ಇತಿಹಾಸ ಸೃಷ್ಟಿಸಿದ ಸಾಗರದ ಗ್ರಾಮೀಣ ಸರ್ಕಾರಿ ಶಾಲೆಯ ಪುಟಾಣಿಗಳು…
ಸಾಗರ: ತಾಲ್ಲೂಕಿನ ಹೊನ್ನೇಸರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಜೂ.೧೮ ರಿಂದ ೨೦ ರವರೆಗೆ ಭೂಪಾಲ್‌ನಲ್ಲಿ ನಡೆಯುವ ೨೦೨೩ನೇ ಸಾಲಿನ ರಾಷ್ಟ್ರೀಯ ಯೋಗ ಒಲಂಪಿಯಾಡ್‌ಗೆ ಆಯ್ಕೆಯಾಗಿ zರೆ. ಜೂ.೩ರಂದು ಬೆಂಗಳೂರಿ ನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆ ನಡೆಸಿತ್ತು.
ಬಾಲಕಿಯರ ವಿಭಾಗದಲ್ಲಿ ೭ನೇ ತರಗತಿಯ ವಿದ್ಯಾರ್ಥಿನಿ ಆತವಾಡಿಯ ಪ್ರಶಾಂತ್ ಮತ್ತು ಸುನಂದಾ ದಂಪತಿ ಪುತ್ರಿ ಅಂಕಿತಾ ಮತ್ತು ಬಾಲಕರ ವಿಭಾಗದಲ್ಲಿ ೭ನೇ ತರಗತಿಯ ವಿದ್ಯಾರ್ಥಿ ಸಂಪೆಕೈನ ಧನಂಜಯ ಮತ್ತು ಲತಾ ದಂಪತಿ ಪುತ್ರ ಕೌಶಿಕ್ ಆಯ್ಕೆಯಾದವರು.
ಕಾನುಗೋಡಿನ ಶ್ರೀ ಗುರುಕುಲಂ ಯೋಗ ಕೇಂದ್ರದ ತಂಡ ಈ ಮಕ್ಕಳಿಗೆ ತರಬೇತಿ ನೀಡಿತ್ತು. ಇದೇ ಪ್ರಥಮ ಬಾರಿಗೆ ಗ್ರಾಮೀಣ ಸರ್ಕಾರಿ ಶಾಲೆ ಯೊಂದರ ವಿದ್ಯಾರ್ಥಿಗಳು ರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾಗಿರುವುದು ತಾಲ್ಲೂಕಿನ ಇತಿಹಾಸದಲ್ಲಿ ದಾಖಲೆ ಸೃಷ್ಟಿಸಿದಂತಾಗಿದೆ.
ಯೋಗ ಗುರು, ತರಬೇತು ದಾರ ನ್ಯಾಯವಾದಿ ಶ್ರೀಧರ ಮೂರ್ತಿ ಮಂಚಾಲೆ ಅವರು ಗುರುಕುಲಂ ಸಹಯೋಗದಲ್ಲಿ ಇವರಿಗೆ ಅಗತ್ಯ ತರಬೇತಿ ನೀಡಿದ್ದರು. ಆಯ್ಕೆ ಪ್ರಕ್ರಿಯೆಯಲ್ಲಿ ಶಿವಮೊಗ್ಗ ಜಿ ತಂಡದ ವ್ಯವಸ್ಥಾಪಕರಾಗಿ ಶಿಕ್ಷಕ ರಾಮಚಂದ್ರ ಹೆಗಡೆ ಮತ್ತು ಭವಾನಿ ಭಾಗವಹಿಸಿದ್ದರು.
ಆಯ್ಕೆಯಾದ ಮಕ್ಕಳನ್ನು ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಅಭಿನಂದಿಸಿzರೆ.