ವಾಲ್ಮೀಕಿ ಸಮಾಜದ ಅಧ್ಯಕ್ಷರಾಗಿ ಬೆಲೆಮಲ್ಲೂರು ಶಿವಾನಂದ
ಹೊನ್ನಾಳಿ: ತಾಲೂಕು ವಾಲ್ಮೀಕಿ ನಾಯಕ ಸಮಾಜದ ನೂತನ ಅಧ್ಯಕ್ಷರಾಗಿ ಇಂದು ಬೆಲೆಮಲ್ಲೂರು ಟಿ.ಎಂ. ಶಿವಾನಂದ ಅವರು ಅವಿರೋಧವಾಗಿ ಆಯ್ಕೆಯಾಗಿರುವರು.
ಸುಂಕದಕಟ್ಟಿ ರಸ್ತೆಯ ವಾಲ್ಮೀಕಿ ಸಮುದಾಯ ಭವನದಲ್ಲಿ ಕುಳಗಟ್ಟಿ ರಂನಾಥ್ ಅವರ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಸಮಾಜದ ಗೌರವ ಅಧ್ಯಕ್ಷ ರಾಗಿದ್ದ ಕೊಣನತಲೆ ನಾಗಪ್ಪ, ತಿಮ್ಮೇನಹಳ್ಳಿ ಚಂದಪ್ಪ, ಕುಳಗಟ್ಟಿ ಜಗದೀಶ, ಮಾರಿಕೊಪ್ಪ ತಿಮ್ಮಪ್ಪ, ಬೆಲೆಮಲ್ಲೂರು ಗಂಡುಗಲಿ ಮಂಜಪ್ಪ ಇವರ ನೇತೃತ್ವದಲ್ಲಿ ಈ ಆಯ್ಕೆ ನಡೆಯಿತು.
ನೂತನ ಪ್ರದಾನ ಕಾರ್‍ಯದರ್ಶಿ ಹೊನ್ನಾಳಿ ಹನುಮಂತ ಕೋಶಾಧ್ಯಕ್ಷ ಕುಳಗಟ್ಟಿ ಎಂಆರ್ ಹನುಮಂತಪ್ಪ, ಸಂಘಟನಾ ಕಾರ್ಯದರ್ಶಿ ಹರಳಹಳ್ಳಿ ನಾಗರಾಜ, ದಿಡಗೂರಹರಳಹಳ್ಳಿ ಮಲ್ಲಪ್ಪ ನವರು ಆಯ್ಕೆಯಾಗಿರುವರು.
ಉಪಾಧ್ಯಕ್ಷರುಗಳಾಗಿ ಕೊಣನತಲೆ ನಾಗೇಂದ್ರಪ್ಪ ಕುಂದೂರು ಕುಬೇರಪ್ಪ,ಬಲಮೂರಿ ಹಳದಪ್ಪ, ಹೊನ್ನಾಳಿ ಗಂಗಾದರ, ಸಹಕಾರ್ಯದರ್ಶಿಗಳಾಗಿ ತಿಮ್ಮೇನಹಳ್ಳಿ ರಂಗನಾಥ, ಕುಳಗಟ್ಟಿ ಡಿ ಬಿ ರಮೇಶ, ಲಿಂಗಾಪುರ ಪರಶುರಾಮ ಆಯ್ಕೆಗೊಂಡರು.