ನಾನೇ ಮುಂದೆ ನಿಂತು ಭದ್ರಾವತಿಯ ಸಮಸ್ಯೆಗಳನ್ನು ಪರಿಹರಿಸುವೆ: ಲಕ್ಷ್ಮೀ ಹೆಬ್ಬಾಳ್ಕರ್

ಭದ್ರಾವತಿ: ರಾಜ್ಯದಲ್ಲಿನ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಮತದಾರರು ಕಾಂಗ್ರೇಸ್ ಪಕ್ಷವನ್ನು ಆಡಳಿತಕ್ಕೆ ತಂದಿರುವುದು ಹೆಮ್ಮೆಯ ಸಂಗತಿ. ಬದಲಾದ ರಾಜಕಾರಣ ಜನರ ಬದಲಾವಣೆಯ ಇಚ್ಚೆಯಾ ಗಿದ್ದು ಅವರ ನಿರೀಕ್ಷೆಯಂತೆ ಆಡಳಿತ ಮಾಡುವ ಮೂಲಕ ಅವರ ಆಶಯಗಳನ್ನು ಈಡೇರಿಸಲಾಗು ವುದು. ಇರಲ್ಲಿ ಯಾವುದೆ ಅನುಮಾನ ಬೇಡ ಎಂದು ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗು ಶಾಸಕ ಸಂಗಮೇಶ್ವರ ಬೀಗರಾದ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಅವರು ಕಾಂಗ್ರೆಸ್ ಪಕ್ಷದ ವತಿಯಿಂದ ಶಾಸಕ ಬಿ.ಕೆ. ಸಂಗಮೇಶ್ವರ ಸಹೋದರ ಬಿ.ಕೆ. ಶಿವಕುಮಾರ್ ಅವರ ನಿವಾಸದ ಅವರಣದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಭೆಯಲ್ಲಿ ಭಾಗವಹಿಸಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.


ಸ್ಥಳಿಯ ಶಾಸಕ ಸಂಗಮೇಶ್ವರ ರವರು ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿರುವ ಕಾರಣ ನಾಲ್ಕನೇ ಭಾರಿಗೆ ಆರಿಸಿ ಬಂದಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಚುನಾವಣೆ ಸಮಯದಲ್ಲಿ ರಾಜ್ಯದ ನಾಯಕರುಳು ಭದ್ರಾವತಿಗೆ ಚುನಾವಣಾ ಪ್ರಚಾರಕ್ಕೆ ಬಂದಾಗ ಸಂಗಮೇಶ್ವರ ರವರನ್ನು ಗೆಲ್ಲಿಸಿಕೊಡಿ ಅವರನ್ನು ಮಂತ್ರಿಯನ್ನಾಗಿ ಮಾಡು ವುದಾಗಿ ಭೃವಸೆ ನೀಡಿದ್ದರು. ಆದರೆ ನಿರೀಕ್ಷೆಯಂತೆ ಸಚಿವ ಸ್ಥಾನ ಸಿಗದಿರುವುದಕ್ಕೆ ಯಾರೂ ಬೇಜರು ಮಾಡಿಕೊಳ್ಳಬಾರದು. ಎ ದೈವ ಇಚ್ಚೆಯಂತೆ ನಡೆಯುತ್ತದೆ. ಈ ಭಾರಿ ಇಲ್ಲದಿದ್ದೂ ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ದೊರೆ ಯುವ ಇಂಗೀತವನ್ನು ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಹೊಸ ಸರ್ಕಾರ ಆಡಳಿತಕ್ಕೆ ಬಂದಿದೆ. ಜನರ ಆಶಯ ದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ದೊರೆಯುವುದರಲ್ಲಿ ಯಾವುದೆ ಅನುಮಾನ ಇಲ್ಲ. ಅದರಂತೆ ತಮ್ಮ ಇಲಾಖೆಯಲ್ಲಿ ಸುಧಾರಣೆ ತರುವ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವಂತೆ ಕಾರ್ಯ ನಿರ್ವಹಿಸು ತ್ತೇನೆ. ಈ ಕಾರ್ಯದಲ್ಲಿ ಹಲ ವಾರು ಎಡರು ತೊಡರುಗಳು ಇದ್ದು ಅವರಲ್ಲವನ್ನೂ ದಾಟಬೇ ಕಿದೆ. ಇದರ ಜೊತೆಯುಲ್ಲಿ ಹಲ ವಾರು ಲೋಪ ದೋಷಗಳು ಇದೆ. ಅದನ್ನು ಮೊದಲು ಸರಿಪಡಿಸಬೇಕು ಎಂದರು.
