ಕಾಂಗ್ರೆಸ್‌ನಿಂದ ಸಚಿವ ಮಧು ಬಂಗಾರಪ್ಪರಿಗೆ ಭವ್ಯ ಸ್ವಾಗತ …
ಶಿವಮೊಗ್ಗ: ಶಿಕ್ಷಣ ಸಚಿವರಾಗಿ ಮೊದಲ ಬಾರಿಗೆ ಶಿವಮೊಗ್ಗಕ್ಕೆ ಆಗಮಿಸಿದ್ದ ಮಧು ಬಂಗಾರಪ್ಪ ಅವರಿಗೆ ಜಿ ಕಾಂಗ್ರೆಸ್ ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು. ನಗರದ ಎಂಆರ್‌ಎಸ್ ವೃತ್ತದಲ್ಲಿ ಮಧು ಅವರನ್ನು ಸ್ವಾಗತಿಸಿ ನೂರಾರು ಕಾರ್ಯ ಕರ್ತರು ಘೋಷಣೆ ಕೂಗಿ ಪಟಾಗಿ ಸಿಡಿಸಿ ಅನಾನಸ್ ಹಣ್ಣಿನ ಬೃಹತ್ ಹಾರ ಹಾಕಿ ಅದ್ಧೂರಿಯಾಗಿ ಅಭಿನಂದಿಸಿದರು. ನಂತರ ಎಂಆರ್‌ಎಸ್ ವೃತ್ತದಿಂದ ವಾಹನ ಹಾಗೂ ಬೈಕ್ ರ್‍ಯಾಲಿಮೂಲಕ ಮೆರವಣಿಗೆ ಯಲ್ಲಿ ಲಗಾನ್ ಮಂದಿರದವರೆಗೆ ಕರೆತರಲಾಯಿತು.
ಈ ನಡುವೆ ವಿದ್ಯಾನಗರ, ಹೊಳೆ ಬಸ್‌ಸ್ಟಾಪ್, ಹುಲಿಕೆರೆ ಶಾಂತಪ್ಪ ವೃತ್ತ, ಎಎ ವೃತ್ತ, ಸಾಗರ ರಸ್ತೆಗಳಲ್ಲಿ ಮಧು ಬಂಗಾರಪ್ಪ ಅವರನ್ನು ಅವರ ಅಭಿಮಾನಿಗಳು ಹಾರ ಹಾಕಿ ಅಭಿನಂದಿಸಿದರು.
ಲಗಾನ್ ಕಲ್ಯಾಣ ಮಂದಿರದಲ್ಲಿ ನಡೆದ ವೇದಿಕೆ ಕಾರ್‍ಯಕ್ರಮದಲ್ಲಿ ಮಧು ಬಂಗಾರಪ್ಪಗೆಹಾರ ಹಾಕಲು ನೂಕು ನುಗ್ಗಲು ಉಂಟಾಯಿತು. ಆಯೋಜಕರು ಪದೇ ಪದೇ ಮೈಕ್‌ನಲ್ಲಿ ಹೇಳುತ್ತಿದ್ದರೂ ಕೂಡ ಅಭಿಮಾನಿಗಳು ಅದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಒಟ್ಟಾರೆ ಮಧ ಬಂಗಾರಪ್ಪ ಅವರಿಗೆ ಭರ್ಜರಿ ವೆಲ್‌ಕಂ ಮಾಡಲಾಯಿತು.