಮಾತನಾಡಿದರು.
ಪ್ರಾಣಿ ಪಕ್ಷಿ ವನ ಸೇರಿದಂತೆ ನಮ್ಮ ಪರಿಸರವನ್ನು ಪ್ರೀತಿ ಮತ್ತು ಕಾಳಜಿಯಿಂದ ಉಳಿಸಿ ಮುಂದಿನ ಪೀಳಿಗೆಗೆ ನೀಡಿದರೆ ವಿಶ್ವ ಪರಿಸರ ದಿನಾಚರಣೆ ಸಾರ್ಥಕವಾಗುತ್ತದೆ. ಆದ್ದರಿಂದ ಇಂದೇ ಈ ನಿಟ್ಟಿನಲ್ಲಿ ನಾವು ಸಂಕಲ್ಪತೋಡೋಣ ಎಂದು ಕರೆ ನೀಡಿದರು.
ಪ್ರಮುಖರಾದ ಟಿ.ನಾಗರತ್ನ, ಬೆಂಕಿ ಶೇಖರಪ್ಪ, ಡಾ| ಪಿ.ಬಾಲಪ್ಪ, ಶಂಕರ್, ಎಂ.ಪೂವಯ್ಯ, ಪರಿಮಳ, ಸುಮ, ಷಣ್ಮುಖಿ ಉಷಾ, ಹೊನ್ನಾಳಿಯ ಸೌಮ್ಯ ಶ್ರೀನಿವಾಸ್, ಆಶಾ, ರಮೇಶ್, ಶೈಲಜ, ಶಿವಲಿಂಗರಾಜ ಒಡೆಯರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಂಸ್ಥೆಯ ಗೌರವಾಧ್ಯಕ್ಷ ಎಂ.ಈಶ್ವರಪ್ಪ ನವುಲೆ ಅಧ್ಯಕ್ಷತೆ ವಹಿಸಿದ್ದರು. ಕಲಾವಿದೆ ಸುಶೀಲ ಭವಾನಿಶಂಕರ್‌ರಾವ್ ಪ್ರಾರ್ಥಿಸಿ, ಪತಂಜಲಿ ಜೆ.ನಾಗರಾಜ್ ಸ್ವಾಗತಿಸಿದರು. ಕಲಾವಿದೆ ಸುಮಿತ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವಿದೆ ವಾಣಿ ನಿರೂಪಿಸಿದರು.