ಜೀವನದಲ್ಲಿ ಎಲ್ಲವೂ ದೈವ ಇಚ್ಚೆ. ಅವನ ಇಚ್ಚೆಯಂತೆ ಎಲ್ಲವೂ ಇಲ್ಲಿ ನಡೆಯುತ್ತದೆ. ಹೀಗೆ ನಡೆಯ ಬೇಕು ಎಂದರೆ ನಡೆಯುವುದಿಲ್ಲ. ಕಾಲ ಕಾಲಕ್ಕೆ ಏನು ಆಗಬೇಕು ಎಂಬುದು ಇರುತ್ತದೆಯೋ ಅದು ಅಗೇ ಆಗುತ್ತದೆ ಎಂದು ಮಾರ್ಮಿಕ ವಾಗಿ ನುಡಿದರು. ಸಚಿವ ಸ್ಥಾನ ದೊರೆಯದಿದ್ದರೂ ತಾವು ಇಲ್ಲಿಗೂ ಸಚಿವರು ಎಂಬ ಭಾವನೆಯ ಮೇಲೆ ಕೆಲಸ ಮಾಡುವುದಾಗಿ ಪ್ರಕಟಿಸಿ ನಿಮ್ಮ ಏನೆ ಕೆಲಸ ಕಾರ್ಯ ಇದ್ದರೂ ಅದರ ಬಗ್ಗೆ ಗಮನ ಹರಿಸುವುದಾಗಿ ಭರವಸೆ ನೀಡಿದರು. ವಿಐಎಸ್ ಎಲ್ ಹಾಗು ಎಂಪಿಎಂ ಅವಳಿ ಕಾರ್ಖಾನೆಗಳ ಪುನರಾರಂಭಕ್ಕೆ ಕಟಿ ಬದ್ದರಾಗಿರುವುದಾಗಿ ಪ್ರಕಟಿಸಿದರು.


ಸೊಸೆಯ ಕಾಲ್ಗುಣ ತಂದ ಸೌಭಾಗ್ಯ: ತಮ್ಮ ಮಗನಿಗೆ ಕನ್ಯೆ ಹುಡುಕುತ್ತಿರುವ ವಿಚಾರ ಕುರಿತು ಭದ್ರಾವತಿ ಶಾಸಕ ಸಂಗಮೇಶ್ವರ ತಮ್ಮ ಬಳಿ ವಿಧಾನಸೌದಲ್ಲಿ ಪ್ರಸ್ತಾಪಿಸಿ ತಮ್ಮ ಸಹೋದರ ಮಗಳು ಡಾಕ್ಟರ್ ಆಗಿದ್ದು ತಾವು ಒಮ್ಮೆ ಬಂದು ನೋಡಿ ಎಂದು ಆಹ್ವಾನ ನೀಡಿದರು. ಇದರಲ್ಲಿ ಭದ್ರಾವತಿ ಜನ ಬಹಳ ಬುದ್ದಿವಂತರು. ಶಾಸಕರ ಆಹ್ವಾನದಂತೆ ಇಲ್ಲಗೆ ಕನ್ಯೆ ನೋಡಲು ಬಂದಾಗಲೆ ನಮ್ಮನ್ನು ಒಪ್ಪಿಗೆಗೆ ಲಾಕ್ ಮಾಡಿಬಿಟ್ಟರು. ಅವರ ಮಗಳನ್ನು ನನ್ನ ಮಗನಿಗೆ ಮದುವೆ ಮಾಡಿಕೊಂಡು ಮನೆಗೆ ಬಂದಾಗ ನಮ್ಮ ಕುಟುಂಬದ ಅದೃಷ್ಟ ಖುಲಾಯಿಸಿತು. ನನ್ನ ತಮ್ಮ ಎಂಎಲ್‌ಸಿ ಆದರು, ನಾನು ಎರಡನೆ ಭಾರಿಗೆ ಚುನಾವಣೆಯಲ್ಲಿ ಜಯಗಳಿಸಿದೆ. ಮೊಮ್ಮಗಳು ಜನಿಸಿದ ದಿನ ನಾನು ಸಚಿವಳಾದೆ ಎಂದು ತಮ್ಮ ಸಂತೋಷ ಹಂಚಿಕೊಂಡರು.
ಕಾಂಗ್ರೆಸ್ ಮುಖಂಡ ಜಿಪಂ ಮಾಜಿ ಸದಸ್ಯ ಮಣಿಶೇಖರ್ ಮಾತನಾಡಿ ರಾಜ್ಯದಲ್ಲಿ ಅಂಗನ ವಾಡಿ ಕಾರ್ಯಕರ್ತರುಗಳಿ ಸರ್ಕಾ ರದ ಯೋಜನೆಯನ್ನು ತಲುಪಿ ಸುವ ಕಾರ್ಯ ನಿರ್ವಹಿಸುತ್ತಿರು ವುದಲ್ಲದೆ. ಜನರ ಆರೋಗ್ಯದ ಬಗ್ಗೆ ಕಾಳಜಿಯನ್ನು ಹೊಂದಿರು ವವರು. ಇಂತಹ ಸೇವೆ ಮಾಡು ತ್ತಿರುವವರ ಗೌರವ ಧನವನ್ನು ಸರ್ಕಾರ ಹೆಚ್ಚಿಸಿಲ್ಲ. ಇವರ ಸೇವೆಯನ್ನು ಪರಿಗಣಿಸಿ ಸಂಭಾವನೆ ಯನ್ನು ಹೆಚ್ಚಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.


ಕಾಂಗ್ರೆಸ್ ಮುಖಂಡರು ಗಳಾದ ನಗರಸಭಾ ಸದಸ್ಯೆ ಅನು ಸುಧಾ ಮೋಹನ್, ಉಪಾಧ್ಯಕ್ಷೆ ಸರ್ವಮಂಗಳ, ಬಲ್ಕೀಶ್ ಭಾನು, ವೈ.ಹೆಚ್. ನಾಗರಾಜ್, ಸುದೀ ಪ್, ಎಂ.ಎಸ್. ಸುಧಾಮಣಿ, ಅಂತೋಣಿ ವಿಲ್ಸನ್, ರವಿ, ಹಾಗು ಪಕ್ಷದ ನಗರಸಭಾ ಸದಸ್ಯರುಗಳು ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೇವಣಪ್ಪ ಪ್ರಾರ್ಥನೆ ಮಾಡಿ ದರು. ಸೇವಾದಳದ ಕಾರ್ಯ ಕರ್ತರುಗಳು ವಂದೇ ಮಾತರಂ ಗೀತೆ ಹಾಡಿದ್ದು ವಿಶೇಷವಾಗಿತ್ತು. ಹೆಚ್.ಎಲ್. ಷಡಾಕ್ಷರಿ ಸ್ವಾಗತಿಸಿದರು. ಚಂದ್ರೇಗೌಡ ಕಾರ್ಯಕ್ರಮ ನಿರೂಪಿಸಿದರು. ಬಿ.ಕೆ.ಮೋಹನ್ ಎಲ್ಲರೀಗೂ ಧನ್ಯವಾದ ಅರ್ಪಿಸಿದರು.
ಡಿಎಸ್‌ಎಸ್ ಮುಖಂಡರು ಗಳಾದ ಎಂ.ಗುರುಮೂರ್ತಿ, ಸತ್ಯ. ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಪೀರ್ ಷರಿಫ್, ಸೇರಿದಂತೆ ಇತರರು ಅಭಿನಂದನಾ ಭಾಷಣ ಮಾಡಿದರು.